ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರ ಸಾವು

 ಮಧುಗಿರಿ :

      ದ್ವಿಚಕ್ರ ವಾಹನ ಮತ್ತು ಖಾಸಗಿ ಪ್ರವಾಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ ಸ್ಥಳದಲ್ಲೆ ಮೃತ ಪಟ್ಟ ಘಟನೆ ಮಧುಗಿರಿ ಕಸಬಾ ವ್ಯಾಪ್ತಿಯ ಕೆರೆಗಳ ಪಾಳ್ಯದ ಬಳಿ ನಡೆದಿದೆ.

      ಪಟ್ಟಣದ ಕಸಬಾ ವ್ಯಾಪ್ತಿಯ ಕವಾಡಿಗರ ಪಾಳ್ಯದ ಬೀರಣ್ಣ(68), ಮತ್ತು ಮಾರೀಬೀಳು ಗ್ರಾಮದ ಶಿವಣ್ಣ(45) ಸ್ಥಳದಲ್ಲೇ ಮೃತಪಟ್ಟವರು.
ಪಟ್ಟಣದ ಎಂ.ಎಸ್. ರಾಮಯ್ಯ ಕಲ್ಯಾಣ ಮಂಟಪದಲ್ಲಿ ಮಧುವೆ ಸಿದ್ದತೆಗೆಂದು ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಬವಿಸಿದೆ.
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 17 times, 1 visits today)

Related posts

Leave a Comment