ಮಧುಗಿರಿ ಪುರಸಭೆ ಅಧ್ಯಕ್ಷ ಸ್ಥಾನ ಬಹುತೇಕ ಪರಿಶಿಷ್ಟ ಪಂಗಡಕ್ಕೆ ಖಚಿತ

ಮಧುಗಿರಿ : 

       ಇಲ್ಲಿನ ಪುರಸಭೆಗೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಸರ್ಕಾರ ಆದೇಶ ಮಾಡಿರುವುದು, 22 ವರ್ಷಗಳ ನಂತರ ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಪಂಗಡಕ್ಕೆ ಸಿಕ್ಕಿರುವುದರಿಂದ ಈ ಬಾರಿ ಆಯ್ಕೆಯಾಗಿರುವ ಪುರಸಭಾ ಸದಸ್ಯರ ಪೈಕಿ ಒಬ್ಬರೇ ಈ ಮೀಸಲಾತಿಯಿಂದ ಆಯ್ಕೆಯಾಗಿರುವುದು, ಪುರಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 

      ಪುರಸಭೆಗೆ ವಾರ್ಡುವಾರು ಪದ್ಧತಿ ಜಾರಿಯಾದ ನಂತರ ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ 1998 ರಿಂದ 2001ರವರೆವಿಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ಅಂಜಿನಪ್ಪ ಮತ್ತು ಇಂದಿರಮ್ಮ ಅಧ್ಯಕ್ಷರಾದರು. ತದನಂತರ 2020ರಲ್ಲಿ ಈ ಮೀಸಲಾತಿ ದೊರೆತಿದೆ.

       ಮಧುಗಿರಿ ಪುರಸಭೆ ಸದಸ್ಯ ಸ್ಥಾನಕ್ಕೆ 2018 ರ ಆಗಸ್ಟ್ 30 ರಂದು ಚುನಾವಣೆ ನಡೆದು, ಸೆಪ್ಟೆಂಬರ್ 3 ರಂದು ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸಿನಿಂದ ಹದಿಮೂರು, ಜೆಡಿಎಸ್ ನಿಂದ ಒಂಬತ್ತು ಹಾಗೂ ಒಬ್ಬರು ಪಕ್ಷೇತರರಾಗಿ ಆಯ್ಕೆಯಾಗಿದ್ದರು.
ನಂತರ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಒಂಬತ್ತು ಸದಸ್ಯರ ಪೈಕಿ ನಾಲ್ಕು ಸದಸ್ಯರುಗಳು ಆರು ತಿಂಗಳಾಗುವಷ್ಟರಲ್ಲೇ ಜೆಡಿಎಸ್ ಶಾಸಕರಿದ್ದರೂ ಕೂಡ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡರು. ಜೆಡಿಎಸ್ ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ತಿಮ್ಮರಾಯಪ್ಪ, ಪಾರ್ವತಮ್ಮ ಹಾಗೂ ಪಕ್ಷೇತರ ಅಭ್ಯರ್ಥಿ ಆಸಿಯಾ ಬಾನು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡ ಕಾರಣ ಪ್ರಸ್ತುತ ಪುರಸಭೆಯಲ್ಲಿ ಹದಿನೆಂಟು ಸದಸ್ಯರ ಸಂಖ್ಯಾಬಲವನ್ನು ಕಾಂಗ್ರೆಸ್ ಪಕ್ಷ ಹೊಂದಿದಂತಾಗಿದೆ.

      ನಂತರ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಒಂಬತ್ತು ಸದಸ್ಯರ ಪೈಕಿ ನಾಲ್ಕು ಸದಸ್ಯರುಗಳು ಆರು ತಿಂಗಳಾಗುವಷ್ಟರಲ್ಲೇ ಜೆಡಿಎಸ್ ಶಾಸಕರಿದ್ದರೂ ಕೂಡ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡರು. ಜೆಡಿಎಸ್ ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ತಿಮ್ಮರಾಯಪ್ಪ, ಪಾರ್ವತಮ್ಮ ಹಾಗೂ ಪಕ್ಷೇತರ ಅಭ್ಯರ್ಥಿ ಆಸಿಯಾ ಬಾನು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡ ಕಾರಣ ಪ್ರಸ್ತುತ ಪುರಸಭೆಯಲ್ಲಿ ಹದಿನೆಂಟು ಸದಸ್ಯರ ಸಂಖ್ಯಾಬಲವನ್ನು ಕಾಂಗ್ರೆಸ್ ಪಕ್ಷ ಹೊಂದಿದಂತಾಗಿದೆ.

