ಮಧುಗಿರಿ : ಗ್ರಾಮಸ್ಥರಿಂದ ಅನಾಥ ವೃದ್ಧೆಯ ರಕ್ಷಣೆ!!

ಮಧುಗಿರಿ :

      ಮಕ್ಕಳ ಕಿರುಕುಳ ತಾಳಲಾರದೆ ವೃದ್ಧೆಯೊಬ್ಬಳು ಮನೆ ಬಿಟ್ಟು ಬಂದು ರಸ್ತೆಯಲ್ಲಿ ಕುಸಿದು ಬಿದ್ದಾಗ ತಕ್ಷಣ ಗ್ರಾಮಸ್ಥರು ರಕ್ಷಿಸಿದ ಮಾನವೀಯ ಘಟನೆ ನಡೆದಿದೆ.

      ತಾಲೂಕಿನ ಐಡಿಹಳ್ಳಿ ಗ್ರಾಮದ ಚರ್ಚ್ ಮುಂಭಾಗ ಅನಾಥ ವೃದ್ಧೆಯೊಬ್ಬಳು ತಿರುಗಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಗ್ರಾಮ ಸಮ್ಮಿಲನ ಗ್ರಾಮಭಿವೃದ್ಧಿಯ ಕಾರ್ಯದರ್ಶಿ ರಾಮಂಜೀನಯ್ಯ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ, ತಕ್ಷಣ ಭೇಟಿ ಅವರು ವೃದ್ಧೆಗೆ ಉಪಹಾರ ನೀಡಿ ಗ್ರಾಮದ ಚರ್ಚ್‍ವೊಂದರಲ್ಲಿ ಇರುವಂತೆ ತಿಳಿಸಿ ಶ್ರೀ ಶಾರದಾಂಬ ವೃದ್ಧಾಶ್ರಮಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

      ವಿಷಯ ತಿಳಿದ ತಕ್ಷಣ ಶಾರದಾಂಬ ವೃದ್ಧಾಶ್ರಮದ ಅಧ್ಯಕ್ಷೆ ಯಶೋಧ ಭೇಟಿ ನೀಡಿ ವೃದ್ಧೆಯನ್ನು ಉಪಹಾರ ನೀಡಿ ಸಂತೈಯಿಸಿ ವಿಚಾರಿಸಿದಾಗ ಸುಂಕದಕಟ್ಟೆ ಪಕ್ಕದ ಹೇರೋಹಳ್ಳಿ, ಬ್ಯಾಡರಹಳ್ಳಿ ಎಂದು ಕಣ್ಣಿರು ಹಾಕಿದ ವೃದ್ದೆಯು ಸೊಸೆ ಮತ್ತು ಮಗ ಹೊಡೆದು ಮನೆಯಿಂದ ಆಚೆ ದಬ್ಬಿದ್ದಾರೆ ನನಗೆ ಎಲ್ಲಾದರೂ ಇರಲು ಜಾಗ ಕೊಡಿ ಎಂದು ಅಲವತ್ತುಕೊಂಡಿದ್ದಾಳೆ. ತಕ್ಷಣ ಗ್ರಾಮಸ್ಥರು ಹಲವು ಬಾರಿ ಆಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದರೂ ಪ್ರಯೋಜನವಾಗದ ಕಾರಣ ಕೆಲ ಕಾಲ ಆಕ್ರೋಶಕ್ಕೆ ಕಾರಣವಾಗಿತ್ತು.

      ನಂತರ ಸ್ಥಳಿಯ ಪಿಡಿಓ ಪ್ರಕಾಶ್, ವೈಧ್ಯಾಧಿಕಾರಿ ಡಾ ಶಿವಾನಂದ್ ಭೇಟಿ ಚಿಕಿತ್ಸೆ ನೀಡಿದ್ದು ವೈದ್ಯರ ಸಲಹೆ ಮೇರೆಗೆ ಸುಮಾರು 2 ಗಂಟೆಯ ನಂತರ ಬಂದ ಆಂಬುಲೆನ್ಸ್ ವಾಹನದಲ್ಲಿ ಶಾರದಾಂಭ ವೃದ್ಧಾಶ್ರಮದ ಆದ್ಯಕ್ಷೆ ಯಶೋಧ ವೃದ್ಧಯನ್ನು ಕರೆದ್ಯೋಯ್ದರು.

