ತುಮಕೂರು : 

     ಸಮಾಜದ ಎಲ್ಲಾ ವರ್ಗದ ಜನರಿಗೆ ಸಕಲ ಮೂಲಭೂತ ಸೌಕರ್ಯಗಳು ಸರಿಯಾದ ಸಮಯಕ್ಕೆ ಲಭ್ಯವಾದರೆ ಅದೇ ರಾಮರಾಜ್ಯವಾಗಿ ನಿರ್ಮಾಣವಾಗುವುದೆಂದು ತುಮಕೂರು ಲೋಕಸಭಾ ಸದಸ್ಯ ಜಿ.ಬಿ.ಬಸವರಾಜು ಅವರು ತಿಳಿಸಿದರು.

      ಜಿಲ್ಲೆಯ ಗುಬ್ಬಿ ತಾಲ್ಲೂಕು ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯನ್ನು ಲೋಕಸಭಾ ಕ್ಷೇತ್ರ ಸಂಸದರ ಆದರ್ಶ ಗ್ರಾಮ ಪಂಚಾಯ್ತಿಯ ವಿಡಿಪಿ(ವೀಲೇಜ್ ಡೆವೆಲಪ್ ಮೇಂಟ್ ಪ್ಲಾನ್ ) ತಯಾರಿಕ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು 2014 ರಲ್ಲಿ ಪ್ರತಿ ಲೋಕಸಭಾ ಸದಸ್ಯರು ಗ್ರಾಮಗಳನ್ನು ಅಥವಾ ಪಂಚಾಯ್ತಿಗಳನ್ನು ದತ್ತು ತೆಗೆದುಕೊಂಡು ಆದರ್ಶ (ಮಾದರಿ) ಗ್ರಾಮಗಳನ್ನಾಗಿ ಮಾಡಿದರೆ ಗ್ರಾಮಿಣ ಭಾಗ ಅನೇಕ ಜ್ವಲಂತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಆದರ್ಶ ಗ್ರಾಮ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿರುವುದು ಶ್ಲಾಘನೀಯ ನನಗೆ 5 ಗ್ರಾಮ ಪಂಚಾಯ್ತಿಗಳನ್ನು ಆದರ್ಶ ಗ್ರಾಮ ಪಂಚಾಯ್ತಿಗಳನ್ನಾಗಿ ಮಾಡಲು ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

      ಎಲ್ಲರಿಗೂ ಉತ್ತಮವಾದ ಜೀವನ ಸಿಕ್ಕರೆ ಅವರು ನಮ್ಮನ್ನು ಜ್ಞಾಪಿಸಿಕೊಳುತ್ತಾರೆ ಮೋಸ, ವಂಚನೆಗಳು ಉಳ್ಳವರಿಂದಲೇ ನಡೆಯುತ್ತಿವೆ ಜನಪ್ರತಿನಿಧಿಗಳಾದ ನಾವುಗಳು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಸಾಮಾಜಿಕ ನ್ಯಾಯ ಒದಗಿಸುವ ಭರವಸೆಗಳನ್ನು ನೀಡಬೇಕಾಗುತ್ತದೆ ಎಂದರು.

     ಆದರ್ಶ ಗ್ರಾಮಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ನೈಮಲ್ರ್ಯ, ಶೌಚಾಲಯ, ಚರಂಡಿ, ರಸ್ತೆ, ಡಾಂಬರೀಕರಣ, ಸಿ.ಸಿ.ರಸ್ತೆ, ಸೇರಿದಂತೆ ಅನೇಕ ಸೌಲಭ್ಯಗಳನ್ನು ಶ್ರದ್ದೆಯಿಂದ ಅಧಿಕಾರಿಗಳು ನಿಡಬೇಕಾಗುತ್ತದೆ ಸಂಬಂದಪಟ್ಟ ಇಲಾಖೆಗಳು ಮೊದಲು ಗ್ರಾಮಕ್ಕೆ ಭೇಟಿ ನೀಡಿ ಸೌಲಭ್ಯಗಳ, ಕುಂದು ಕೊರತೆಗಳ, ಸರ್ವೆ ಮಾಡಿ ಯೋಜನೆಗಳನ್ನ ತಲುಪಿಸುವ ಕೆಲಸ ಮಾಡಬೇಕು ಅಗಲೇ ಆದರ್ಶ ಗ್ರಾಮಕ್ಕೆ ಬೆಲೆ ಬರುವುದು ಎಂದು ಹೇಳಿದರು.

