ಮರಳು ಅಡ್ಡೆಯ ಮೇಲೆ ಪೊಲೀಸರ ದಾಳಿ : 3ಟ್ರಾಕ್ಟರ್ ಮತ್ತು 1ಜೆಸಿಬಿ ವಶ

 ಕೊರಟಗೆರೆ:

      ಖಾಸಗಿ ಜಮೀನಿನಲ್ಲಿ ಶೇಖರಣೆ ಆಗಿರುವ ಮರಳನ್ನು ಜೆಸಿಬಿ ಬಳಕೆಯಿಂದ ಟ್ರಾಕ್ಟರ್‍ನಿಂದ ಅಕ್ರಮವಾಗಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಸಾಗಾಣಿಕೆ ಮಾಡಿದ ನಂತರ ಲಾರಿ ಮೂಲಕ ಬೆಂಗಳೂರಿಗೆ ಸಾಗಿಸುವ ವೇಳೆ ಪಿಎಸ್‍ಐ ಮಂಜುನಾಥ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.

      ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಅಜ್ಜಿಹಳ್ಳಿ ಗ್ರಾಮದ ರಂಗಪ್ಪ ಎಂಬುವರ ಖಾಸಗಿ ಜಮೀನಿನಿಂದ ಅಕ್ರಮವಾಗಿ ಮಂಗಳವಾರ ಮಧ್ಯರಾತ್ರಿ ವೇಳೆ ಮರಳನ್ನು ಜೆಸಿಬಿಯ ಮೂಲಕ ಟ್ರಾಕ್ಟರ್‍ಗಳಿಗೆ ತುಂಬುತ್ತೀದ್ದ ವೇಳೆ ಸ್ಥಳದಲ್ಲಿದ್ದ 3ಟ್ರಾಕ್ಟರ್ ಮತ್ತು 1ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

      ಅಜ್ಜಿಹಳ್ಳಿ ಗ್ರಾಮದ ರಂಗಪ್ಪ ಎಂಬುವರ ಖಾಸಗಿ ಜಮೀನಿನಿಂದ ಪ್ರತಿದಿನ ಅಕ್ರಮವಾಗಿ ಮರಳನ್ನು ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಶೇಖರಣೆ ಮಾಡಿ ನಂತರ ಅದನ್ನು ಲಾರಿಯ ಮೂಲಕ ಊರ್ಡಿಗೆರೆ-ದಾಬಸ್‍ಪೇಟೆ ಮಾರ್ಗವಾಗಿ ಬೆಂಗಳೂರಿಗೆ ಸಾಗಿಸುವ ಖಚಿತ ಮಾಹಿತಿಯನ್ನು ಪಡೆದು ಕೊರಟಗೆರೆ ಪೊಲೀಸರು ದಾಳಿ ನಡೆಸಿದ್ದಾರೆ.

      ಮರಳು ಅಡ್ಡೆಯ ಮೇಲೆ ದಾಳಿ ನಡೆಸುವ ವೇಳೆ ಕೊರಟಗೆರೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಚಂದ್ರಶೇಖರ್, ಸಿದ್ದಲಿಂಗಪ್ರಸನ್ನ, ದೊಡ್ಡಲಿಂಗಯ್ಯ, ಕೃಷ್ಣಪ್ಪ ಹಾಜರಿದ್ದರು. ಜಮೀನು ಮಾಲೀಕ ರಂಗಪ್ಪ ಸೇರಿ ಜೆಸಿಬಿ ಮತ್ತು 3ಟ್ರಾಕ್ಟರ್ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 101 times, 1 visits today)

Related posts

Leave a Comment