ಎಸ್‍ಇಪಿ/ಟಿಎಸ್‍ಪಿ ಯೋಜನೆಯಡಿ ಪುರಸಭೆಗೆ 10 ಕೋಟಿ ರೂ. ವಿಶೇಷ ಅನುದಾನ

ಮಧುಗಿರಿ:

     ಎಸ್‍ಇಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಇಲ್ಲಿನ ಪುರಸಭೆಗೆ 10 ಕೋಟಿ ರೂ. ವಿಶೇಷ ಅನುದಾನವನ್ನು ಹಂತ ಹಂತವಾಗಿ ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

     ಬುಧವಾರ ಪುರಸಭೆ ಆವರಣದಲ್ಲಿರುವ ಮಾಲೀಮರಿಯಪ್ಪ ರಂಗಮಂದಿರದಲ್ಲಿ 2018-19ನೇ ಸಾಲಿನ ವಿಕಲಚೇತನರಿಗೆ ತ್ರಿಚಕ್ರವಾಹನ ವಿತರಣೆ ಹಾಗೂ ಜೀವ ವಿಮಾ ಬಾಂಡುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು, ಪುರಸಭಾ ಅಧ್ಯಕ್ಷ ತಿಮ್ಮರಾಜು & ಸದಸ್ಯರುಗಳು 10 ಕೋಟಿ ರೂ. ಬಿಡುಗಡೆ ಎಸ್‍ಎಫ್‍ಸಿ ಯೋಜನೆಯಡಿ 3 ಕೋಟಿ ರೂ. ಬಿಡುಗಡೆಯಾಗಿ ಅಭಿವೃದ್ದಿ ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಪ್ರಕ್ರಿಯೇ ಪೂರ್ಣಗೊಂಡ ನಂತರ ಸರ್ಕಾರ ಹಣವನ್ನು ವಾಪಸ್ ಪಡೆದಿದ್ದು, ಈ ಹಣವನ್ನು ಬಿಡುಗಡೆ ಮಾಡಿಸುವಂತೆ ಮಾಡಿದ ಮನವಿಗೆ, ಸದಸ್ಯರುಗಳು ಅಭಿವೃದ್ದಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ ಒಗ್ಗಟ್ಟಾಗಿರಿ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಿ ಎಂದು ಶಾಸಕ ಎಂ.ವಿ.ವಿ ಕಿವಿ ಮಾತು ಹೇಳಿ, ಎಸ್‍ಇಪಿ ಟಿಎಸ್‍ಪಿ ಯೋಜನೆಯ ಕಾಮಗಾರಿಗಳನ್ನು 23 ವಾರ್ಡ್‍ಗಳಲ್ಲೂ ಗುರುತಿಸಿ ಕ್ರಿಯಾ ಯೋಜನೆ ತಯಾರಿಸಿ ನನಗೆ ಕೊಡಿ ಏಪ್ರಿಲ್ ನಂತರ ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

      ಎಸ್.ಎಫ್.ಸಿ.ಯ 3 ಕೋಟಿ ರೂ ಬಿಡುಗಡೆ ಬಗ್ಗೆ ಸಚಿವ ನಾರಾಯಣಗೌಡರೊಂದಿಗೆ ಮಾತನಾಡಿದ್ದು, ಅತಿ ಶೀಘ್ರವಾಗಿ ಹಣ ಬಿಡುಗಡೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದರು.

      ಮಧುಗಿರಿಯು ಬ್ರಿಟಿಷ್ & ಮಹಾರಾಜರ ಕಾಲದಲ್ಲೇ ಉಪವಿಭಾಗ ಕೇಂದ್ರವಾಗಿ ಡಾ.ಮಾಸ್ತಿವೆಂಕಟೇಶ್‍ಅಯ್ಯಂಗಾರ್ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಬೆಂಗಳೂರಿಗೆ ಸನಿಹದಲ್ಲಿದ್ದರೂ ಕೂಡ ಯಾವುದೇ ಕೈಗಾರಿಗಳಿಲ್ಲದ ಕಾರಣ ಅಭಿವೃದ್ದಿಯಿಂದ ವಂಚಿತವಾಗಿದೆ.

