ಕೊರಟಗೆರೆ :

     ಗ್ರಾಮೀಣ ಪ್ರದೇಶದ ರೈತರ ಬದುಕು ಉತ್ತಮವಾಗಿ ಆರ್ಥಿವಾಗಿ ಅಭಿವೃದ್ದಿ ಹೊಂದಬೇಕಾದರೆ ಸರ್ಕಾರದ ಸವಲತ್ತು ಪಡೆದು ಆದುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸಿಲ್ಕ್ ಮತ್ತು ಮಿಲ್ಕ್ ಉತ್ಪದನೆಮಾಡುವ ಮೂಲಕ ಪ್ರಗತಿ ಸಾಧಿಸುವಂತೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

      ಅವರು ಕೊರಟಗೆರೆ ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ತಾಲೂಕು ರೇಷ್ಮೆ ಇಲಾಖೆ ಏರ್ಪಡಿಸಿದ್ದ ತಾಲೂಕು ಮಟ್ಟದ ರೇಷ್ಮೆ ಕೃಷಿ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಮತ್ತು ರೈತರಿಗೆ ಸರ್ಕಾರಿ ಸವಲತ್ತು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ ರೈತರು ಹೈನುಗಾರಿಕೆ ಹಾಗೂ ದ್ವಿತಳಿ ರೇಷ್ಮೆ ಕೈಷಿಯನ್ನು ಅವಲಂಬಿಸುವ ಮೂಲಕ ರೈತರು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು, ನಮ್ಮ ರೈತರು ಬೆಳೆಯುವ ರೇಷ್ಮೆ ಪ್ರಪಂಚದಲ್ಲೆ ಉತ್ತಮ ವಾದ ರೇಷ್ಮೆಯಾಗಿದ್ದು ಬೇಡಿಕೆ ಯೊಂದಿಗೆ ಹೆಚ್ಚು ಬೆಲೆಇದೆ ಎಂದ ಅವರು ನಮ್ಮ ರೈತರು ಚೀನಾ ರೇಷ್ಮೆಗೆ ಕಡಿವಾಣ ಹಾಕಲು ಮಿಶ್ರತಳಿಯ ರೇಷ್ಮೆ ಕೃಷಿಯ ಪದ್ದತಿಯ ಕೃಷಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ದ್ವಿತಳಿಯ ರೇಷ್ಮೆ ಕೃಷಿ ಬಳಕೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನುಜಾರಿಗೆ ತಂದಿದೆ ರೈತರು ಅವುಗಳ ಪ್ರಯೋಜನೆ ಪಡೆಯಬೇಕು, ಹನಿ ನೀರಾವರಿ ಬಳಸಿ ಮರಗಡ್ಡಿ ಪದ್ದತಿಯಲಿ ಹಿಪ್ಪುನೇರಳೆ ಗಿಡಗಳನ್ನು ಬೆಳೆಯಬೇಕು ಎಂದರು.

      ಉತ್ತಮ ತಂತ್ರಜ್ಞಾನದೊಂದಿಗೆ ರೇಷ್ಮೆನೂಲು ತೆಗೆಯುವ ಯಂತ್ರಗಳು ಬಳಕೆಗೆ ಬಂದಿದ್ದು ಸರ್ಕಾರದ ರೀಯಾಯಿತಿ ಪಡೆದು ರೇಷ್ಮೆಗೂಡು ಹೆಚ್ಚಾಗಿಬೆಳೆಯುವ ಮೂಲಕ ನೂಲು ವ್ಯರ್ಥವಾಗದಂತೆ ಯಂತ್ರ ಬಳಸಿ ನೂಲುತೆಗೆಯಲು ರೈತರು ಸರ್ಕಾರ ನೂಲು ತೆಗೆಯಲು ರೈತರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದ ಅವರು ರೇಷ್ಮ ಬೆಳೆಯಿಂದ ರೈತರು ಹೆಚ್ಚು ಅದಾಯ ಬಂದು ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಬರುವ ವೇತನದಂತೆ ರೈತರಿಗೂ ರೇಷ್ಮೆ ಬೆಳೆಯಿಂದ ಪ್ರತಿ ತಿಂಗಳೂ ಆದಾಯ ಬರುತ್ತದೆ ಎಂದರು.

      ಕಾರ್ಯಕ್ರಮದಲ್ಲಿ 8 ಮಂದಿ ರೈತರಿಗೆ ಸರ್ಕಾರದ ಸವಲತ್ತು ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಪ್ರೇಮಾಮಹಾಲಿಂಗಪ್ಪ, ತಾ.ಪಂ.ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ಬಿ.ಹೆಚ್.ವೆಂಕಟಪ್ಪ, ತಾ.ಪಂ.ಸಾಮಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ಯಾಮಲರಾಮಸ್ವಾಮಿ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಹನುಮಂತೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಪ.ಪಂ.ಸದಸ್ಯ ಕೆ.ಎರ್.ಓಬಳರಾಜು, ಪ್ರಗತಿ ಪರ ರೇಷ್ಮೆ ಬೆಳೆಗಾರ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಆರ್.ಎಂ.ಈಶಪ್ರಸಾದ್, ಪ್ರಗತಿ ಪರ ರೇಷ್ಮೆ ಬೆಳೆಗಾರ ವಿ.ಪಿ.ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಜಿ.ಪಂ. ರೇಷ್ಮೆ ಕೃಷಿ ಉಪ ನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ, ಬೆಂಗಳೂರು ಸಿ.ಎಸ್.ಬಿ ವಿಜ್ಞಾನಿ ಹನುಮಂತರಾಯಪ್ಪ ಕೊರಟಗೆರೆ ರೇಷ್ಮೆ ಸಹಾಯಕ ನಿದೇರ್ಶಕ ಟಿ.ಲಕ್ಷ್ಮೀನರಸಯ್ಯ, ರೇಷ್ಮೆ ವಿಸ್ತರಣಾಧಿಕಾರಿ ರೇವಣ್ಣ, ಎ,ಎಲ್.ರವೀಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

(Visited 7 times, 1 visits today)