ಮಧುಗಿರಿಗೆ ವಕ್ಕರಿಸಿದ ಮಿಡತೆಗಳು

ಮಧುಗಿರಿ:

      ಮಧುಗಿರಿ ಪಟ್ಟಣದ ಗೌರಿ ಬಿದನೂರು ರಸ್ತೆಯಲ್ಲಿರುವ ಕೆಎಸ್‍ಐಐಡಿಸಿ ಗೋಡನ್‍ಗಳ ಮುಂಭಾಗ ಇರುವ ಎಕ್ಕದ ಗಿಡಗಳಲ್ಲಿ ಮಿಡತೆಗಳು ಗುಂಪುಗಳಲ್ಲಿ ಆಕ್ರಮಿಸಿದೆ.

      ಮಿಡತೆಗಳು ಮಹಾರಾಷ್ಟ್ರದಿಂದ ಬಂದಿರಬಹುದೆಂದು ಊಹಿಸಲಾಗಿದೆ, ಕೆಎಸ್‍ಐಡಿಸಿ ವಸವತುಗಳಲ್ಲಿ ಇತ್ತೀಚೆಗೆ ಮಹಾರಾಷ್ಟ್ರದಿಂದ ಬಂದ ಗೂಡ್ಸ್ ಲಾರಿಗಳ ಮೂಲಕ ಈ ಮಿಡತೆಗಳು ಬಂದಿರಬಹುದು ಎಂದು ಶಂಕಿಸಲಾಗಿದೆ.

     ಈ ಮಿಡತೆಗಳು ಅಲ್ಲಿರುವ ಸಂಪೂರ್ಣ ಎಕ್ಕದ ಮರದ ಸುತ್ತಲೂ ಆವರಿಸಿಕೊಂಡು ಎಕ್ಕದ ಎಲೆಗಳನ್ನೆಲ್ಲ ಸಂಪೂರ್ಣ ತಿಂದುಹಾಕಿದೆ ಇನ್ನು ಕೃಷಿ ಬೆಳೆಗಳಿಗೆ ಆವರಿಸಿಕೊಂಡರೆ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ ಎಂದು ರೈತರ ಆಗ್ರಹವಾಗಿದೆ.

(Visited 4 times, 1 visits today)

Related posts