      ತುಮಕೂರು & ಬೆಳಗಾಂ ಅತಿ ದೊಡ್ಡ ಜಿಲ್ಲೆಗಳಾಗಿದ್ದು ರಾಜ್ಯದಲ್ಲಿ 3-4 ತಾಲ್ಲೂಕುಗಳನ್ನು ಒಳಗೊಂಡಂತೆ ಜಿಲ್ಲೆಗಳು ರಚನೆಯಾಗಿದೆ. ಮಧುಗಿರಿಯನ್ನು ಜಿಲ್ಲೆಯನ್ನಾಗಿಸಲು ಸದನದಲ್ಲೇ ವಿಶೇಷ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಸತತವಾಗಿ ಪ್ರಯತ್ನ ಮಾಡುತ್ತೇನೆ. ಮಧುಗಿರಿ ಜಿಲ್ಲೆ ಆಗುವುದರಿಂದ ಸರ್ಕಾರ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಿಸಬಹುದು & ಆಡಳಿತ ಚುರುಕುಗೊಳ್ಳುತ್ತದೆ ಎಂದರು.

      ವಿಕಲ ಚೇತನರಿಗೆ ಅನುಕಂಪ ಬೇಡ ಪ್ರೀತಿ, ಗೌರವ & ವಿಶ್ವಾಸದಿಂದ ಕಾಣಬೇಕು ಸರ್ಕಾರದ ಸವಲತ್ತುಗಳು ಕಾಲ ಕಾಲಕ್ಕೆ ಅವರಿಗೆ ದೊರಕುವಂತೆ ಮಾಡುವುದರ ಮೂಲಕ ಅವರಲ್ಲಿ ಎಲ್ಲಾ ಜನರಂತೆ ಬದುಕಿ ಬಾಳಬೇಕೆಂಬ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರವರ ಆಡಳಿತಾವಧಿ ಸಂದರ್ಭದಲ್ಲಿ ಪಿಂಚಣಿಯನ್ನು ಹೆಚ್ಚಿಸಿದ್ದನ್ನು ಸ್ಮರಿಸಬೇಕು ಎಂದರು.

      ಪುರಸಭೆ ಸದಸ್ಯ ಎಂ.ಎಸ್.ಚಂದ್ರಶೇಖರ್ ಮಾತನಾಡಿ, ಸಿಪಿಐ ಎಂ.ಎಸ್ ಸರ್ದಾರ್ ಅವರು ಪ್ರಮುಖ ವೃತ್ತಗಳನ್ನು ಅಪಘಾತರಹಿತ ವೃತ್ತಗಳನ್ನಾಗಿಸುವಂತೆ ಕ್ರಮವನ್ನು ಸ್ವತಃ ತೆಗೆದುಕೊಂಡಿರುವುದುನ್ನು ಕೊಂಡಾಡಿ ಜನರ ಪರವಾಗಿ ಅಭಿನಂದಿಸಿದರು.

      ಪುರಸಭೆ ಅಧ್ಯಕ್ಷ ತಿಮ್ಮರಾಜು, ಉಪಾಧ್ಯಕ್ಷೆ ರಾಧಿಕಾಆನಂದಕೃಷ್ಣ, ಸದಸ್ಯರುಗಳಾದ ಎಂ.ಆರ್.ಜಗನ್ನಾಥ್, ಚಂದ್ರಶೇಖರಬಾಬು, ಸುಜಾತ ಶಂಕರ್‍ನಾರಾಯಣ್, ಕೆ.ನಾರಾಯಣ್, ಎಂ.ಎಲ್.ಗಂಗರಾಜು, ನರಸಿಂಹಮೂರ್ತಿ, ಎಂ.ವಿ.ಗೋವಿಂದರಾಜು, ಅಲ್ಲೀಂ ಉಲ್ಲಾ, ಸಿಪಿಐ ಎಂ.ಎಸ್.ಸರ್ದಾರ್, ಮುಖಂಡರುಗಳಾದ ಎಂ.ಎಸ್.ಶಂಕರನಾರಾಯಣ್, ಶಜು, ಆನಂದಕೃಷ್ಣ, ಕಿಶೋರ್ ಎಂ.ವಿ, ಮಂಜುನಾಥ್, ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ಡೈರಿ ತಿಮ್ಮಣ್ಣ, ಚೀಫ್ ಆಫೀಸರ್ ಅಮರ್‍ನಾರಾಯಣ್, ವ್ಯವಸ್ಥಾಪಕಿ ವಸಂತಕುಮಾರಿ, ವರಲಕ್ಷ್ಮಮ್ಮ ಸ್ವಾಗತಿಸಿ ವಂದಿಸಿದರು.

(Visited 63 times, 1 visits today)

Related posts

Leave a Comment