ಮಧುಗಿರಿ : ಶವ ಸಂಸ್ಕಾರದ ವೇಳೆ 2 ಗ್ರಾಮಗಳ ಮಧ್ಯೆ ಘರ್ಷಣೆ

ಮಧುಗಿರಿ:

     ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದ ಗ್ರಾಪಂ ಕಾರ್ಯದರ್ಶಿ ಶವ ಸಂಸ್ಕಾರದ ಸ್ಥಳ ನಿಗದಿಗಾಗಿ 2 ಗ್ರಾಮಗಳ ಗ್ರಾಮಸ್ಥರ ನಡುವೆ ನಡೆದ ಘರ್ಷಣೆ ಕಂದಾಯ ಇಲಾಖೆ, ಪೆÇಲೀಸರು, ಮಾದಿಗ ದಂಡೋರ ಸಮಿತಿ ಹಾಗೂ ಗ್ರಾಪಂ ಅಧಿಕಾರಿಗಳ ಸಂಧಾನದಿಂದ ಅಂತಿಮ ಕಾರ್ಯ ಸುಗಮವಾಗಿ ನಡೆಯಿತು.

ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರ ಗ್ರಾಪಂ ಕಾರ್ಯದರ್ಶಿ ನರಸಪ್ಪ (55) ಶುಕ್ರವಾರದಂದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಗ್ಗೆ 8ರ ಸಮಯದಲ್ಲಿ ಮೃತಪಟ್ಟಿದ್ದರು. ಶುಕ್ರವಾರವಾಗಿದ್ದರಿಂದ ಶವಸಂಸ್ಕಾರ ಮಾಡಿರಲಿಲ್ಲ. ಇವರು ಮಧುಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವರಾಗಿದ್ದು ಬಸವನಲ್ಲಿ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶವ ಸಂಸ್ಕಾರ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ದೇವಸ್ಥಾನದ ಟ್ರಸ್ಟ್‍ನವರು ಶವಸಂಸ್ಕಾರಕ್ಕೆ ಅನುಮತಿ ನಿರಾಕರಿಸಿದರು.

ನಂತರ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 48 ರಲ್ಲಿ ಜಿಲ್ಲಾಧಿಕಾರಿಗಳು ಇಪ್ಪತ್ತು ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದ್ದ ಸ್ಥಳಕ್ಕೆ ಶವವನ್ನು ಶನಿವಾರ ಬೆಳಿಗ್ಗೆ ತಂದರು. ಮೃತಪಟ್ಟವ ದಲಿತನಾಗಿದ್ದು, ಬಸವನಹಳ್ಳಿ ಗ್ರಾಮದವರು, ಇಲ್ಲಿ ಶವಸಂಸ್ಕಾರ ಮಾಡಬಾರದೆಂದು ವಡೇರಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದರು. ಆಗ ಕೇಲ ಸಮಯ ಬೀಗುವಿನ ವಾತಾವರಣ ಸೃಷ್ಟಿಯಾಯಿತು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸ್ಟೇಲ್ಲಾ ವರ್ಗೀಸ್, ಸಿಪಿಐ ಎಂ.ಎಸ್ ಸರ್ದಾರ್, ಸಿದ್ಧಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌಡಪ್ಪ, ಪಿಎಸ್‍ಐ ಮಂಗಳ ಗೌರಮ್ಮ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಸಿದ್ಧಾಪುರ ರಂಗಶಾಮಣ್ಣ, ರೆವಿನ್ಯೂ ಇನ್ಸ್‍ಪೆಕ್ಟರ್, ಗ್ರಾಮ ಲೆಕ್ಕಿಗ ಮತ್ತು ಪೆÇೀಲಿಸರು ವಡೇರಹಳ್ಳಿ ಗ್ರಾಮಸ್ಥರಿಗೆ ಈ ಸ್ಮಶಾನ ಜಾಗವೂ ವಡೇರಹಳ್ಳಿ -ಬಸವನಹಳ್ಳಿಯ ಎರಡೂ ಗ್ರಾಮದವರು ಉಪಯೋಗಿಸಬಹುದೆಂದು ಮತ್ತು ಪಹಣಿಯಲ್ಲಿ ಎರಡೂ ಗ್ರಾಮ ದವರು ಉಪಯೋಗಕ್ಕೆಂದು ನಮೂದಾ ಗಿರುವುದನ್ನು ತೋರಿಸಿದ ನಂತರ ಶವ ಸಂಸ್ಕಾರ ಸುಸೂತ್ರವಾಗಿ ನಡೆಯಿತು.

(Visited 5 times, 1 visits today)

Related posts

Leave a Comment