ಗ್ರಾಮ ಸಹಾಯಕರ ಕಷ್ಟ-ಸುಖಗಳಿಗೆ ಸ್ಪಂಧಿಸುವುದು ಎಲ್ಲರ ಕರ್ತವ್ಯ : ಆರ್.ರಾಜೇಂದ್ರ

ಮಧುಗಿರಿ:

      ಗ್ರಾಮ ಸಹಾಯಕರ ಕಷ್ಟ-ಸುಖಗಳಿಗೆ ಸ್ಪಂಧಿಸುವುದು ನಮ್ಮ ನಿಮ್ಮೆಲ್ಲಾರ ಆದ್ಯ ಕರ್ತವ್ಯವಾಗಿದೆ ಎಂದು ಕ್ರಿಬ್ಕೋ ನಿರ್ದೇಶಕ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ತಿಳಿಸಿದರು.

       ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿನ ಅವರ ಸ್ವ ಗೃಹದಲ್ಲಿ ಕೆ.ಎನ್.ಆರ್. ಹಾಗೂ ಆರ್.ಆರ್. ಅಭಿಮಾನಿ ಬಳಗದ ವತಿಯಿಂದ ತಾಲ್ಲೂಕಿನ ಹೋಬಳಿಗಳ ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗ್ರಾಮ ಸಹಾಯಕರ ಕೊಡುಗೆ ಅನನ್ಯವಾಗಿದೆ. ಗ್ರಾಮ ಸಹಾಯಕರನ್ನ ಡಿ ಗ್ರೂಫ್ ನೌಕರರೆಂದು ಪರಿಗಣಿಸ ಬೇಕೆಂದು ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಆಡಳಿತಾವಧಿಯ ವಿಧಾನ ಸಭೆಯಲ್ಲಿ ಚರ್ಚಿಸುವಲ್ಲಿ ಕೆ.ಎನ್.ರಾಜಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.

      ಕಾಲ ಕ್ರಮೇಣ ಬದಲಾದ ರಾಜಕೀಯ ಸನ್ನೀವೇಶದಿಂದಾಗಿ ಅವರ ಜ್ವಲಂತ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಮುಂದಿನ ದಿನಗಳಲ್ಲಿ ಮಾಜಿ ಶಾಸಕರ ಮುಖಾಂತರ ಹಾಗೂ ಸಂಭಂಧಪಟ್ಟ ಮೇಲಾಧಿಕಾರಿಗಳ ಬಳಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಾನವೀಯ ದೃಷ್ಟಿಯಿಂದ ಬಡವರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ಕೊರೋನ ಸೊಂಕು ಬಂದಾಗನಿಂದಲು ಕಾಂಗ್ರೆಸ್ ಪಕ್ಷದ ಸಹಯೋಗದಲ್ಲಿ ಸಂಕಷ್ಟಕ್ಕಿಡಾದ ಕ್ಷೇತ್ರದ ಜನರಿಗೆ ನೆರೆವಾಗುವ ಉದ್ದೇಶದಿಂದ ದಿನಸಿ ಕಿಟ್ ವಿತರಣೆ ಹಾಗೂ ಜನ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

      ಈ ಸಂದರ್ಭದಲ್ಲಿ ಜಿಲ್ಲಾ ಖಾಸಗಿ ಬಸ್ ಮಾಲೀಕರುಗಳ ಸಂಘದ ಕಾರ್ಯದರ್ಶಿ ಎಂ.ಎಸ್. ಶಂಕರ್ ನಾರಾಯಣ್ ಮಾತನಾಡಿ ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳ ಸಂಚಾರವು ಸ್ಥಗಿತಗೊಂಡ್ಡಿದ್ದಾಗ ಚಾಲಕ ನಿರ್ವಾಹಕ ಕ್ಲೀನರ್ ಹಾಗೂ ಏಜೆಂಟರುಗಳ ಕುಟುಂಬಗಳು ಬದುಕು ಬೀದಿಗೆ ಬಂದಿದ್ದಂತಹ ಸಂಧರ್ಭದಲ್ಲಿ ಆರ್.ಆರ್.ಅಭಿಮಾನಿ ಬಳಗದ ವತಿಯಿಂದ 1000 ದಿನಸಿ ಕಿಟ್ ವಿತರಣೆ ಮಾಡುವುದರ ಮೂಲಕ ಆ ಕುಟುಂಬಗಳಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ ಎಂದರು.

      ಪುರಸಭೆ ಸದಸ್ಯರಾದ ತಿಮ್ಮರಾಯಪ್ಪ ನವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ರಾಜಣ್ಣರವರು ಮತ್ತು ರಾಜೇಂದ್ರ ರವರು ಅಪಾರವಾದ ಕೊಡುಗೆ ನೀಡಿದ್ದು. ರಾಜಣ್ಣರವರ ಕಾಲವಧಿಯಲ್ಲಿ ಸಾವಿರಾರು ಕೋಟಿ ರೂ ಗಳ ಅನುದಾನ ತಾಲ್ಲೂಕಿಗೆ ಹರಿದು ಬಂದು ಕ್ಷೇತ್ರವು ಸರ್ವತೋಮುಖ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಮರೆಯಲಾರದ ಸಂಗತಿಗಳಾಗಿವೆ ಎಂದರು.

      ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಎನ್ ಗಂಗಣ್ಣ ಎ.ಪಿ.ಎಂ.ಸಿ ಅಧ್ಯಕ್ಷ ಡಿ.ಶ್ರೀನಿವಾಸ್, ಮಾಜಿ ಪುರಸಭಾಧ್ಯಕ್ಷ ಎಂ.ಕೆ.ನಂಜುಂಡರಾಜು, ಪುರಸಭಾ ಸದಸ್ಯರಾದ ಎಂ.ವಿ.ಗೋವಿಂದರಾಜು, ಆಲೀಂ, ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್ ಮಾಜಿ ಸದಸ್ಯರಾದ ತಲ್ಲಿ ಮಂಜುನಾಥ್, ಉಮೇಶ್, ಸಾಧಿಕ್ ಎಸ್‍ಬಿಟಿ ರಾಮು, ಆನಂದಕೃಷ್ಣ ಹಾಗೂ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಎಂ.ಆರ್.ದಯಾನಂದ್, ಮಾಜಿ ಅಧ್ಯಕ್ಷ ಪಾಲರಾಜು, ಗೌರವ ಅಧ್ಯಕ್ಷ ಸಿದ್ದಗಂಗಯ್ಯ, ಉಪಾಧ್ಯಕ್ಷ ಕೆ.ನಾರಾಯಣಪ್ಪ, ಶಿವರಾಜು ಪುಷ್ವಲತಾ, ಕಾಂತರಾಜು. ಕೃಷ್ಣನಾಯಕ್, ನರಸಯ್ಯ, ಬಿ.ನಾಗರಾಜು, ನರಸಿಂಹಮೂರ್ತಿ, ಗಂಗರಾಜು ಮತ್ತಿತರರು ಇದ್ದರು.

(Visited 12 times, 1 visits today)

Related posts