ತನಿಷ್ಕಾ ಜ್ಯೂವೆಲ್ಸ್‍ನಲ್ಲಿ ಚಿನ್ನಾಭರಣ ದೋಚಿದ್ದ ಕಳ್ಳರ ಬಂಧನ

ತುಮಕೂರು :

      ತುಮಕೂರಿನ ತನಿಷ್ಕಾ ಜ್ಯೂವೆಲ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೇ 1 ಕೆಜಿ 854 ಗ್ರಾಮ್ ಚಿನ್ನಾಭರಣ ಮತ್ತು 4.05.000 ನಗದು ಹಣದ ದೋಚಿ ಪರಾರಿಯಾಗಿದ್ದರು ಈ ಸಂಬಂಧ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

      ತನಿಷ್ಕಾ ಜ್ಯೂವೆಲ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹಮದ್ ಆದಿಲ್ ಬಿನ್ ಸೈಯದ್ ಅನ್ವರ್ (43), ವಿನೋಬ ನಗರ, ರಿತೇಶ್ ಕುರುಪ್ ಬಿನ್ ಜನಾರ್ಧನ್ ಕುರುಪ್ (35) ಕೇರಳ, ಮಹೇಶ್ ಬಿನ್ ರಾಜಶೇಖರ್ (32) ಗುಬ್ಬಿ, ಮೀನಾಕ್ಷಿ ಕೋಂ ಮಹೇಶ್ (26) ಗುಬ್ಬಿ, ರುಕ್ಸಾನ ತಂದೆ ಲೇ ಅಯೂಬ್ ಖಾನ್ (28) ಹೆಬ್ಬೂರು ಇವರ ಮೇಲೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಶೋಧ ನಡೆಸಿ ಮೂರವನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾವೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ ಕಳ್ಳರಿಂದ ಪೊಲೀಸರು ಹಣ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

      ಈ ಸಂಬಂಧ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಪತ್ತೆಗಾಗಿ ನಗರ ವೃತ್ತ ನಿರೀಕ್ಷಕರಾದ ನವೀನ್.ಬಿ ರವರ ಉಸ್ತುವಾರಿಯಲ್ಲಿ ಅಪರಾಧ ಪತ್ತೆ ತಂಡ ರಚಿಸಲಾಗಿತ್ತು. ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ ತಿಪ್ಪೇಸ್ವಾಮಿ ಹೆಚ್.ಜೆ. ಡಿವೈಎಸ್‍ಪಿ ತುಮಕೂರು ವಿಭಾಗ, ಮಂಜುನಾಥ ಬಿ.ಸಿ. ಪಿಎಸ್‍ಐ, ಶ್ರೀಮತಿ ಗಂಗಮ್ಮ, ಪಿಎಸ್‍ಐ ರಮೇಶ್ ಎಎಸ್‍ಐ, ತುಮಕೂರು ನಗರ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ ಪ್ರಸನ್ನಕುಮಾರ್, ರಾಮಚಂದ್ರಯ್ಯ, ಸಿದ್ದೇಶ್ವರ್ ಈರಣ್ಣ, ನಾಗರಾಜ, ಜೈಪ್ರಕಾಶ್, ನವೀನ, ಅಶ್ವಿನಿ, ದಯಾಮಣಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗಳಾದ ನರಸಿಂಹರಾಜು, ರಮೇಶ್,ಜಗದೀಶ್ ರವರುಗಳ ತಂಡ ರಚಿಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಇವರ ಕಾರ್ಯವೈಖರಿಯನ್ನು ಮೆಚ್ಚಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ, ಪಿಎಸ್‍ಐ ಅಭಿನಂದಿಸಿದರು.

 

(Visited 9 times, 1 visits today)

Related posts

Leave a Comment