ನೀರನ್ನು ವ್ಯರ್ಥಮಾಡದೇ ಬಳಸಿ – ಶಾಸಕ ಎಂ.ವಿ. ವೀರಭದ್ರಯ್ಯ

ಮಧುಗಿರಿ :

      ಇಂದಿನ ಪರಿಸ್ಥಿತಿಯಲ್ಲಿ ಶುದ್ದ ಕುಡಿಯುವ ನೀರಿನ ಅವಶ್ಯಕತೆ ಎಲ್ಲರಿಗೂ ಅಗತ್ಯವಾಗಿದ್ದು, ಜನತೆ ನೀರನ್ನು ವ್ಯರ್ಥ ಮಾಡದೇ ಬಳಸಿಕೊಳ್ಳಬೇಕು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.

      ಪಟ್ಟಣದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಒಂದೇ ದಿನದಲ್ಲಿ 6 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ಈಗ ಒಂದು ಶುದ್ದ ಕುಡಿಯುವ ನೀರಿನ ಘಟಕ ಮಾತ್ರ ಕಾರ್ಯನಿರ್ವಹಹಿಸುತ್ತಿದ್ದು, ಇದರಿಂದ ಜನತೆಗೆ ಕುಡಿಯುವ ನೀರಿಗೆ ಬಹಳ ತೊಂದರೆಯುಂಟಾಗಿತ್ತು. ಇದನ್ನು ಮನಗಂಡು ಸರ್ಕಾರದ ವತಿಯಿಂದ ಅನುಧಾನ ಬಿಡುಗಡೆಗೊಳಿಸಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ 6 ಕಡೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜನತೆಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಲಿಂಗೇನಹಳ್ಳಿ ಮತ್ತು ರಿಲಯನ್ಸ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಹಕ್ಕುಪತ್ರ ಪಡೆದು ಕಳೆದ 40 ವರ್ಷಗಳಿಂದಲೂ ವಾಸಿಸುತ್ತಿರುವವರಿಗೆ ಮನೆ ಖಾತೆ ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದಾಗ ಕಾನೂನು ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಾಧಿಕಾರಿ ಲೋಹಿತ್‍ಗೆ ಸೂಚಿಸಿದರು.

ಎಲ್ಲೆಲ್ಲಿ ನೀರಿನ ಘಟಕ :

      ಪಟ್ಟಣದ ಕೃಷಿ ಇಲಾಖೆ ಸಮೀಪ, ಇಸ್ಲಾಂಪುರ, ಬಸವನಗುಡಿ ದೇವಸ್ಥಾನದ ಮುಂಭಾಗ, ಜಾಮಿಯಾ ಮಸೀದಿ ಮುಂಭಾಗ, 1 ನೇ ವಾರ್ಡ್ ಮತ್ತು ಲಿಂಗೇನಹಳ್ಳಿಯ ಕಾರಿಯಪ್ಪ ಬಡಾವಣೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದ್ದು, 5 ರೂಗಳ ಕಾಯನ್ ಹಾಕಿದಲ್ಲಿ 20 ಲೀ, ಶುದ್ದ ಕುಡಿಯುವ ನೀರನ್ನು ಪಡೆಯಬಹುದಾಗಿದೆ.

 

(Visited 22 times, 1 visits today)

Related posts

Leave a Comment