ಮಾಹಿತಿ ಇಲ್ಲದೆ ಗ್ರಾಮಸಭೆ ರದ್ದು: ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಿಗೇನಹಳ್ಳಿ :

      ಸರಕಾರಿ ಯೋಜನೆಗಳ ಬಗ್ಗೆ ಪಂಚಾಯತಿ ಅಧಿಕಾರಿಗಳು ಸಭೆ ಕರೆಯುತ್ತಾರೆ ಮಾಹಿತಿ ನೀಡುತ್ತಾರೆ ಎಂದು ಕಾದು ಕುಳಿತಿದ್ದ ಸಾರ್ವಜನಿಕರಿಗೆ ಗ್ರಾಪಂ ಅಧಿಕಾರಿಗಳು ಗುಪ್ತವಾಗಿ ಸಭೆ ಕರೆದು ಬಸವ ವಸತಿ ಯೋಜನೆ ಮನೆಗಳು ವಂಚಿಸಲು ಯತ್ನಿಸಿದ ಘಟನೆ ವರದಿಯಾಗಿದೆ.

      ಕೊಡಿಗೇನಹಳ್ಳಿ ಗ್ರಾಪಂ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ 2018-19 ನೇ ಸಾಲಿನ ಬಸವ ವಸತಿ ಯೋಜನೆಯ ಫಲಾನುಭವಿಗಳ ಗ್ರಾಮ ಸಭೆಯನ್ನು ಮಂಗಳವಾರ ಆಯೋಜಸಿಲಾಗಿತ್ತು. ಸಭೆಯ ಬಗ್ಗೆ ಟಾಂಟಾಂ ಹಾಕಿಸದರೆ ಸಾರ್ವಜನಿಕರಿಗೆ ಯಾವುದೆ ಮಾಹಿತಿ ನೀಡದೆ ಗುಪ್ತವಾಗಿ ಸಭೆಯನ್ನು ಆಯೋಜಸಿಲಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಗ್ರಾಪಂ ಅಧಿಕಾರಿಗಳು ಹಾರೈಕೆ ಉತ್ತರ ನೀಡಿ ಮೌನಕ್ಕೆ ಶರಣಾದರು.

      ವಸತಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೆ ಗುಪ್ತವಾಗಿ ಸಭೆಯನ್ನು ಆಯೋಜನೆ ಮಾಡಿದ್ದು ಇದು ಅರ್ಹ ಫಲಾನವಿಗಳನ್ನು ವಂಚಿಸುತ್ತಿದ್ದಾರೆ ಎಂದು ಸಾರ್ವಜನಿರಕು ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಕೆಲ ಕಾಂಗ್ರೇಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ನಾಟಕೀಯ ಬೆಳವಣಿಗೆ ಸೃಷ್ಠಿಯಾಗಿ ಗ್ರಾಮ ಸಭೆಯನ್ನು ನಾಳೆಗೆ ಮುಂದೂಡಲಾಯಿತು.

      ಹಲವು ವಿಚಾರಗಳನ್ನು ಸಾರ್ವಜನಿಕರ ಮಾಹಿತಿ ಪಿಡಿಓ ರವರು ಗುಪ್ತವಾಗಿ ಆಯೋಜಸುತಿದ್ದು, ಪ್ರಭಾವಿಗಳ ಪರವಾಗಿ ಇಲ್ಲಿ ಕೆಲಸಗಳು ನಡೆಯುತ್ತಿವೆ, ಬಡವರಿಗೆ ಯಾವುದೆ ಕೆಲಸಗಳು ಸಾಗುತ್ತಿಲ್ಲಾ, ಇದರಿಂದ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತಿರುವ ಪ್ರಮುಖ ಆರೋಪ ಸಭೆಯಲ್ಲಿ ವ್ಯಾಪಕವಾಗಿತ್ತು. 27 ನೇ ತಾರೀಕು ಕೊನೆಯ ದಿನವಾಗಿದ್ದು ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಿ ತುರ್ತಾಗಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಭಾರ ಪಿಡಿಓ ಜಯರಾಮಯ್ಯ ತಿಳಿಸಿದರು.

      ಈ ಬಗ್ಗೆ ನೋಡೆಲ್ ಅಧಿಕಾರಿ ವಿಜಯಮೂರ್ತಿ ಪ್ರತಿಕ್ರಿಯಿಸಿ ನಿನ್ನೇ ಪಿಡಿಓ ಜಯರಾಮಯ್ಯ ದೂರವಾಣಿ ಮೂಲಕ ಕರೆ ಮಾಡಿ ಮಂಗಳವಾರ ಗ್ರಾಮ ಸಭೆ ಇದೆ ನೀವೇ ನೂಡೆಲ್ ಅಧಿಕಾರಿ ಎಂದು ತಿಳಿಸಿದ್ದು ಗ್ರಾಮಸ್ಥರಿಗೆ ಮಾಹಿತಿ ನೀಡದೆ ಸಭೆ ಆಯೋಜಸಿದ್ದಾರೆ ಎಂದು ಸ್ಥಳಕ್ಕೆ ಬಂದ ನಂತರ ತಿಳಿಯಿತು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಗಳಿಗೆ ಮಾಹಿತಿ ನೀಡುತ್ತೇನೆ.
ಎಂದರು.

      ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಂಜುಳ ಆಧಿನಾರಯಣರೆಡ್ಡಿ, ತಾಪಂ ಸದಸ್ಯರಾದ ಕೆಸಿ ನರಸರಡ್ಡಿ, ಜೆಡಿ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಮಂಜುಳ ರಂಗನಾಥ್, ಗ್ರಾಪಂ ಸದಸ್ಯರಾದ ಸೇಠು ಗಂಗಾಧರ್, ಮುಜಾಹೀದ್, ರಂಗಪ್ಪ ಮಾಜಿ ಸದಸ್ಯ ಸೈಯದ್ ನಾಸೀರ್, ಮಕ್ತಿಯಾರ್, ಮುಖಂಡರಾದ ನಾಗರೆಡ್ಡಿ, ಶ್ರೀನಿವಾಸ್, ಕೆಪಿ ರಾಜಪ್ಪ ಹಾಜರಿದ್ದರು.

(Visited 16 times, 1 visits today)

Related posts

Leave a Comment