ಮಧುಗಿರಿ : ಗುಡಿಸಲಿಗೆ ನುಗ್ಗಿದ ನೀರು ; ಜನರ ಪರದಾಟ!!

ಮಧುಗಿರಿ:

      ಮಧುಗಿರಿ ತಾ ಪುರವರ ಹೋ ಬ್ಯಾಲ್ಯ ಗ್ರಾಮದ ನಿವೇಶನ ರಹಿತರು ಇದೇ ಗ್ರಾಮದ ಸ್ಮಶಾನ ಪಕ್ಕದಲ್ಲಿ ಸುಮಾರು 10 ತಿಂಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದು, ಈ ಬಡ ನಿರ್ಗತಿಕರು ಭೂಮಿ & ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಹಕಾರದೊಂದಿಗೆ ಕಳೆದ 2019 ನವೆಂಬರ್ ತಿಂಗಳಿಂದ ತುಮಕೂರು ಜಿಲ್ಲಾದಿಕಾರಿಗಳ ಕಛೇರಿ ಮುಂಭಾಗ 14 ದಿನಗಳ ಕಾಲ ಅಹೋರಾತ್ರಿ ದರಣಿ ಹಮ್ಮಿಕೊಂಡ ಸಮಯದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ರವರು ಇದೇ ಬ್ಯಾಲ್ಯ ಗ್ರಾಮದ ಚೌಡಮ್ಮ ದೇವಸ್ಥಾನದ ಪಕ್ಕ ಗ್ರಾಮಠಾಣ ಜಾಗದಲ್ಲಿ ನಿವೇಶನ ವಿಂಗಡಿಸಿ ನಿಯಮಾನುಸಾರ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಮಧುಗಿರಿ EO, ಬ್ಯಾಲ್ಯ ಗ್ರಾಮದ PDO ರವರಿಗೆ ನಿರ್ದೇಶನ ನೀಡಿದ್ದರು.

    EO, ಮತ್ತು PDO ರವರ ಕಾಲ ವಿಳಂಬ,ನಿರ್ಲಕ್ಷ್ಯದಿಂದ ಈ ಜಾಗವನ್ನು ಒತ್ತುವರಿ ಮಾಡಿ ತಿಪ್ಪೆ ,ಬಣವೆ ಹಾಕಿಕೊಂಡಿದ್ದ ಕೆಲವರು ನ್ಯಾಯಲಯದಲ್ಲಿ ತಡೆಯಾಜ್ಞೆ ತಂದಿರುತ್ತಾರೆ.

      ಈ ಮದ್ಯೆ ಕೋವಿಡ್-19 ಲಾಕ್ ಡೌನ್ ಪ್ರಾರಂಭವಾಗಿದ್ದು ಈ ಸಂಕಷ್ಟದಲ್ಲೂ ಈ ಬಡ ಜನ ಇದೇ ಜಾಗದಲ್ಲಿ ಗುಡಿಸಲುಗಳಲ್ಲಿ ವಾಸವಾಗಿದ್ದು, ಸಂಜೆ ಬಾರಿ ಮಳೆಯಿಂದ ಮಳೆ ನೀರು ಗುಡಿಸಲುಗಳಿಗೆ ನುಗ್ಗಿ ಇವರ ಜೀವನ ಅಸ್ತವ್ಯಸ್ತವಾಗಿರುವ ವಿಷಯ ತಿಳಿದ ಮಧುಗಿರಿ ತಹಸಿಲ್ದಾರ್ ವಿಶ್ವನಾಥ್ ರವರು ಇದೇ ರಾತ್ರಿ ಬ್ಯಾಲ್ಯ ಗ್ರಾಮದ ಗುಡಿಸಲುಗಳ ಸ್ಥಳಕ್ಕೆ ಬೇಟಿ ನೀಡಿ ಈ ಗುಡಿಸಲುಗಳಿಗೆ ಮಳೆ ನೀರು ಒಳಗೆ ಬರದಂತೆ ತಡೆಯಲು ಟಾರ್ಪಲ್ ವ್ಯವಸ್ಥೆ ಮಾಡಿರುತ್ತಾರೆ. 

       ಈ ವೇಳೆ ವಂಚಿತರು ಚೌಡಮ್ಮ ದೇವಸ್ಥಾನದ ಅತ್ತಿರ ಗ್ರಾಮಠಾಣ ಜಾಗದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಮಗೆ ನಿವೇಶನ ಕೊಡಿಸಬೇಕಾಗಿ ಮನವಿ ಮಾಡಿಕೊಂಡಿರುತ್ತಾರೆ ಈ ವೇಳೆ ತಾಲ್ಲೂಕು ಕಛೇರಿ ಸಿಬ್ಬಂದಿಗಳು ಹಾಗು ವಂಚಿತರಾದ ಜಬೀನ್ ತಾಜ್,ಹಸೀನಾ,ಗಂಗರತ್ನಮ್ಮ,ಉಮಾದೇವಿ, ಚಂದ್ರಕಲಾ ಇದ್ದರು.

(Visited 10 times, 1 visits today)

Related posts

Leave a Comment