ಪಿಯುಸಿ ಪರೀಕ್ಷೆ ಬರೆಯಲು ಹೋದ ಅಪ್ರಾಪ್ತ ಯುವತಿ ಕಾಣೆ!!

ಮಧುಗಿರಿ :

      ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಬರುತ್ತೇನೆ ಎಂದು ಪರೀಕ್ಷೆ ಬರೆಯಲು ಹೋದ ಅಪ್ರಾಪ್ತ ಯುವತಿ ಕಾಣೆಯಾಗಿರುವ ತಡವಾಗಿ ಪ್ರಕರಣ ವರದಿಯಾಗಿದೆ.

      ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಿ.ಜಿ. ಲಾವಣ್ಯ ಕಾಣೆಯಾದ ವಿದ್ಯಾರ್ಥಿನಿ. ತಾಲೂಕಿನ ಪುರವರ ಹೋಬಳಿಯ ಬಡಕನಹಳ್ಳಿ ಗ್ರಾಮದ ಈಕೆ ಜೂ. 18 ರಂದು ಬೆಳಿಗ್ಗೆ 08-30 ಗಂಟೆಗೆ ಮಧುಗಿರಿ ಪಟ್ಟಣದಲ್ಲಿ ನಡೆಯುವ ಪಿಯುಸಿ ಪರೀಕ್ಷೆಗೆ ಹೋಗಿ ಬರುವುದಾಗಿ ಹೇಳಿ ಮಧುಗಿರಿಗೆ ಆಟೋರಿಕ್ಷಾದಲ್ಲಿ ಹೋದವಳು, ಆ ದಿನ ರಾತ್ರಿ ಸುಮಾರು 8 ಗಂಟೆಯಾದರೂ ಮನೆಗೆ ವಾಪಾಸ್ಸಾಗಿಲ್ಲ.

      ತದ ನಂತರ ನಮ್ಮ ಸಂಬಂದಿಕರ ಮನೆಗಳಲ್ಲಿ ಹುಡುಕಿದರು ಸಹ ನನ್ನ ಮಗಳು ಸಿಕ್ಕದೆ ಇರುವುದರಿಂದ ಆದ್ದರಿಂದ ತಡವಾಗಿ ಬಂದು ದೂರು ನೀಡಿರುತ್ತೇನೆ , ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಹಚ್ಚಿ ಅನುಕೂಲ ಮಾಡಿಕೊಡಬೇಕೆಂದು ತಂದೆ ಗುತ್ತೆಪ್ಪ ಕೊಡಿಗೇನಹಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

(Visited 25 times, 1 visits today)

Related posts

Leave a Comment