ಲಾಕ್ ಡೌನ್ ಸ್ಥಗಿತ : 8 ಬಸ್ಸುಗಳ ಸಂಚಾರ!!

ಮಧುಗಿರಿ :

      ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪ್ರಥಮ ಬಾರಿಗೆ ಮಂಗಳವಾರ ದಂದು ಮಧುಗಿರಿ ಕೆ.ಎಸ್. ಆರ್. ಟಿ.ಸಿ .ಡಿಪೊನಿಂದ ಎಂಟು ಬಸ್ಸುಗಳು ಸಂಚರಿಸಿದೆ.

        ಈ ಪೈಕಿ ಬೆಂಗಳೂರಿಗೆ ನಾಲ್ಕು, ತುಮಕೂರಿಗೆ ಮೂರು ಹಾಗೂ ಪಾವಗಡಕ್ಕೆ ಒಂದು ಬಸ್ ಸಂಚಾರ ಬೆಳೆಸಿದವು. ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದ ಬಸ್ ನಿಲ್ದಾಣದಲ್ಲಿ ಆಶಾ ಕಾರ್ಯಕರ್ತರು, ಕೆ ಎಸ್ ಆರ್ ಟಿಸಿ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಹಕಾರದೊಂದಿಗೆ ಸ್ಕ್ರೀನ್ ಟೆಸ್ಟಿಂಗ್ ಮತ್ತು ಸ್ಯಾನಿ ಟೈಸಿಂಗ್ ಮಾಡಿ ಪ್ರಯಾಣಿಕರನ್ನು ಮಾಸ್ಕ್ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿತ್ತು.

      ಮಧುಗಿರಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣವನ್ನು ಪ್ರಸ್ತುತ ಒನ್ವೇ ಮಾಡಿದ್ದು ಮುಖ್ಯದ್ವಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಸಾಲುಗಟ್ಟಿ ಪ್ರಯಾಣಿಕರು ಬರುವ ರೀತಿ ವ್ಯವಸ್ಥೆ ಮಾಡಲಾಗಿದೆ. ಬೇರೆ ಊರುಗಳಿಂದ ಆಗಮಿಸುವಂತಹ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಇಳಿದು ಬಸ್ ನಿಲ್ದಾಣದಿಂದ ಹೊರ ಬರುವ ವ್ಯವಸ್ಥೆಯನ್ನು ಮಾಡಲಾಗಿದೆ.

      ಪಾವಗಡಕ್ಕೆ ತೆರಳಿದ ಬಸ್ಸಲ್ಲಿ ಕೇವಲ ಎಂಟು ಪ್ರಯಾಣಿಕರಿದ್ದ ಇದ್ದು ಇನ್ನು ಉಳಿದ ಬಸ್ಸ್ ಗಳಲ್ಲಿ ಸರಕಾರದ ನಿರ್ದೇಶನದಂತೆ ಮೂವತ್ತು ಪ್ರಯಾಣಿಕರು ಸಂಚರಿಸಿದ್ದಾರೆ.

  ರೋಡಿಗಿಳಿಯದ ಖಾಸಗಿ ಬಸ್ಸುಗಳು:

      ಲಾಕ್ಡೌನ್ ದಿಂದಾಗಿ ಗಿ ಕಳೆದೆರಡು ತಿಂಗಳುಗಳಿಂದ ಖಾಸಗಿ ಬಸ್ಸುಗಳು ಸರ್ಕಾರದ ವಶಕ್ಕೆ ನೀಡಲಾಗಿದ್ದು, ಜೂನ್ ಒಂದರ ನಂತರ ಬಿಡುಗಡೆಗೊಳಿಸಿ ಸಾರ್ವಜನಿಕ ಸೇವೆಗೆ ಉಪಯೋಗಿಸಲಾಗುವುದು. ಆದರೆ ಬಸ್ಸನ್ನು ಪ್ರಯಾಣಿಕರು ತುಮಕೂರು ನಂತರ ಮಧುಗಿರಿಗೆ ಮಾತ್ರ ಎನ್ನುವ ಬಗ್ಗೆ ಸರಕಾರ ತೀರ್ಮಾನ ಇರುವುದರಿಂದ ಮಧ್ಯಂತರ ಪ್ರಯಾಣಿಕರಿಗೆ ತೊಂದರೆ ಯಾಗುತ್ತದೆ. ಮಧುಗಿರಿ ತುಮಕೂರು ನಡುವೆ ಬರುವ ಗ್ರಾಮಗಳ ನಿಲುಗಡೆ ಬಗ್ಗೆ ತೀರ್ಮಾನವಾಗಬೇಕಿದೆ. ಇದರ ಜೊತೆಗೆ ಅಲ್ಲಲ್ಲಿ ಟೋಲ್ ಸಂಗ್ರಹ ಕೇಂದ್ರಗಳು ತೆರೆದಿದ್ದು ಇದರ ವಸೂಲಾತಿ ಮಾಡಿದರೆ ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಲಿದೆ.

      ಸರ್ಕಾರ ಇಂತಹ ಸಂದರ್ಭದಲ್ಲಿ ಟೋಲ್ ಸಂಗ್ರಹ ಮಾಡಬಾರದು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಧುಗಿರಿ ತಾಲ್ಲೂಕಿನ ಪ್ರತಿನಿಧಿ ಹಾಗೂ ಪುರಸಭಾ ಮಾಜಿ ಸದಸ್ಯ ಎಂ.ಎಸ್. ಶಂಕರ ನಾರಾಯಣ್ ತಿಳಿಸಿದ್ದು ಹಲವು ತಿರ್ಮಾನಗಳ ನಂತರ ಖಾಸಗಿ ಬಸ್ಸುಗಳ ಸಂಚಾರವನ್ನು ಅರಂಭಿಸಲಾಗುವುದೆಂದು ತಿಳಿಸಿದ್ದಾರೆ.

(Visited 6 times, 1 visits today)

Related posts

Leave a Comment