ಗ್ರಾಮಗಳಲ್ಲಿ ಜನರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ : ವೈದ್ಯ

ಕೊರಟಗೆರೆ : 

      ಕೊರೊನ ಮಹಾಮಾರಿ ಮೊದಲು ನಗರ ಪ್ರದೇಶಗಳಲ್ಲಿ ಹೆಚ್ಚು ಕಾಣಿಸಿಕೊಂಡಿತ್ತು. ಈಗ ಗ್ರಾಮೀಣ ಭಾಗಕ್ಕೂ ಹರಡಿದೆ. ಹಳ್ಳಿಗಳಲ್ಲಿ ಸಾರ್ವಜನಿಕರು ಮಾಸ್ಕ್‍ಗಳನ್ನ ಧರಿಸದೇ ನಿರ್ಲಕ್ಷ್ಯ ಮಾಡುತ್ತಿರುವ ಕಾರಣಕ್ಕೆ ರೋಗ ಹರಡುತ್ತಿದೆ ಎಂದು ಹೊಳವನಹಳ್ಳಿ ಆಸ್ಪತ್ರೆಯ ವೈದ್ಯಡಾ.ಗಣೇಶ್ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಗ್ರಾಮದ ನಾಡಕಚೇರಿಗೆ ಬರುವ ಸಾರ್ವಜನಿಕರಿಗೆ ಕರೋನದ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ತಪಾಸಣೆ ನಡೆಸಿ ಮಾತನಾಡಿದರು.

      ಗ್ರಾಮೀಣ ಭಾಗದ ಮುಗ್ಧ ಜನರಿಗೆ ಕರೋನದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಪಂ, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳ ಜತೆ ಅನೇಕ ಇಲಾಖೆಗಳು ಸಹಕಾರ ನೀಡುತ್ತಿದ್ದು, ಸಾರ್ವಜನಿಕರು ನಿರ್ಲಕ್ಷ ಮಾಡದೆ ಪ್ರತಿಯೊಬ್ಬರು ಮಾಸ್ಕ್, ಸ್ಯಾನಿಟೈಸರ್ ಹಾಗೂ ಒಂದು ಗಂಟೆಗೊಮ್ಮೆ ಕೈ ತೊಳೆದು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಎಂದರು.

      ಹೊಳವನಹಳ್ಳಿ ನಾಡಕಚೇರಿಗೆ ಬರುವ ಸುಮಾರು 80 ಜನರಿಗೆ ತಪಾಸಣೆ ಮಾಡಲಾಗಿದೆ. ಈ ಕೋವಿಡ್ 19 ಕಾಯಿಲೆಯ ಬಗ್ಗೆ ಪ್ರತಿಯೊಬ್ಬ ಸಾರ್ವಜನಿಕರು ತಿಳಿದಿರಬೇಕು. ಗ್ರಾಮದಲ್ಲಿ ಯಾರಿಗೆ ರೋಗದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಮಾಸ್ಕ್‍ಗಳನ್ನ ಬಳಸುತ್ತಿಲ್ಲ ಇದರಿಂದ ಬೇಗ ಕಾಯಿಲೆ ಹರಡುತ್ತದೆ. ಮನೆಯಲ್ಲಿರುವ ವಯಸ್ಸಾದ ವೃದ್ಧರು, ಮಕ್ಕಳನ್ನ ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.

      ಪಿಡಿಒ ಚೆಲುವರಾಜು ಮಾತನಾಡಿ ಕರೋನ ಪರೀಕ್ಷೆ ಮಾಡಲು ಮನೆಗಳ ಹತ್ತಿರ ಬರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿಯ ಸಿಬ್ಬಂದಿಗಳು ಬಂದರೇ ಸಾರ್ವಜನಿಕರು ತಪ್ಪದೇ ತಪಾಸಣೆ ಮಾಡಿಕೊಳ್ಳಿ. ಸರ್ಕಾರ ಪ್ರತಿಯೊಂದು ಮನೆಗೂ ಬೇಟಿ ನೀಡಿ ಕೋವಿಡ್ ಪರೀಕ್ಷೆಯನ್ನ ಮಾಡುವಂತೆ ಅದೇಶ ಮಾಡಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಎಲ್ಲರೂ ತಪ್ಪದೇ ಮಾಸ್ಕ್ ಸ್ಯಾನಿಟೈಸರ್ ಬಳಸಿಕೊಂಡು ಕರೋನ ರೋಗವನ್ನ ಹರಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

      ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಕಮಲಬಾಯಿ, ವೀರೇಶ್, ನಾಗರಾಜು, ಕಂದಾಯ ಇಲಾಖೆಯ ಸಣ್ಣರಂಗಪ್ಪ, ನರಸಿಂಹಮೂರ್ತಿ, ರುಕ್ಮಣಿ, ಮೂರ್ತಿ, ಶೋಭ, ಲತಾ, ಇದ್ದರು.

(Visited 2 times, 1 visits today)

Related posts

Leave a Comment