ಮಧುಗಿರಿ : ಮಹಿಳೆ ಮೇಲೆ ವಿನಾಕಾರಣ ಪೊಲೀಸ್ ಇನ್ಸ್ಪೆಕ್ಟರ್ ಹಲ್ಲೆ!

ಮಧುಗಿರಿ:

      ಮಹಿಳೆಯೊಬ್ಬರ ಮೇಲೆ ವಿನಾಕಾರಣ ಪೊಲೀಸ್ ಇನ್ಸ್ಪೆಕ್ಟರ್ ಹಲ್ಲೆ ನಡೆಸಿರುವ ಘಟನೆ ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

       ದೊಡ್ಡೇರಿ ಹೋಬಳಿ ಕೋನಹಳ್ಳಿ ಗ್ರಾಮದ ರತ್ನಮ್ಮ ಎಂಬುವರು ಹಲ್ಲೆಗೊಳಗಾದ ಮಹಿಳೆ, ಸೋಮವಾರದಂದು ಈಕೆಗೂ ಪಕ್ಕದ ಮನೆಯವರಿಗೂ ಕ್ಷುಲ್ಲಕ ವಿಚಾರವಾಗಿ ಜಗಳ ಆರಂಭವಾಗಿದೆ ಈ ಸಂಭಂದ ಇದೇ ಸ್ಥಳಕ್ಕೆ ಆಗಮಿಸಿದ ಪಿಐ ಪ್ರಭಾಕರ್ ವಿಚಾರಣೆ ನಡೆಸಿ ರತ್ನಮ್ಮಳನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

       ಮಹಿಳಾ ಪೊಲೀಸರಿಲ್ಲದೆ ಪಿಐ ಪ್ರಭಕಾರ್ ಮಹಿಳೆ ಮೇಲೆ ಕೈ ಮಾಡಿದ್ದು ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಪ್ರಸ್ತುತ ರತ್ನಮ್ಮ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಘಟನೆ ಬಗ್ಗೆ ಸಂಬಂಧಿಕರು ಮಧುಗಿರಿ ಡಿವೈಎಸ್ಪಿ ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

(Visited 511 times, 1 visits today)

Related posts