ಶಾರ್ಟ್‍ಸಕ್ಯೂಟ್‍ : ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ!!

ಚಿಕ್ಕನಾಯಕನಹಳ್ಳಿ:

      ವಿದ್ಯುತ್ ಶಾರ್ಟ್‍ಸಕ್ಯೂಟ್‍ನಿಂದಾಗಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಹೋಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

      ಪಟ್ಟಣದ ಮುಖ್ಯರಸ್ತೆಯಲ್ಲಿನ ಕೆನರಾಬ್ಯಾಂಕ್ ಪಕ್ಕದಲ್ಲಿನ ಗಣೇಶ ವೆರೈಟಿಸ್ಟೋರ್‍ವೊಂದರಲ್ಲಿ ಸೋಮವಾರ ಬೆಳಗಿನ ಜಾವ ಅಂಗಡಿಯಮೇಲಿನಿಂದ ದಟ್ಟವಾಗಿ ಹೊಗೆಕಂಡುಬಂದ ಕಾರಣ ತಕ್ಷಣ ಸಾರ್ವಜನಿಕರು ಅಗ್ನಿಶಾಮಕದಳಕ್ಕೆ ಕರೆಮಾಡಿದರು.

       ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಅಂಗಡಿಯ ಬಾಗಿಲುಮೀಟಿ ಕಾರ್ಯಾಚರಣೆ ನಡೆಸಿದ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಇದಕ್ಕೆ ವಿದ್ಯುತ್ ಶಾರ್ಷ್‍ಸರ್ಕೂಟ್ ಕಾರಣವೆಂದು ತಿಳಿದುಬಂದಿದೆ. ಈ ಅವಘಡದಲ್ಲಿ ಅಂಗಡಿಯಲ್ಲಿದ್ದ ಜೆರಾಕ್ಸ್ ಯಂತ್ರ, ಷೋಕೇಸ್‍ಗಳು ಹಾಗೂ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿದ್ದವು.

 

(Visited 11 times, 1 visits today)

Related posts