      ತುಮಕೂರು ಜಿಲ್ಲೆಗೆ ಸುಮಾರು 600 ಟಿ.ಎಮ್.ಸಿ. ನೀರು ಬೇಕಾಗುತ್ತದೆ ಮುಂದಿನ ದಿನಮಾನಗಳಲ್ಲಿ ಪ್ರತಿ ಮನೆಗೂ ನಳದಿಂದ ನೀರು, ಊರಿಗೊಂದು ಕೆರೆ, ಇಂತಹ ಕಾರ್ಯಕ್ರಮಗಳನ್ನು ತರುತ್ತೇನೆ, ಸಮುದ್ರಕ್ಕೆ ಅನಗತ್ಯವಾಗಿ ಹರಿದು ಹೋಗುವ ನೀರನ್ನು ತಡೆದು ಕೆರೆಗಳಿಗಳಿಗೆ ಹರಿಸುವಂತಹ ನದಿ ಜೋಡಣೆ ಕಾರ್ಯಕ್ರಮದಡಿಯಲ್ಲಿ ತರಲಾಗುವುದು, ಜಿಲ್ಲೆಯ ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

     ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲೇ ಹೆಚ್.ಎ.ಎಲ್ ಸ್ಥಾಪನೆ ಮಾಡಿರುವುದು ಖುಷಿ ತಂದಿದೆ ಮುಂದಿನ ದಿನಗಳಲ್ಲಿ ಹೆಲಿಕ್ಯಾಪ್ಟರ್‍ಗಳ ತಯಾರಿಕೆ ಆರಂಭವಾಗುವುದರಿಂದ ಆದರ್ಶ ಗ್ರಾಮಗಳ ನಿರುದ್ಯೋಗಿಗಳಿಗೆ ಇಲ್ಲಿ ಕೆಲಸ ಸಿಗುವ ವಿಶ್ವಾಸವಿದೆ ಈ ಭಾಗದ ಐ.ಟಿ.ಐ, ಡಿಪ್ಲೋಮಾ ಇಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆಯಕಟ್ಟಿನ ಜಾಗದಲ್ಲಿ ಹೆಚ್.ಎ.ಎಲ್ ಸ್ಥಾಪನೆಯಾಗಿರುವುದು ಇಲ್ಲಿ ಎಲ್ಲಾ ರೀತಿಯ ಸೌಲಭ್ಯ, ರಕ್ಷಣೆ, ರಸ್ತೆ ಸಂಪರ್ಕ, ಇವೆ ಎಂಬ ಕಾರಣದಿಂದ ಇದನ್ನ ಈ ಭಾಗದ ಜನರು ಸದೋಪಯೋಗ ಪಡಿಸಿಕೊಳ್ಳಿ ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ,ಕೆ,ರಮೇಶ್ ಆದರ್ಶ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಚಟುವಟಿಕೆ ಬಹಳ ಮುಖ್ಯ “ಗ್ರಾಮದ ಅಭಿವೃದ್ಧಿ ದೇಶದ ಅಭಿವೃದ್ಧಿ’’ ಎಲ್ಲವೂ ಅಭಿವೃದ್ಧಿಯಾದಗ ಮಾತ್ರ ಗಾಂಧಿ ಕಂಡ ಕನಸು ನನಸಾಗುವುದು ಅದ್ದರಿಂದ ಅಧಿಕಾರಿಗಳು ಗ್ರಾಮಗಳಿಗೆ ಬೇಕಾದ ಮೂಲಭೂತ ಸೌಲಭ್ಯ, ಪಿಂಚಣಿ, ಶಾಲಾಭಿವೃದ್ಧಿ, ಅರಣೀಕರಣ, ಸೇರಿದಂತೆ ಎಲ್ಲಾ ಇಲಾಖೆಗಳು ತಮ್ಮ ಯೋಜನೆಗಳನ್ನ ಈ ಗ್ರಾಮಗಳಿಗೆ ಸಮಗ್ರ ಅನುಷ್ಠಾನಗೊಳಿಸುವ ವ್ಯವಸ್ಥೆ ಮಾಡಬೇಕು ಕೃಷಿಗೆ ಆದ್ಯತೆ ಕೊಟ್ಟು ಅವಶ್ಯವಿರುವ ಬೆಳಗಳ ಪುನಶ್ಚೇತನ ಮಾಡಬೇಕು ಈ ಆದರ್ಶ ಗ್ರಾಮ ಪಂಚಾಯ್ತಿಗಳಿಗೆ ಕೇಂದ್ರ-ರಾಜ್ಯ, ಸಿ.ಎಸ್.ಆರ್. ಸೇರಿದಂತೆ ವಿವಿಧ ಮೂಲಗಳಿಂದ ಹಣ ಬರುತ್ತದೆ ಅದನ್ನ ಸರಿಯಾಗಿ ಸದವಿನಿಯೋಗ ಆಗಬೇಕು ಇದಕ್ಕೆ ಅಧಿಕಾರಿಗಳು ಕೈ ಜೋಡಿಸಿದ್ದರೆ ಅದೇ ಆದರ್ಶ ಗ್ರಾಮ ಪಂಚಾಯ್ತಿಯ ಕಲ್ಪನೆ ಎಂದು ಹೇಳಿದರು.

