ಮಧುಗಿರಿ : ಡಿ.19ರಂದು ಲೋಕ ಅದಾಲತ್ ಕಾರ್ಯಕ್ರಮ

ಮಧುಗಿರಿ:

????????????????????????????????????

      ಡಿ.19ರಂದು ಲೋಕ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಲ್ಲವಿ ತಿಳಿಸಿದರು.

      ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಕರಣಗಳು ಹೆಚ್ಚು ಕಾಲಾವಕಾಶ ತೆಗದು ಕೊಳ್ಳದೆ ಸೌಹಾರ್ದಯುತವಾಗಿ ಮುಗಿಯಬೇಕು ಕೊರೋನಾ ರೋಗದಿಂದ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು ವಕೀಲರ ಮೂಲಕವಾಗಲಿ ಹಾಗೂ ವೈಯಕ್ತಿಕವಾಗಲಿ ಬಗೆಹರಿಸಿಕೊಳ್ಳಬಹುದು ಎಂದರು.

      ಅಪಘಾತ, ವಿಮೆ ಮತ್ತು ಸ್ತ್ರೀ ಶಕ್ತಿ ಸಂಘದವರು ಬ್ಯಾಂಕುಗಳಿಂದ ಪಡೆದ ಸಾಲದ ಪ್ರಕರಣಗಳನ್ನು ಈ ಆದಾಲತ್ ಕಾರ್ಯಕ್ರಮದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

      ಅಧಿಕ ಹಿರಿಯ ಸಿವಿಲ್ ನ್ಯಾಯಾದೀಶರಾದ ಸಾಗರ್ ಗುರುಗೌಡ ಪಾಟೀಲ್, ಪ್ರಧಾನ ಸಿವಿಲ್ ನ್ಯಾಯಾದೀಶರಾದ ಅಬ್ದುಲ್ ರಹಿಮಾನ್ ಎ. ಮುಲ್ಲಾ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಎಂ. ಕಾವ್ಯಶ್ರೀ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

 

 

 

(Visited 8 times, 1 visits today)

Related posts

Leave a Comment