ಮಧುಗಿರಿ : ನೆಪಮಾತ್ರಕ್ಕೆ ಅಳವಡಿಸಿದಂತಿದೆ ಹೈಮಾಸ್ಟ್ ದೀಪ

ಮಧುಗಿರಿ:

      ಪಟ್ಟಣದಲ್ಲಿ ವಾರದ ಸಂತೆ ನಡೆಯುವ ಲಾಲ್ ಬಹುದ್ದರ್ ಶಾಸ್ತ್ರಿ ಮೈದಾನದಲ್ಲಿ ಪುರಸಭೆ ವತಿಯಿಂದ ಅಳವಡಿಸಿರುವ ಹೈಮಾಸ್ಟ್ ದೀಪ ಉರಿಯದೆ ನೆಪಮಾತ್ರಕ್ಕೆ ಅಳವಡಿಸಿದಂತೆ ಕಾಣುತ್ತಿದೆ.

      ಪ್ರತಿ ಬುಧವಾರದಂದು ನಡೆಯುವ ಸಂತೆಯಲ್ಲಿ ಹೂವು ಹಣ್ಣು ತರಕಾರಿ ದಿನಬಳಕೆ ವಸ್ತುಗಳು ಮಾರಾಟ ನಡೆಯುತ್ತದೆ. ಸಂತೆ ಮೈದಾನದ ಮಧ್ಯಭಾಗದಲ್ಲಿ ಹೈಮಾಸ್ ದೀಪ ಅಳವಡಿಸಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಇಲ್ಲಿವರೆಗೂ ಉರಿದಿರುವ ಉದಾಹರಣೆಗಳೇ ಇಲ್ಲ ದಂತಾಗಿದೆ.

     ಸಂತೆಯಲ್ಲಿ ತರಕಾರಿ ಕೊಳ್ಳಲು ಬಹುತೇಕ ಮಹಿಳೆಯರು ಆಗಮಿಸುವುದನ್ನು ಕಾಣಬಹುದಾಗಿದೆ. ಕತ್ತಲಿನಲ್ಲೇ ವ್ಯಾಪಾರ ಮಾಡಲು ಅಸಾಧ್ಯವಾಗಿದೆ.

      ಪುರಸಭೆಗೆ ಲಕ್ಷಾಂತರ ರೂ ಆದಾಯ ನೀಡುವ ಸಂತೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಬಯಲೇ ಶೌಚಾಲಯವಾಗಿದೆ ,ಈ ಮೈದಾನ ಮುಂಚೆ ರಾಷ್ಟ್ರೀಯ ಹಬ್ಬಗಳ ಆಚರಣೆ ನಡೆಯುತ್ತಿತ್ತು. ಇಂದಿಗೂ ರಾಷ್ಟ್ರಧ್ವಜ ನಾಡಧ್ವಜ ಹಾರಿಸುವ ಧ್ವಜಸ್ತಂಭ ಇದೆ. ರಾತ್ರಿಯ ವೇಳೆಯಲ್ಲಿ ಬೆಳಕು ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಮೈದಾನದ ಸುತ್ತಮುತ್ತ ವಾಸಿಸುವ ಜನರಿಗೆ ಸಾಕಷ್ಟು ತೊಂದರೆಗಳಾಗುತ್ತಿದ್ದು. ಪಿಕ್ ಪಾಕೆಟರ್ಗಳಿಗಂತೂ ಸುಗ್ಗಿಯಾಗಿದೆ. ವ್ಯಾಯಾಮ ಶಾಲೆ- ಯೋಗ ಮಂದಿರಗಳ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ .ಇಲ್ಲಿ ನಿರ್ಮಿಸಿರುವ ಬಯಲು ಮಂದಿರ ಸೋಮಾರಿಗಳ ತಾಣವಾಗಿದೆ.
ಸಮೀಪದಲ್ಲಿ ಚಿತ್ರಮಂದಿರ, ಪೆÇೀಸ್ಟಾಪೀಸ್, ಮಾಸ್ತಿ ವೆಂಕಟೇಶಯ್ಯಂಗಾರ್ ವೃತ್ತದಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಈ ಮಾರ್ಗದಲ್ಲೇ ಹೋಗಬೇಕಾಗಿದೆ. ಈ ಹೈಮಾಸ್ಟ್ ದೀಪ ಉರಿದರೆ ಸುತ್ತಮುತ್ತಲಿನ ಪುರಸಭೆ ಕಚೇರಿಯು ಸಹಿತ ಜಗಜಗ ಮಗಿಸುತ್ತದೆಂದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

      ಈ ಸಮಸ್ಯೆ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ್ ಇಲ್ಲಿಯವರೆಗೂ ನಮಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ , ಸಂಬಂಧಪಟ್ಟ ಜೆಇಗೆ ತಿಳಿಸುವುದಾಗಿ ಹೇಳಿದ್ದಾರೆ.

(Visited 6 times, 1 visits today)

Related posts

Leave a Comment