ತಾಲ್ಲೂಕು ಕಚೇರಿಗೆ ಬೀಗ ಜಡಿದು ರೈತರಿಂದ ಪ್ರತಿಭಟನೆ

ಕುಣಿಗಲ್ :

      ರೈತರಿಗೆ ರಾಗಿ ಖರೀದಿಯಲ್ಲಿ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದಾಗ ಪ್ರತಿಭಟನೆಯನ್ನ ಕೈಬಿಡಿ ರೈತರ ಹಣ ಸಂದಾಯ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ತಿಂಗಳಾದರೂ ಇನ್ನೂ ರೈತರ ರಾಗಿ ದುಡ್ಡು ನೀಡಿಲ್ಲ ಎಂದು ಆರೋಪಿಸಿ ರೈತ ಸಂಘ ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆಯಿತು.

      ಮಹಿಳೆಯರು ಸೇರಿದಂತೆ ಹಲವು ರೈತರು ತಮ್ಮ ಜಮೀನಿನಲ್ಲಿ ರಾಗಿ ಬೆಳೆದು ಖರೀದಿ ಕೇಂದ್ರಕ್ಕೆ ಸುಮಾರು 1087 ರೈತರಿಂದ ಪಡೆದಿದ್ದು ಇದರಲ್ಲಿ 391 ರೈತರಿಗೆ ಮಾತ್ರ ನೀಡಿದ್ದರೂ ಇನ್ನೂ ಹಣ ನೀಡಿಲ್ಲ ಎಂಬ ಅವರ ದೂರಿನ ಮೇರೆಗೆ ಜಿಲ್ಲಾ ಹಸಿರು ಸೇನೆಯ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗುವ ಮೂಲಕ ತಾಲ್ಲೂಕು ಕಚೇರಿ ಮುಂದಿನ ಗೇಟಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಡಿಸಿದರು.

      ರೈತರಿಂದ ರಾಗಿ ಖರೀದಿಸಿದ ಅಧಿಕಾರಿಗಳು ರಶೀದಿಯನ್ನು ನೀಡದೆ ಖಾಲಿ ಚೀಟಿಯಲ್ಲಿ ಬರೆದುಕೊಟ್ಟು ಅದಕ್ಕೆ ಸಹಿ ಮಾಡದೆ ನಕಲಿ ರಸೀತಿಯನ್ನು ನೀಡಿ ಯಾಮಾರಿಸಿದ್ದಾರೆ. ಈ ಹಗರಣದಲ್ಲಿ ಕೇವಲ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ಮಾತ್ರವಲ್ಲ ಇಲಾಖೆಯ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಪಾದಿಸಿದರು. ಕೂಡಲೇ ರೈತರಿಗೆ ರಾಗಿ ಮಾರಾಟದ ಹಣ ನೀಡದಿದ್ದರೆ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಧರಣಿ ನಡೆಸಿದರು.

      ರೈತ ಸಂಘದ ಜಿಲ್ಲಾ ಅಧ್ಯಕ್ಷ ಆನಂದ್‍ಪಟೇಲ್ ಸ್ಥಳದಲ್ಲಿ ತಹಸೀಲ್ದಾರ್ ಇರದ ಕಾರಣ ದೂರವಾಣಿಯಲ್ಲಿ ಮಾತನಾಡಿದ ಅವರಿಗೆ ನೀವು ಹೇಳಿದಂತೆ ನಡೆದುಕೊಂಡಿಲ್ಲ. ರೈತರ ಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡಿ ಜನಪ್ರತಿನಿಧಿಗಳ ಕೈಗೊಂಬೆಯಾಗಬೇಡಿ. ನೀವೆ ಹೇಳಿದಂತೆ ಮೊದಲು ನಮ್ಮ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ನೀಡಿ ಅಲ್ಲಿಯವರೆಗೆ ಪ್ರತಿಭಟನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ನಂತರ ತಹಸೀಲ್ದಾರ್ ಕೆಲವೆ ಗಂಟೆಯಲ್ಲಿ ಬರುತ್ತೇನೆ ಎಂದು ಹೇಳಿ ಪ್ರತಿಭಟನೆ ಕೈಬಿಡಿ ಎಂದು ಕೇಳಿದರೂ ಪ್ರತಿಭಟನಾಕಾರರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲಾ ಎಂದು ಹಠಹಿಡಿದು ಪ್ರತಿಭಟನೆ ಮುಂದುವರೆಸಿದರು. ನಂತರ ಸಂಜೆ ತಹಸೀಲ್ದಾರ್ ಆಗಮಿಸಿ ರೈತರನ್ನ ಮನವೊಲಿಸಿ ಗುರುವಾರ ಉಳಿದ ಎಲ್ಲಾ ರೈತರಿಗೂ ಹಣಕೊಡುವ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

      ಪ್ರತಿಭಟನೆಯಲ್ಲಿ ಹಿತ್ತಲಹಳ್ಳಿ, ರಂಗೇಗೌಡನ ಪಾಳ್ಯ, ಚಂದನಹಳ್ಳಿ ಗ್ರಾಮ ತಿಮ್ಮಮ್ಮ, ನರಸಮ್ಮ, ಗೀತಮ್ಮ ಸೇರಿದಂತೆ ರೈತಸಂಘದ ತಾಲ್ಲೂಕು ಅಧ್ಯಕ್ಷ ಅನಿಲ್, ಕಾರ್ಯದರ್ಶಿ ವೆಂಕಟೇಶ್, ಕೃಷ್ಣಪ್ಪ, ಕುಮಾರ್, ಗಂಗಾಧರ್, ಭಾಗವಹಿಸಿದ್ದರು.

(Visited 8 times, 1 visits today)

Related posts

Leave a Comment