ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೋಲಿಸರು ಯಶಸ್ವಿ!!

ಮಧುಗಿರಿ :

 

       ತಾಲ್ಲೂಕಿನ ಮರಬಳ್ಳಿ ಗೇಟ್ ಬಳಿ ಮನೆಯ ಮಾಲಿಕನನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ಮಧುಗಿರಿ ಪೋಲಿಸರು ಯಶಸ್ವಿಯಾಗಿದ್ದಾರೆ.

       ಮರಬಹಳ್ಳಿ ಗ್ರಾಮದ ವಾಸಿ ಚೌಡಪ್ಪ ಎಂಬುವವರ ಮನೆಗೆ ಡಿ.10 ರಂದು ರಾತ್ರಿ 09.30 ಗಂಟೆ ಸಮಯದಲ್ಲಿ ನಾಲ್ಕು ಜನ ಅಪರಿಚಿತರು ನುಗ್ಗಿ ಚೌಡಪ್ಪ ಅವರ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ, ಮನೆಯಲ್ಲಿದ್ದ ಅವರ ಮಗ ವಿಕಲಚೇತನ ಹನುಮಂತರಾಯನನ್ನು ಕೊಲೆ ಮಾಡಲು ಯತ್ನಿಸಿ ಬೀರುವಿನಲ್ಲಿದ್ದ ಹಣ ಮತ್ತು ವಡವೆಗಳನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ಮಧುಗಿರಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

      ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಿಪಿಐ ದಯಾನಂದ ಶೇಗುಣಸಿ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದ ಪೋಲಿಸರು ಪಟ್ಟಣದ ಕರಡಿಪುರ ವಾಸಿಗಳಾದ ಸುರೇಶ್, ವಿಜಯ್ ಮತ್ತು ಲೋಕೇಶ್ ಎಂಬುವವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

      ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ದಯಾನಂದ ಶೇಗುಣಸಿ, ಪಿಎಸ್‍ಐ ಕಾಂತರಾಜು ಹಾಗೂ ಸಿಬ್ಬಂದಿಗಳಾದ ಎ.ಹೆಚ್.ನಾರಾಯಣ, ಕುಮಾರ್, ರಾಮಕೃಷ್ಣ, ನಟರಾಜು, ಗಣೀಶ್ ಕುಮಾರ್, ಸಾಧಿಕ್ ಪಾಷ, ಪ್ರಕಾಶ್, ರಘುರಾಮ್, ಕಲ್ಲೇಶ್ ಹಾಗೂ ಮಾರ್ಗದರ್ಶಕರಾದ ಜಿಲ್ಲಾ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಮತ್ತು ಡಿವೈಎಸ್‍ಪಿ ಎಂ.ಕೆ.ಪ್ರವೀಣ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರು ಅಭಿನಂದಿಸಿದ್ದಾರೆ.

 

(Visited 75 times, 1 visits today)

Related posts

Leave a Comment