ಪೊಲೀಸ್ ಠಾಣೆಯಲ್ಲಿ ಜೂಜಾಟ : ಎಎಸ್‍ಐ ಸೇರಿದಂತೆ ನಾಲ್ವರ ಅಮಾನತು!!

ತುಮಕೂರು:

      ಜನರಿಗೆ ನೀತಿ ಪಾಠ ಮಾಡುವ ಪೊಲೀಸರು ಠಾಣೆಯಲ್ಲಿ ಇಸ್ಪೀಟ್ ಆಟ ಆಡಿದರೆ ಹೇಗೆ…? ಕಾನೂನು ರಕ್ಷಕರೆ ಬಕ್ಷಕರಾದರೆ ಸಮಾಜದ ಗತಿ ಏನು…?ಅಂತಹದೂಂದು ಘಟನೆ ನಡೆದಿದೆ.

      ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಮದ್ಯಪಾನ ಮಾಡಿ ಜೂಜಾಟ ನಡೆಸಿ ದುರ್ನಡತೆಯಿಂದ ನಡೆದುಕೊಂಡು ಇಲಾಖೆಗೆ ಕಳಂಕ ತಂದ ಹಿನ್ನೆಲೆಯಲ್ಲಿ ಎಎಸ್‍ಐ ಸೇರಿದಂತೆ ನಾಲ್ಕು ಜನ ಪೊಲಿಸ್‍ರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕೋನಾ ವಂಶಿ ಕೃಷ್ಣರವರು ಅಮಾನತ್ ಮಾಡಿ ಆದೇಶ ಹೊರಡಿಸಿದ್ದಾರೆ.

      ಎಎಸ್‍ಐ ರಾಮಚಂದ್ರಪ್ಪ, ಎಂ.ಸಿ.ಮಹೇಶ್,(ಎಸ್ ಬಿ ಡ್ಯೊಟಿ) ಚಲುವರಾಜು(ಠಾಣೆಯ ರೈಟರ್) ಸಂತೋಷ್ (ಜಿಲ್ಲಾ ಶಸತ್ರ ಮೀಸಲು ಪಡೆಯ ಹೈವೆ ಪ್ಯಾಟ್ರೋಲಿಂಗ್ ವಾಹನದ ಚಾಲಕ) ಇವರನ್ನು ಅಮಾನತ್ ಮಾಡಲಾಗಿದೆ. ಘಟನೆಯ ಸಂಬಂಧ ಇಲ್ಲಿನ ಸಬ್‍ಇನ್ಸ್‍ಪೆಕ್ಟರ್ ರಾಮಕೃಷ್ಣ ಅವರು ಎಸ್ಪಿಯವರ ಗಮನಕ್ಕೆ ತಂದಿದ್ದಾರೆ. ಅಗ ರಾಮಕೃಷ್ಣ ಅವರ ವಿರುದ್ಧ ಕೆಂಡಾಮಂಡಲರಾದ ಎಸ್ಪಿಯವರು ಲಿಖಿತವಾಗಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

 ಘಟನೆ ಹಿನ್ನೆಲೆ:

      ಸಬ್ ಇನ್ಸ್‍ಪೆಕ್ಟರ್ ರಾಮಕೃಷ್ಣರವರು ದಿನಾಂಕ: 19/06/2020 ರಂದು ರಾತ್ರಿ ಠಾಣೆಯ ಸಿಬ್ಬಂದಿ ನಾರಾಯಣಸ್ವಾಮಿ ರವರ ಮದುವೆ ಕಾರ್ಯವಿದ್ದು, ಸದರಿ ಮದುವೆ ಕಾರ್ಯಕ್ಕೆ ನಾನು ಹಾಗೂ ಕೆಲವು ಸಿಬ್ಬಂದಿಗಳು ಹೋಗಿ ವಾಪಸ್ ಠಾಣೆಗೆ ಬಂದು, ರಾತ್ರಿ ಎಸ್‍ಎಚ್‍ಓ ಕರ್ತವ್ಯಕ್ಕೆ ಸಿಎಚ್‍ಸಿ -2018, ನಾರಾಯಣಮೂರ್ತಿ ಹಾಗೂ ಠಾಣೆಗೆ ಕರ್ತವ್ಯಕ್ಕಾಗಿ ಸಿಪಿಸಿ -568, ರಂಗನಾಥ ರವರಿಗೆ ಮತ್ತು ಹೈವೇ ಪ್ಯಾಟ್ರೋಲಿಂಗ್ ಕರ್ತವ್ಯಕ್ಕಾಗಿ ಎಎಸ್‍ಐ, ರಾಮಚಂದ್ರಪ್ಪ ಹಾಗೂ ಹೈವೇ ಪ್ಯಾಟ್ರೋಲಿಂಗೆ ವಾಹನದ ಚಾಲಕನಾಗಿ ಎಪಿಸಿ-263, ಸಂತೋಷ್ ರವರುಗಳನ್ನು ನೇಮಿಸಿ, ನಾನು ವಿಶ್ರಾಂತಿಗಾಗಿ ವಸತಿ ಗೃಹಕ್ಕೆ ಹೋಗಿದ್ದು, ರಾತ್ರಿ ಸುಮಾರು 12-45 ಗಂಟೆ ಸಮಯದಲ್ಲಿ ಠಾಣಾ ಎಸ್‍ಎಚ್ ಕರ್ತವ್ಯದಲ್ಲಿದ್ದ ನಾರಾಯಣಮೂರ್ತಿ, ರವರು ನನಗೆ ದೂರವಾಣಿ ಮುಖಾಂತರ ಕರೆ ಮಾಡಿ, ಠಾಣಾ ಸಿಬ್ಬಂದಿ ನಾರಾಯಣಸ್ವಾಮಿ ರವರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಇತರೆ ಸಿಬ್ಬಂದಿಗಳಾದ ಸಿಎಚ್ ಸಿ -78 , ಎಂ.ಸಿ.ಮಹೇಶ್, ಸಿಪಿಸಿ -987, ಚಲುವರಾಜುರವರುಗಳು ಮದ್ಯಪಾನ ಮಾಡಿಕೊಂಡು ಠಾಣೆಗೆ ಬಂದಿದ್ದು, ಇವರಿಗೆ ತಮ್ಮ ತಮ್ಮ ಕರ್ತವ್ಯಕ್ಕೆ ಹೋಗುವಂತೆ ಸೂಚನೆ ನೀಡಿದರೂ ಸಹಾ ಮೇಲ್ಕಂಡ ಸಿಬ್ಬಂದಿಗಳು ಕರ್ತವ್ಯಕ್ಕೆ ಹೋಗದೇ ಠಾಣೆಯ ಮೇಲ್ಬಾಗದ ವಿಶ್ರಾಂತಿಯ ಕೊಠಡಿಗೆ ಹೋಗಿದ್ದು, ರಾತ್ರಿ 12:45 ಸಮಯದ ಮೇಲ್ಬಾಗದ ರೂಮ್‍ನಲ್ಲಿ ಗಲಾಟೆ ಆಗುವ ಶಬ್ದ ಕೇಳಿ ಎಸ್‍ಎಚ್‍ಓ ಮೇಲ್ಬಾಗಕ್ಕೆ ಹೋಗಿ ನೋಡಲಾಗಿ , ಸಿಎಚ್ ಸಿ -78 , ಮಹೇಶ್ ಮತ್ತು ಹೈವೇ ಪ್ಯಾಟ್ರೋಲಿಂಗ್ ವಾಹನದ ಚಾಲಕನಾದ ಎಪಿಸಿ-263, ಸಂತೋಷ್ ರವರುಗಳು ಬೈದಾಡಿಕೊಂಡು ಗಲಾಟೆ ಮಾಡಿಕೊಳ್ಳುತ್ತಿದ್ದರು ಹಾಗೂ ಇಸ್ಪೀಟ್ ಎಲೆಗಳು ಅಲ್ಲಿ ಬಿದ್ದಿದ್ದವು. 

(Visited 707 times, 1 visits today)

Related posts