      ಪುರಸಭಾ ಅಧ್ಯಕ್ಷ ಸ್ಥಾನದ ತಿಮ್ಮರಾಯಪ್ಪ ಅವರನ್ನು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಕಾರಣ ಹಮಾಲಿ ವೃತ್ತಿಯಿಂದ ಪ್ರಾರಂಭಗೊಂಡ ಇವರ ಜೀವನ ಮಧುಗಿರಿ ಪ್ರಥಮ ಪ್ರಜೆ ಆಗುವವರೆಗೂ ತಂದು ನಿಲ್ಲಿಸಿದ ಹಿಂದೆ ಇವರಿಗೆ ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕ, ಬಡವರ ನೋವಿಗೆ ಸದಾ ಸ್ಪಂದಿಸುವ ಗುಣ, ಆಸ್ಪತ್ರೆ-ಶುಭ ಕಾರ್ಯಗಳಿಗೆ ಹಣ ಸಹಾಯ ಮಾಡುವುದು ,ನೋವು ನಲಿವಿನಲ್ಲಿ ತನ್ನ ಕೈಲಾದ ಸಹಾಯ ಹಸ್ತ. ಎಲ್ಲರೊಂದಿಗೆ ಬೆರೆಯುವ ಗುಣ. ತಳಮಟ್ಟದಿಂದ ರಾಜಕೀಯವಾಗಿ ಹಂತ ಹಂತವಾಗಿ ಬೆಳೆದಿರುವುದರಿಂದ ಮೂರು ಬಾರಿ ಪುರಸಭಾ ಸದಸ್ಯರಾಗಿ ,ಮೂರು ಬಾರಿ ಮಧುಗಿರಿ ಟೌನ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ,ಒಮ್ಮೆ ಉಪಾಧ್ಯಕ್ಷರಾಗಿ, ಎಪಿಎಂಸಿ ಸದಸ್ಯರಾಗಿ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷರಾಗಿ ಜನಾನುರಾಗಿಯಾಗಿದ್ದಾರೆ.

      ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮೀಸಲಾತಿ ಬಗ್ಗೆ ಕಾಂಗ್ರೆಸ್ ಹಲವು ಸದಸ್ಯರುಗಳಲ್ಲಿ ಅಸಮಾಧಾನವಿದ್ದರೂ ಕೂಡ ಮಾಜಿ ಶಾಸಕ ಕೆ.ಎನ್. ರಾಜಣ್ಣನವರ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಲೇ ಬೇಕಾದ ರಾಜಕೀಯ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ರಾಜಕೀಯ ಅನುಭವ ,ಜಾತಿ ಲೆಕ್ಕಾಚಾರಗಳು ನಡೆಯಲಿದೆ. ಕಾಂಗ್ರೆಸ್ಸಿನಿಂದ ಆಯ್ಕೆಯಾಗಿರುವ ಒಂಬತ್ತು ಮಹಿಳಾ ಸದಸ್ಯರು, ಜೆಡಿ ಎಸ್ ನಿಂದ ಆಯ್ಕೆಯಾಗಿರುವ ಒಬ್ಬರು, ಪಕ್ಷೇತರರು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ.

      ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ನಾಫಿಯಾ ಬಾನು, ಪುಟ್ಟಮ್ಮ, ಗಿರಿಜಾ ,ಶಾಹೀನ ಕೌಸರ್, ಜಿ.ಎಸ್. ಶೋಭಾ ರಾಣಿ ,ಎನ್.ಬಿ. ಗಾಯಿತ್ರಿ, ಬಿ.ಎಚ್. ನಾಗಲತಾ, ಕೆ.ಎ. ರಾಧಿಕಾ ,ಜಿ.ಆರ್. ಸುಜಾತಾ ಜೆಡಿಎಸ್‍ನ ಪಾರ್ವತಮ್ಮ, ಹಾಗೂ ಪಕ್ಷೇತರ ಅಭ್ಯರ್ಥಿ ಆಸೆಯ ಬಾನು ಆಕಾಂಕ್ಷಿಗಳಾಗಿದ್ದಾರೆ.

(Visited 5 times, 1 visits today)

Related posts