ತಂಬಾಕು ಉತ್ಪನ್ನಗಳು ನಿಷೇಧಸಲ್ಪಟ್ಟಿದ್ದರೂ ದುಪ್ಪಟ್ಟು ದರಕ್ಕೆ ಮಾರಾಟ

ಮಧುಗಿರಿ:

      ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಂಬಾಕು ಉತ್ಪನ್ನಗಳನ್ನು ನಿಷೇಶಿದ್ದರೂ ಪುರಸಭೆಯ ವ್ಯಾಪ್ತಿಯಲ್ಲಿ ಈ ಉತ್ಪನ್ನಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಪುರಸಭೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ನಗರಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎಂ.ಎಸ್.ಚಂದ್ರಶೇಖರ್‍ಬಾಬು ಒತ್ತಾಯಿಸಿದರು.

      ಪುರಸಭೆಯ ಸಭಾಂಗಣದಲ್ಲಿ ಸಭೆ ಸೇರಿದ್ದ ಎಲ್ಲ ಸದಸ್ಯರ ಪರವಾಗಿ ಈ ಒತ್ತಾಯ ಮಾಡಿದ ಇವರು, ಈ ಗುಟ್ಕಾ, ತಂಬಾಕು ಉತ್ಪನ್ನಗಳು ನಿಷೇಧಸಲ್ಪಟ್ಟಿದ್ದು ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿದೆ.

      ಅಂಗಡಿಗಳಲ್ಲಿ ದರಪಟ್ಟಿ ಹಾಕದೆ ಗ್ರಾಹಕರಿಗೆ ವಂಚಿಸುತ್ತಿದ್ದು, ದಿನಸಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದರು. ಮಟನ್ ಮಾರ್ಕೆಟ್‍ನಲ್ಲಿ ಸ್ವಚ್ಛತೆಯಿಲ್ಲ, ಸಾಮಾಜಿಕ ಅಂತರವಿಲ್ಲದೆ 700 ರೂಗೆ ಕೆಜಿ ಮಾಂಸ ಮಾರುತ್ತಿದ್ದು, ಕೇಳುವವರಿಲ್ಲವೇ ಎಂದು ಸದಸ್ಯ ಎಂ.ಆರ್.ಜಗನ್ನಾಥ್ ಅಸಮಧಾನ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯರಾದ ಗೋವಿಂದರಾಜು, ರಾಧಿಕಾ ಕೃಷ್ಣ, ಸುಜಾತ ಶಂಕರನಾರಾಯಣ್ ಸಹಮತ ವ್ಯಕ್ತಪಡಿಸಿದರು.

      ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಅಮರನಾರಾಯಣ್, ಮಾಂಸ ಕೆಜಿ 600ರೂಗೆ ನಿಗಧಿಪಡಿಸಿದ್ದು, ದುಪ್ಪಟ್ಟು ವಸೂಲಿ ಮಾಡಿದರೆ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಸಿಬ್ಬಂದಿಗಳಿಗೆ ಹಲವಾರು ಹೆಚ್ಚುವರಿ ಕೆಲಸಗಳಿದ್ದು, ಕೊಂಚ ಸಮಸ್ಯೆಯಾಗಿದೆ. ಇಂದಿನಿಂದಲೇ ಎಲ್ಲ ಕಿರಾಣಿ ಹಾಗೂ ದಿನಸಿ ಅಂಗಡಿಗಳಿಗೆ ಪರಿಶೀಲನೆಗೆ ತೆರಳಲಿದ್ದು, ಕಾನೂನು ಉಲ್ಲಂಘನೆ ಕಂಡು ಬಂದರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದರು.

      ಪರವಾನಿಗೆ ಇಲ್ಲದೇ ರಸ್ತೆಗಳನ್ನು ಆಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಿಸುತ್ತಿದ್ದರು ಪುರಸಭೆ ಕಣ್ಣುಮುಚ್ಚಿ ಕುಳಿತಿದೆ. ಕುಡಿಯುವ ನೀರು ಸರಬರಾಜು ವ್ಯತ್ಯಾಯವಾಗಿದ್ದು, ನೀರನ್ನು ಸಮರ್ಪಕವಾಗಿ ವಿತರಿಸುವಂತೆ ಮುಖಂಡ ಎಂ.ಎಸ್.ಶಂಕರನಾರಾಯಣ್ ಆರೋಪಿಸಿದರು.

