ಪಾವಗಡ:

      ರಾಜ್ಯ-ಅಂತರಾಜ್ಯಗಳಲ್ಲಿ ಹೆಸರುವಾಗಿಯಾಗಿರುವ ಪಾವಗಡ ಪಟ್ಟಣದ ಹೆಸರಾಂತ ದೇಗುಲ ಶ್ರೀಶನೇಶ್ವರ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವವು ಮಂಗಳವಾರ ಬಹಳ ವೈಭವದೊಂದಿಗೆ ನಡೆಯಿತು.

      ಶ್ರೀಶನೇಶ್ವರ ಸ್ವಾಮಿಯ ದೇವಾಲಯದಲ್ಲಿ ಮಂಗಳವಾರ ಬೆಳಗಿನ ಜಾವದಿಂದಲೇ ಭಕ್ತರು ಹೋಮ, ನವಗ್ರಹ ಪೂಜೆ, ಸರ್ವಸೇವಾ ಪೂಜೆಗಳನ್ನು ನೆರವೇರಿಸಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

      ದೇವಾಲಯದಲ್ಲಿ ಅಲಂಕೃತ ಉತ್ಸವ ಮೂರ್ತಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿದ ನಂತರ ಮದ್ಯಾನ 12:20 ಗಂಟೆಗೆ ಸರಿಯಾಗಿ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡಿದ್ದ ರಥದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತು.

      ವಿಶೇಷ ವಾಧ್ಯಗೋಷ್ಟಿಯೊಂದಿಗೆ ಶನೇಶ್ವರ ಸ್ವಾಮಿಯ ರಥಕ್ಕೆ ಅರ್ಚಕರು, ಟ್ರಸ್ಟಿಗಳು ಹಾಗೂ ಸಾವಿರಾರು ಭಕ್ತರು ಸೇರಿ ಸ್ವಾಮಿ ರಥಕ್ಕೆ ಚಾಲನೆ ನೀಡಿದರು.

      ಭಕ್ತರು ವಾಡಿಕೆಯಂತೆ ಸ್ವಾಮಿಗೆ ಬಾಳೆಹಣ್ಣು ಮತ್ತು ಕಾಣಿಕೆಗಳನ್ನು ರಥದತ್ತ ಎಸೆದು ತಮ್ಮ ಹರಕೆಗಳನ್ನು ತೀರಿಸಿಕೊಂಡು ಸ್ವಾಮಿ ಕೃಪೆಗೆ ಪಾತ್ರರಾದರು.
ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಕುಡಿಯಲು ನೀರು ಮಜ್ಜಿಗೆ, ತೀರ್ಥ-ಪ್ರಸಾದಗಳನ್ನು ದೇವಸ್ಥಾನದಿಂದ ಏರ್ಪಡಿಸಲಾಗಿತ್ತು.

      ಅದೇ ರೀತಿ ದೇವಸ್ಥಾನದ ಶ್ರೀಅನ್ನಪೂರ್ಣೇಶ್ವರಿ ದಾಸೋಹ ಮಂದಿರದಲ್ಲಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಬೋಜನದ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಬಹಲ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.

(Visited 106 times, 1 visits today)