ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ

ಹುಳಿಯಾರು  : 

      ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುಪ್ಪೂರು ವೃತ್ತದ ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಸ್ಮಾರ್ಟ್ ಫೋನ್ ವಿತರಣೆ ಮಾಡಲಾಯಿತು.

      ಜಿಲ್ಲಾ ಪೋಷಣ್ ಅಭಿಯಾನ ಯೋಜನಾ ಸಹಾಯಕರಾದ ಆರ್.ರವಿಕುಮಾರ್ ಮಾತನಾಡಿ ಸ್ಮಾರ್ಟ್ ಫೋನ್ ಕೊಟ್ಟಿರುವುದರಿಂದ ಅಪೌಷ್ಠಿಕ ಮಕ್ಕಳ ಬೆಳವಣಿಗೆ ಮಾಪನ, ಮಕ್ಕಳ ಮನೆ ಭೇಟಿ ಮಾಡುವುದು ಇನ್ನೂ ಸುಲಭ ಹಾಗೂ ದಕ್ಷ ಎಂದರು.

      ಮೇಲ್ವಿಚಾರಕರಾದ ಬಿ.ರೇಖಾ ಮಾತನಾಡಿ ಯೋಜನೆಗಳು, ಸೇವೆಗಳು ಮತ್ತು ಕೆಲಸದಲ್ಲಿ ದಕ್ಷತೆ, ಪ್ರಗತಿ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡುತ್ತಿರುವುದು ಉತ್ತಮ ಯೋಜನೆ ಎಂದರು.

      ಪೋಷಣ್ ಅಭಿಯಾನ ತಾಲ್ಲೂಕು ಸಂಯೋಜಕರಾದ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ ಸಮುದಾಯ ಕಾರ್ಯಕ್ರಮಗಳು, ಹಾಜರಾತಿ, ಗರ್ಭಿಣಿ, ಬಾಣಂತಿಯರ ಆರೋಗ್ಯ ತಪಾಸಣೆ, ಪೋಷಣ್ ಅಭಿಯಾನದ ತರಬೇತಿಗೆ ಅತ್ಯುತ್ತಮ ಕಾರ್ಯ ಮಾದರಿ ಇದಾಗಿದೆ ಎಂದರು.

     ಮೇಲ್ವಿಚಾರಕಿ ಸೌಮ್ಯ ಮಾತನಾಡಿ ಅಂಗನವಾಡಿ ಮೇಲ್ವಿಚಾರಣೆ, ನಿರ್ವಹಣೆ ಎಲ್ಲವೂ ಇನ್ನುಮುಂದೆ ಸ್ಮಾರ್ಟ್ ಫೋನ್ ಮುಖಾಂತರ ಸುಲಭ ಹಾಗೂ ಮಾಸಿಕ ಪ್ರಗತಿ ವರದಿ ಮಾತ್ರವಲ್ಲದೇ ಪ್ರತಿ ದಿನದ ಪ್ರಗತಿ ವರದಿ ಸಿಗುತ್ತದೆ, ಇದೊಂದು ಉತ್ತಮ ಮೈಲಿಗಲ್ಲು ಎಂದರು. 

      ಕಾರ್ಯಕ್ರಮದಲ್ಲಿ ಜಿಲ್ಲಾ ಪೋಷಣ್ ಅಭಿಯಾನ ಯೋಜನಾ ಸಹಾಯಕರಾದ ದಯಾನಂದ್ ಹಾಗೂ ಸಹಾಯಕರಾದ ಆರ್.ಬಿ.ಶಿವಪ್ರಸಾದ್ ಮತ್ತಿತರರು ಇದ್ದರು.

(Visited 4 times, 1 visits today)

Related posts