ಪಾವಗಡ : ನರೇಗ ಕಾಮಗಾರಿಗಳ ವೀಕ್ಷಣೆ

ಪಾವಗಡ :

      ಬರನಿರ್ವಹಣೆಯಲ್ಲಿ ಶುದ್ದಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ ಸಾಕಷ್ಟು ಅನುದಾನವಿದ್ದು ಬಳಕೆ ಮಾಡಿಕೊಳ್ಳುವಂತೆ ಪಂಚಾಯತ್ ರಾಜ್ ಇಲಾಖೆಯ ಪ್ರಾಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ತಿಳಿಸಿದರು.

      ಬುದವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಶುದ್ದಕುಡಿಯುವ ನೀರಿನ ಸಮಸ್ಯೆ ಮತ್ತು ನರೇಗ ಕಾಮಗಾರಿಗಳನ್ನು ವೀಕ್ಷಣೆಗಾಗಿ ಆರ್.ಹೊಸಕೋಟೆ ಗ್ರಾಮಕ್ಕೆ ಬೇಟಿ ನೀಡಿ ಶುದ್ದಕುಡಿಯುವ ನೀರು ಪೂರೈಕೆಗಾಗಿ ಖಾಸಗಿಯವರಿಂದ ಬಾಡಿಗೆಗೆ ಪಡೆದ ಬೋರೆಗಳ ಬಗ್ಗೆ ರೈತರಿಂದ ಮಾಹಿತಿ ಪಡೆದಿದ್ದು ,ಬೆಳೆ ಇಟ್ಟರೆ ನೀರು ಬಿಡಲು ಸಾದ್ಯವಿಲ್ಲ ಎಂದು ರೈತರು ತಿಳಿಸಿದ್ದು, ಗ್ರಾಮದಲ್ಲಿನ ಶುದ್ದಕುಡಿಯುವ ನೀರಿನ ಘಟಕಗಳ ನಿರ್ವಹಣಿಯ ಬಗ್ಗೆ ಮಾಹಿತಿ ಪಡೆದರು.

      ಕೋಡಮೋಡಗು ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ಪರಿಶೀಲಿಸಿ ಗುಣಮಟ್ಟದ ಕಟ್ಟದ ನಿರ್ಮಾಣಕ್ಕೆ ಹಣ ಅಗತ್ಯವಾದಲ್ಲಿ ನರೇಗ ಹಣ ಬಳಕೆ ಮಾಡಿಕೋಳ್ಳಲು ತಿಳಿಸಿದ ಅವರು ಬೈರಾಪುರ ಗ್ರಾಮದ ರೇಷ್ಮೆ ಬೆಳೆಯುವಾ ಘಟಕ್ಕೆ ಬೇಟಿ ನೀಡಿ ರೈತನಿಂದ ಮಾಹಿತಿ ಪಡೆದಾ ಕಾರ್ಯದರ್ಶಿಗಳು ಇಂತಹ ಬರಗಾಲದಲ್ಲಿ ಇಂತಹ ಸಮೃದ್ದವಾದ ಬೆಳೆ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದರು.

      ಇದೇ ತಾಲ್ಲೂಕು ಮಟ್ಟದ ಆದಿಕಾರಿಗಳೊಂದಿಗೆ ಮಾತನಾಡಿದ ಅವರು ಯಾವುದೇ ಸಮಯದಲ್ಲಾದರೂ ಜನತೆಗೆ ಶುದ್ದಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕಾರ್ಯನಿರ್ವಹಿಸಬೇಕು ಕುಡಿಯುವ ನೀರಿಗಾಗಿ ಸಾಕಷ್ಠು ಅನುದಾನವಿದ್ದು ಸದ್ಬಳಕೆ ಮಾಡಿಕೋಳ್ಳಬೇಕೆಂದು ಆದಿಕಾರಿಗಳಿಗೆ ತಾಕೀತು ಮಾಡಿದರು.
  

(Visited 27 times, 1 visits today)

Related posts

Leave a Comment