ಬೆಂಕಿಯಬಲೆ ಫಲಶೃತಿ : ಮಧುಗಿರಿಗೆ ಹರಿದಳು ಹೇಮೆ ; ಸಂತಸದಲ್ಲಿ ಜನತೆ!!

ಮಧುಗಿರಿ:

      ಮೇ.19ರಂದು ‘ಬೆಂಕಿಯಬಲೆ’ ದಿನಪತ್ರಿಕೆಯಲ್ಲಿ ‘ಮಧುಗಿರಿಯಲ್ಲಿ ಜಲಕ್ಷಾಮ, ವಾರದ ನಂತರ ಪಟ್ಟಣದಲ್ಲಿ ಕುಡಿಯುವ ನೀರು ಬಂದ್’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಿದ್ದಾಪುರ ಕೆರೆಗೆ ಹರಿಯುವ ಹೇಮೆಯ ನೀರು ಖಾಲಿಯಾಗುತ್ತಿದ್ದು, ಕೆರೆಯ ಒಡಲು ಬರಿಗಾಗುತ್ತಿದೆ. ಇನ್ನೊಂದು ವಾರ ಮಾತ್ರ ಪಟ್ಟಣದ ಜನತೆಗೆ ನೀರು ಸಿಗಲಿದ್ದು ತದ ನಂತರ ಬಂದ್ ಆಗಲಿದೆ ಎಂದು ಎಚ್ಚರಿಸಿತ್ತು. ವರದಿ ಪ್ರಕಟಗೊಂಡ .ನಂತರ ಶಾಸಕ ವೀರಭದ್ರಯ್ಯ ಸರ್ಕಾರದ ಮೇಲೆ ಒತ್ತಡ. ತಂದ ಹಿನ್ನೆಲೆಯಲ್ಲಿ ಕೆರೆಗೆ ನೀರು ಹರಿದಿದ್ದು, ಪಟ್ಟಣದ ಜನತೆ ಕುಡಿಯುವ ನೀರಿನ ಬರ ನೀಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

      ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸಿದ್ದಾಪುರ ಕೆರೆಗೆ ಸೋಮವಾರ ರಾತ್ರಿ ಎರಡನೇ ಅವಧಿಗೆ ಹೇಮೆ ಹರಿದಿದ್ದು ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

      ಇತ್ತೀಚೆಗೆ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವ ಬಗ್ಗೆ ಹಮ್ಮಿಕೊಂಡಿದ್ದ ಸಚಿವರ ಸಬೆಯಲ್ಲಿ ಭಾಗವಹಿಸಿ ಶಾಸಕ ಎಂ.ವಿ.ವೀರಭಧ್ರಯ್ಯ ರವರು ಮಧುಗಿರಿಗೆ ಎರಡನೇ ಅವಧಿಗೆ ನೀರು ಬಿಡಲು ಒತ್ತಾಯಿಸಿದ್ದರು. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಅದರಂತೆ ಸಿದ್ದಾಪುರ ಕೆರೆಗೆ ನಿನ್ನೆ ರಾತ್ರಿ ನೀರು ಹರಿದಿದ್ದು ಸಾರ್ವಜನಿಕರು ಖುಷಿಯಾಗಿದ್ದಾರೆ.

     ಸ್ಥಳಕ್ಕೆ ತಹಶೀಲ್ದಾರ್ ವಿಶ್ವನಾಥ್, ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. 

(Visited 27 times, 1 visits today)

Related posts

Leave a Comment