ನಾಡಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ : ಸಾರ್ವಜನಿಕ ಕೆಲಸ ಕಾರ್ಯ ಕುಂಟಿತ

ಕೊರಟಗೆರೆ:

      ಗ್ರಾಮೀಣ ಪ್ರದೇಶದ ಬಡಜನತೆ ಮತ್ತು ರೈತಾಪಿವರ್ಗ ತುರ್ತು ಕೆಲಸಗಳೇ ಇಲ್ಲಿ ವಿಳಂಬ. ಮಧ್ಯವರ್ತಿ ದಳ್ಳಾಳಿಗಳ ಹಾವಳಿಯಿಂದ ತುಂಬಿ ತುಳುಕುತ್ತೀದೆ ಹೊಳವನಹಳ್ಳಿ ನಾಡಕಚೇರಿ.. ರ್ಯಾಂಕಿಂಗ್‍ನಲ್ಲಿ ಕಲ್ಪತರು ನಾಡಿಗೆ ಪ್ರಥಮ ಸ್ಥಾನದಲ್ಲಿದ್ದ ನಾಡಕಚೇರಿ ಈಗ 10 ಸ್ಥಾನಕ್ಕೆ ಇಳಿದಿದೆ. ತುಮಕೂರು ಜಿಲ್ಲಾಧಿಕಾರಿ ಮತ್ತು ಕೊರಟಗೆರೆ ತಹಶೀಲ್ದಾರ್ ನಾಡಕಚೇರಿಗೆ ತುರ್ತು ಸರ್ಜರಿ ಮಾಡಬೇಕಾದ ಅನಿವಾರ್ಯತೆ ಇದೆ.

      ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದ ನಾಡಕಚೇರಿ ಉಪತಹಶೀಲ್ದಾರ್ ಶಿವಕುಮಾರ್ ಕಾಲಘಟ್ಟದಲ್ಲಿ ತುಮಕೂರು ಜಿಲ್ಲೆಗೆ ಸತತ ಎರಡು ವರ್ಷಗಳ ಕಾಲ ಪ್ರಥಮ ಸ್ಥಾನದಲ್ಲಿದ್ದ ನಾಡಕಚೇರಿ ಖಾಯಂ ಉಪತಹಸೀಲ್ದಾರ್ ಇಲ್ಲದೇ ಈಗ 10ನೇ ಸ್ಥಾನಕ್ಕೆ ತಲುಪಿದ್ದು ಪ್ರತಿನಿತ್ಯ ಸಮಸ್ಯೆಗಳ ಆಗರವಾಗಿ ಬಡಜನತೆ ಮತ್ತು ರೈತಾಪಿವರ್ಗದ ಕೆಲಸ ಕಾರ್ಯಗಳು ಸಕಾಲದಲ್ಲಿ ನಡೆಯದೇ ವಿಳಂಬವಾಗಿದೆ.

     ಹೊಳವನಹಳ್ಳಿ ನಾಡಕಚೇರಿ ವ್ಯಾಪ್ತಿಯ 8ಗ್ರಾಪಂಯಲ್ಲಿ ಕಂದಾಯ ಮತ್ತು ಮಜರೆ ಸೇರಿ 48 ಗ್ರಾಮಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಮಾಡಿದಂತೆ 43ಯೋಜನೆಗಳ ಮಾಹಿತಿಯೇ ಅಧಿಕಾರಿಗಳಿಗೆ ಗೋತ್ತೀಲ್ಲ. ಗ್ರಾಮೀಣ ಪ್ರದೇಶದ ಜನತೆ ಸರಕಾರದ ಸವಲತ್ತು ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ವಿಧವಾ ವೇತನ, ಸಂಧ್ಯಾಸುರಕ್ಷಾ ಯೋಜನೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

      ವಿಶೇಷ ಚೇತನ ಮತ್ತು ವಯೋವೃದ್ದ ಸೇರಿದಂತೆ ಪ್ರತಿನಿತ್ಯ ನೂರಾರು ಜನ ಕಂದಾಯ ಹಾಗೂ ನಾಡಕಚೇರಿಗೆ ಬರುವ ರಸ್ತೆಯು ಕೆಸರು ಗದ್ದೆಯಾಗಿದೆ. ಜಿಪಂ, ತಾಪಂ ಅಥವಾ ಗ್ರಾಪಂಯಿಂದ ಆಗಲಿ ಯಾವುದೇ ರೀತಿಯ ತುರ್ತು ಕೆಲಸ ಆಗದಿರುವ ಪರಿಣಾಮ ಕೆಸರಿನಲ್ಲಿಯೇ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಕಂದಾಯ ಇಲಾಖೆಯ ವಿರುದ್ದ ಹಿಡಿಶಾಪ ಹಾಕುವುದು ಸಾಮಾನ್ಯವಾಗಿ ಕಂಡುಬಂದಿದೆ.

     ಸ್ವಂತ ಕಟ್ಟಡವಿಲ್ಲದ ನಾಡಕಚೇರಿ:

      ಹೊಳವನಹಳ್ಳಿ ಆರೋಗ್ಯ ಇಲಾಖೆಯ ಕಟ್ಟಡದಲ್ಲಿ 2017ರಲ್ಲಿ ಪ್ರಾರಂಭವಾದ ನಾಡಕಚೇರಿಗೆ ಇಲ್ಲಿಯವರೇಗೆ ಸ್ವಂತ ಕಟ್ಟಡವೇ ಇಲ್ಲದಾಗಿ ಈಗ ಸಂಪೂರ್ಣ ದುರಸ್ಥಿಗೆ ತಲುಪಿದೆ. ನಾಡಕಚೇರಿ ಸಮೀಪ ಕುಡಿಯುವ ನೀರು ಮತ್ತು ಶೌಚಾಲಯ ಇಲ್ಲದೇ ಸಾರ್ವಜನಿಕರು ಪರದಾಟ ನಡೆಸುತ್ತೀದ್ದಾರೆ. ದಾಬಸ್‍ಪೇಟೆ ಮತ್ತು ತುಮಕೂರು ನಗರದಿಂದ ಬರುವ ಅಧಿಕಾರಿವರ್ಗ ಕಚೇರಿಯ ಕೆಲಸ ಪ್ರಾರಂಭ ಮಾಡೋದು ತಡ ಆದರೇ ನಿಗಧಿತ ಸಮಯಕ್ಕೆ ಮುಂಚೆಯೇ ಬಾಗಿಲು ಹಾಕುವುದು ಸಾಮಾನ್ಯವಾಗಿದೆ.

(Visited 9 times, 1 visits today)

Related posts