      ಈ ಬಗ್ಗೆ ಜಿಲ್ಲಾ ಹಿರಿಯ ನಾಗರೀಕ ಕಲ್ಯಾಣಧಿಕಾರಿ ರಮೇಶ್ ಪ್ರತ್ರಿಕ್ರಿಯಿಸಿದ ಅವರು ಬಗ್ಗೆ ನನಗೆ ಕರೆ ಬಂದ ತಕ್ಷಣ ವೃದ್ಧಾಶ್ರಕ್ಕೆ ಮಾಹಿತಿ ನೀಡಿದ್ದೇನೆ, ಅವರು ಭೇಟಿ ನೀಡಿ ರಕ್ಷಣೆ ನೀಡಿದ್ದಾರೆ, ಎಲ್ಲಾದರೂ ನಿರಾಶ್ರೀತರು ಅಥವ ಅನಾಥ ವಯೋವೃದ್ಧರು ಕಂಡು ಬಂದರೆ ತಕ್ಷಣ 08162251383 ಸಹವಾಣಿಗೆ ಕರೆ ಮಾಡಿದರೆ ನಾವು ಅವರಿಗೆ ಪುನರ್ವಸಿತಿ ಕಲ್ಪಿಸುತ್ತೇವೆ ಎಂದರು.

      ಐಡಿಹಹಳ್ಳಿಯ ಆಂಬುಲೆನ್ಸ್ ವಾಹನ 3 ದಿನಗಳಿಂದ ಕೆಟ್ಟು ನಿಂತಿದ್ದು ಈ ಬಗ್ಗೆ ನಮ್ಮ ಪ್ರತಿ ನಿಧಿ ಶಾಸಕ ಎಂವಿ ವೀರಭಧ್ರಯ್ಯ ಅವರನ್ನು ಸಂಪರ್ಕಿಸಿದಾಗ ತಕ್ಷಣ ತಾಲೂಕು ವೈಧ್ಯಾಧಿಕಾರಿಗೆ ಕರೆ ಕೂಡಲೇ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಇಂದಿನ ಯುವ ಪೀಳಿಗೆ ವ್ಯವಹಾರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಆಧುನಿಕ ಜಗತ್ತಿನಲ್ಲಿ ತಂದೆ ತಾಯಿ ಮೇಳಿನ ಪ್ರೀತಿ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ, ಆದ್ದರಿಂದ ಇಂತಹ ಮಕ್ಕಳು ಪೋಷಕರನ್ನು ಬೀದಿಗೆ ಬಿಡುತ್ತಾರೆ. ಇಂದಿನ ದಿನಗಳಲ್ಲಿ ನೈತಿಕ ಶಿಕ್ಷಣ ಮೌಲ್ಯಗಳ ಕಲಿಕ ಅವಶ್ಯಕತೆ ಇದೆ ಎಂದು ಶಾರದಾಂಬ ಟ್ರಸ್ಟ್‍ನ ಅಧ್ಯಕ್ಷೆ ಯಶೋಧ ತಿಳಿಸಿದರು.
ಈ ಸಂದರ್ಭದಲ್ಲಿ ವೈಧ್ಯಾಧಿಕಾರಿ ಡಾ ಶಿವಾನಂದ್, ಪಿಡಿಓ ಪ್ರಕಾಶ್, ಸಮಾಜ ಸೇವಕರಾದ ನಂದೀಹಳ್ಳಿ ಸಿದ್ದೇಶ್, ಚಂದ್ರಪ್ಪ, ಮುಖಂಡರಾದ ಶಿವಪ್ಪ, ಯುವರಾಜು, ದೊಡ್ಡಯ್ಯ, ಜಯಮ್ಮ, ರತ್ನಮ್ಮ, ಸಿರಾಜ್ ಅಹಮದ್, ಸಂಜೀವಪ್ಪ, ಮುಖಂಡರಾದ ಯುವರಾಜು ಮತ್ತೀತರು ಹಾಜರಿದ್ದರು.

(Visited 22 times, 1 visits today)

Related posts

Leave a Comment