ಕೊರಟಗೆರೆ : ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಶಾಲೆ

ಕೊರಟಗೆರೆ:

      ಈ ಸರಕಾರಿ ಶಾಲೆಯಲ್ಲಿ ಓದಿದ ಎಷ್ಟೋ ವಿಧ್ಯಾರ್ಥಿಗಳು ಇವತ್ತು ರಾಜ್ಯ ಸೇರಿದಂತೆ ಹೊರರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತೀದ್ದಾರೆ. ಅದರೆ ಇವಾಗ ಮುಖ್ಯ ಶಿಕ್ಷಕರ ನಿರ್ಲಕ್ಷದಿಂದ ಶಾಲೆಯ ಅವರಣದಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

      ಹೊಳವನಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿ ಇರುವ ಹೊಳವನಹಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಓದಿದ ಎಷ್ಟೂ ವಿಧ್ಯಾರ್ಥಿಗಳು ಇಂದು ಐಎಎಸ್ ಹಾಗೂ ಐಪಿಎಸ್‍ಯಂತ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತೀದ್ದಾರೆ. ಇಂತಹ ಶಾಲೆಯನ್ನ ಉಳಿಸಿ ಬೆಳಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ಶಾಲೆಯ ಅವಧಿ ಮುಗಿದ ನಂತರ ಶಾಲೆಯ ಮುಖ್ಯ ಶಿಕ್ಷಕರು ಗೇಟ್ ಬೀಗ ಹಾಕಿಕೊಂಡು ಹೋಗುವುದಿಲ್ಲ ಅದ್ದರಿಂದ ಸಂಜೆಯಾದ ತಕ್ಷಣ ಶಾಲೆಯ ಅವರಣದಲ್ಲಿ ಅನೈತಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ.

      ವಿಪರೀತ ಗಲೀಜು ಮಾಡಿ ಶಾಲೆಯ ವಾತವರಣ ಹಾಳು ಮಾಡವುದರಿಂದ ಯಾವ ಪೋಷಕರು ತಮ್ಮ ಮಕ್ಕಳನ್ನ ಸರಕಾರಿ ಶಾಲೆ ಕಳಿಸಲು ಇಷ್ಟ ಪಡುತ್ತಾರೆ. ಶಾಲೆಯ ಅವಧಿ ಮುಗಿಯುತ್ತೀದ್ದಂತೆ ಮಾದಕ ವ್ಯಸನಿಗಳು, ಕುಡಕರು, ಪುಂಡರ ದಂಡು ಶಾಲೆಯೊಳಗೆ ಬರುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆಯಲ್ಲಿ ಯುವಕರು ಇಲ್ಲಿಯೇ ಕುಡಿದ ಬಾಟಲಿಗಳನ್ನ ಎಸೆಯುತ್ತಾರೆ. ಇನ್ನೂ ಕಟ್ಟಡದ ಹೆಂಚು, ಕಿಟಕಿ, ಬಾಗಿಲುಗಳನ್ನ ಪೋಲಿ ಯುವಕರು ಪುಡಿಪುಡಿ ಮಾಡಿದ್ದಾರೆ.

      ಶಾಲೆಯ ಅವರಣದಲ್ಲಿ ಎಣ್ಣೆ ಬಾಟಲಿ, ಮಾದಕ ವಸ್ತುಗಳು ಹಾಗೂ ಉಪ್ಪಿನಕಾಯಿ ಪ್ಯಾಕೇಟ್‍ಗಳು ಶಾಲೆಯ ಕೊಠಡಿಯ ಮುಂದೆ ಕಣ್ಣಿಗೆ ಕಾಣಿಸುತ್ತವೆ. ಇಷ್ಟೇಲ್ಲ ಪ್ರತಿನಿತ್ಯ ನೋಡುತ್ತಿದ್ದರು ಇಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿಗಳು ನನಗೂ ಇದಕ್ಕೂ ಸಂಭಂದ ಇಲ್ಲ ಎನ್ನುವ ಹಾಗೆ ಕೆಲಸ ಮಾಡುತ್ತೀದ್ದರೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಯಿಂದ ಪೋಷಕರು ಖಾಸಗಿ ಶಾಲೆ ಕಡೆ ಮುಖ ಮಾಡುತ್ತೀರುವುದು ಇಲ್ಲಿನ ಸ್ವಚ್ಛತೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ನೀಡದೇ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ಯಾಕೆ ಮುಚ್ಚುತಾರೆ ಎಂದರೆ ಇದಕ್ಕೆ ಇರಬೇಕು ಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಕಿಡಿಗೇಡಿಗಳಿಂದ ಸಸಿಗಳು ನಾಶ:- ಶಾಲಾ ಅವರಣದಲ್ಲಿ ಮಕ್ಕಳಿಗೆ ಉತ್ತಮ ವಾತವರಣ ನಿರ್ಮಾಣ ಮಾಡುವುದಕ್ಕಾಗಿ ನೂರಕ್ಕೂ ಹೆಚ್ಚು ಸಸಿಗಳನ್ನ ನೆಡಲಾಗಿದ್ದು ಅವುಗಳಲ್ಲಿ ಕೆಲವು ಸಸಿಗಳು ಬೆಳೆದರೆ ಸುಮಾರು 30ಕ್ಕೂ ಹೆಚ್ಚು ಸಸಿಗಳು ಪೋಲಿ ಯುವಕರು ಅರ್ಥಕ್ಕೆ ಮುರಿದು ಹಾಕಿದ್ದಾರೆ. ಪ್ರತಿನಿತ್ಯ ಶಾಲೆ ಮುಗಿದ ನಂತರ ಪೋಲಿಗಳನ್ನ ತಡೆಯುವಲ್ಲಿ ಅಧಿಕಾರಿಗಳು ಸಂರ್ಪೂಣ ವಿಫಲರಾಗಿದ್ದಾರೆ.

      ಪ್ರತಿನಿತ್ಯ 20ಕ್ಕೂ ಹೆಚ್ಚು ಪೋಲಿ ಹುಡುಗರ ದಂಡು ಶಾಲೆಯ ಅವರಣದಲ್ಲಿ ರಾತ್ರಿ ಹತ್ತು ಗಂಟೆಯವರೆಗೂ ಮದ್ಯ ಸೇವನೆ, ಮಾದಕ ವಸ್ತುಗಳ ಸೇವನೆ ಹಾಗೂ ಅನೈತಿಕ ಚಟುವಟಿಕೆಗಳು ನೆಡೆಸುತ್ತೀದ್ದು, ಯಾರಾದರೂ ಕೇಳಿದರೇ ಅವರ ಮೇಲೆ ಗಲಾಟೆ ಮಾಡಿ ಕಳಿಸುತ್ತಾರೆ. ಪೊಲೀಸರು ತಕ್ಷಣ ಪ್ರತಿ ಶಾಲೆಗೂ ರಾತ್ರಿ ಸಮಯದಲ್ಲಿ ಬೇಟಿಕೊಟ್ಟು ಸರಕಾರಿ ಅಸ್ತಿಪಾಸ್ತಿಗಳನ್ನ ಉಳಿಸಬೇಕಿದೆ.

  

(Visited 89 times, 1 visits today)

Related posts

Leave a Comment