      ದಿಶಾ ಕಮಿಟಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದ ಮೇಲೆ ಆದರ್ಶ ಗ್ರಾಮ ಪಂಚಾತಿಗಳು ನಡೆಯಬೇಕು ಇದಕೆ ಜಿಲ್ಲೆಯ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಸಿಇಓ ನೋಡೆಲ್ ಅಧಿಕಾರಿಗಳಾಗಿರುತ್ತಾರೆ ಇವರ ಪಾತ್ರ ಬಹಳ ಮಹತ್ವದಾಗಿದೆ ಪಂಚಾಯ್ತಿಯ ಪ್ರತಿಯೊಂದು ಅಭಿವೃದ್ಧಿ ಕೆಲಸವೂ ಪಾರದರ್ಶಕವಾಗಿರಬೇಕು ಆದರೆ  ಪ್ರತಿ ಪಂಚಾಯ್ತಿಯಲ್ಲೂ ನಿವೇಶನ ಸಂಬಂಧಿತ ಸಮಸ್ಯೆಗಳೇ ಜಾಸ್ತಿ ಇವೇ ಇವು ಮೊದಲು ಬಗೆಹರಿಸಿ ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಯೋಜನೆ ತಂದು ರೈತರಿಗೆ ಅನುಕೂಲ ಮಾಡಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಎಲ್ಲಾ ಯೋಜನೆಗಳನ್ನು ಸಮಗ್ರವಾಗಿ ಈ ಆದರ್ಶ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಟಾನಗೊಳಿಸಿ ಎಂದು ಹೇಳಿದರು.

      ಕೃಷಿ, ತೋಟಗಾರಿಕೆ, ಸಾಮಾಜಿಕ ಅರಣ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ನಬಾರ್ಡ್, ಕಂದಾಯ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ವ್ಯಾಪ್ತಿಯ ಯೋಜನೆಗಳನ್ನ ಆದರ್ಶ ಗ್ರಾಮ ಪಂಚಾಯ್ತಿಗಳಲ್ಲಿ ಹೇಗೆ ಬಳಕೆಯಾಗುತವೆ ಎಂಬುದನ್ನು ವಿವರವಾಗಿ ವಿವರಿಸಿದರು.

     ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಮೋಹನ್ ಕುಮಾರ್, ಗುಬ್ಬಿ ತಾಲ್ಲೂಕಿನ ತಹಶೀಲ್ದಾರ್ ಡಾ: ಪ್ರದೀಪ್ ಕುಮಾರ್ ಹೀರೆಮಠ, ಮಾರಶೆಟ್ಟಿಹಳ್ಳಿ ಗ್ರಾಂ. ಪಂ. ಅಧ್ಯಕ್ಷ ಸಿದ್ದರಾಮೇಗೌಡ, ಉಪಾಧ್ಯಕ್ಷೆ ರಾಧ ನಟರಾಜ್, ಸನ್ಮಾನಿತ ನಿವೃತ್ತ ಸೈನಿಕ ಚೆನ್ನಬಸವಯ್ಯ, ಸೇರಿದಂತೆ ಗ್ರಾಮ ಪಂಚಾಯ್ತಿಯ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಉಪಸ್ಥಿತಿ ಇದ್ದರು.

(Visited 15 times, 1 visits today)