      ವ್ಯಾಪಾರದ ಸಮಯ ಈಗಿನಂತೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಇದ್ದರೆ ಒಳಿತು ಕರಿಮೆ ಅವಧಿ ಮಾಡಿದರೆ ವ್ಯಾಪಾರಿಗಳು ಗ್ರಾಹಕರನ್ನು ಸುಳಿಗೆ ಮಾಡುತ್ತಾರೆಂದು ಸದಸ್ಯ ಎಂ.ಎಸ್.ಚಂದ್ರಶೇಖರಬಾಬು ತಿಳಿಸಿದರು.

      ಶಂಕಿತ ಕರೋನ ರೋಗಿಗಳನ್ನು ಕ್ವಾರಂಟೈನ್ ಮಾಡುವಾಗ ಪುರಸಭೆಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಹೃದಯ ಭಾಗದಲ್ಲಿರುವ ವಸತಿ ನಿಲಯಗಳಲ್ಲಿ ಮಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು ನಾಗರೀಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಪುರಸಭಾ ಸದಸ್ಯರುಗಳ ಒಕ್ಕೂರಳ ಆಗ್ರಹವಾಗಿದೆ.

      ಸಾರ್ವಜನಿಕ ಸ್ಥಳಗಳಲ್ಲಿ ಬಿಡಿ, ಸಿಗರೇಟು ಗುಟ್ಕಾ, ಪಾನ್ ಮಸಾಲ ಸೇವನೆ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಸೀಮಾಂದ್ರದಿಂದ ವ್ಯಕ್ತಿಗಳು ವ್ಯಾಪಾರಕ್ಕಾಗಿ ಬರುತ್ತಾರೆಂಬ ಕಾರಣವೊಡ್ಡಿ ವ್ಯಾಪಾರದ ಸಮಯವನ್ನು ಕಡಿಮೆ ಮಾಡಬೇಕೆಂದು ತಹಶೀಲ್ದಾರರಿಗೆ ಮನವಿ ಮಾಡಿರುವವರೆ ಇಲ್ಲಿಂದ ಸೀಮಾಂದ್ರಕ್ಕೆ ವ್ಯವಹಾರ ಮಾಡುತ್ತಿರುವುದು ಸರಿಯೆ ಎಂದು ಪುರಸಭೆ ಸದಸ್ಯರುಗಳ ಪ್ರಶ್ನೆಯಾಗಿತ್ತು.

      ಈ ಸಂದರ್ಭದಲ್ಲಿ ಸದಸ್ಯರಾದ ಲಾಲಪೇಟೆ ಮಂಜುನಾಥ್, ಎಂ.ವಿ.ಮಂಜುನಾಥ ಆಚಾರ್, ನರಸಿಂಹಮೂರ್ತಿ, ಕೆ.ನಾರಾಯಣ್, ಎಂ.ಎಸ್.ಚಂದ್ರಶೇಖರ್, ಅಲೀಂ, ಆನಂದಕೃಷ್ಣ, ಎಂ.ಎಸ್.ಶಂಕರನಾರಾಯಣ, ಉಮೇಶ್, ಎಂ.ವಿ.ಗೋವಿಂದರಾಜು, ಎಸ್.ಬಿ.ಟಿ.ರಾಮು, ತಿಮ್ಮರಾಜು, ಎಂ.ವಿ.ಮಂಜುನಾಥ್, ಶಕೀಲ್, ಪರಿಸರ ಅಭಿಯಂತರ ಸೌಮ್ಯ, ಆರೋಗ್ಯ ನಿರೀಕ್ಷಕ ಬಾಲಾಜಿ, ಉಮೇಶ್ ಹಾಗೂ ಇತರರಿದ್ದರು.

(Visited 8 times, 1 visits today)

Related posts