ಬಜೆಟ್ ಕುರಿತು ಚರ್ಚಿಸಲು ಸಾರ್ವಜನಿಕರಿಂದ ಸಲಹೆಗೆ ಚಿದಾನಂದ ಗೌಡ ಮನವಿ

ಮಧುಗಿರಿ:

      2021-22ನೇ ಸಾಲಿನ ಆಯವ್ಯಯ ( ಬಜೆಟ್ ) ಕುರಿತು ಮೇಲ್ಮನೆಯಲ್ಲಿ ಚರ್ಚಿಸಲು ಸಾರ್ವಜನಿಕರಿಂದ ಸಲಹೆ ಸೂಚನೆ ನೀಡುವಂತೆ ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

     2021-22ನೇ ಸಾಲಿನ ಆಯವ್ಯಯ ( ಬಜೆಟ್ ) ಮೇಲಿನ ಚರ್ಚೆಯು ಮೇಲ್ಮನೆಯಲ್ಲಿ ನಡೆಯುತ್ತಿದ್ದು ಶಿರಾ ತಾಲ್ಲೂಕು ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಶಾಸಕನಾದ ನಾನು , ನನ್ನ ಕ್ಷೇತ್ರದ ಕುಂದು ಕೊರತೆಗಳನ್ನು ಗುರುತಿಸಿ , ಸರ್ಕಾರದ ಗಮನಕ್ಕೆ ತರುವುದು ನನ್ನ ಜವಾಬ್ದಾರಿ , ಆದ್ದರಿಂದ ಈ ಭಾಗದ ಶಿಕ್ಷಣ , ಕೃಷಿ , ಆರೋಗ್ಯ , ನಿರುದ್ಯೋಗ , ನೀರಾವರಿ , ಪಡಿತರ ಚೀಟಿ , ತೋಟಗಾರಿಕೆ , ವಸತಿ , ಪಶುಸಂಗೋಪನೆ , ಅರಣ್ಯ ಹಾಗೂ ಕಛೇರಿಗಳಲ್ಲಿನ ಭ್ರಷ್ಟಾಗೆಚಾರ , ಅಧಿಕಾರಿಗಳ ಬೇಜವಾಬ್ದಾರಿತನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅನುಕೂಲವಾಗುವಂತೆ ಈ ಕ್ಷೇತ್ರದ ಸಾರ್ವಜನಿಕರೊಂದಿಗೆ ಹಾಗೂ ಸಂಘ ಸಂಸ್ಥೆಗಳೊಂದಿಗೆ ಮಾಹಿತಿ ಸಂಗ್ರಹಿಸಲು ಬಯಸಿದ್ದು , ಈ ಸಂಬಂಧ ಮಾರ್ಚ್21ರ ಭಾನುವಾರ ಬೆಳಗ್ಗೆ 11.00 ರಿಂದ 2.00 ಘಂಟೆಯವರೆಗೆ ಶಿರಾ ನಗರದ ಪ್ರವಾಸಿಮಂದಿರದಲ್ಲಿ ಸಭೆ ಸೇರಲು ನಿರ್ಧರಿಸಿದ್ದು ಆಸಕ್ತರು ಭಾಗವಹಿಸಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಲಿಖಿತ ರೂಪದಲ್ಲಿ ನೀಡಲು ಕೋರಲಾಗಿದೆ . ಸಭೆಗೆ ಹಾಜರಾಗದಿರುವವರು ನನ್ನ ಮೊಬೈಲ್ ಸಂಖ್ಯೆ 9611666801 ಗೆ ಕರೆ ಮಾಡಿ ಅಥವಾ ವಾಟ್ಸಾಪ್ ಸಂದೇಶ ಕಳುಹಿಸುವುದರ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕೋರಿದ್ದಾರೆ.

 

(Visited 5 times, 1 visits today)

Related posts

Leave a Comment