SSLC ಹಾಲ್ ಟಿಕೆಟ್ : ದೋಷವಿದ್ದಲ್ಲಿ ತಿದ್ದುಪಡಿಗೆ ಅವಕಾಶ

ಬೆಂಗಳೂರು:

      ಎಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರ(ಹಾಲ್ ಟಿಕೆಟ್)ಗಳಲ್ಲಿ ಲೋಪದೋಷವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಡಿ.31ವರೆಗೂ ಅವಕಾಶ ಕಲ್ಪಿಸಿದೆ.

2019ನೇ ಸಾಲಿನ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್‌ಲೋಡ್ ಹಾಗೂ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಸೂಚನೆ ನೀಡಿದ್ದಾರೆ.

      ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿದ್ದು, ಡಿಸೆಂಬರ್ 31ರೊಳಗೆ ಲೋಪದೋಷಗಳನ್ನು ಗುರುತಿಸಿ ಸರಿ ಪಡಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಎಸ್ ಎಸ್ ಎಲ್ ಸಿ ಬೋರ್ಡ್ ಸೂಚಿಸಿದೆ.
      ಶಾಲಾ ಆಡಳಿತ ಮಂಡಳಿಗೆ ಬೋರ್ಡ್  ವೆಬ್ ಸೈಟ್ ನ ಪಾಸ್ ವರ್ಡ್ ನೀಡಲಾಗಿದ್ದು, ಅದರಲ್ಲಿ ಲಾಗಿನ್ ಆಗಿ ತಪ್ಪುಗಳಿದ್ದರೇ ಸರಿ ಪಡಿಸುವ ಅವಕಾಶ ಕಲ್ಪಿಸಲಾಗಿದೆ, ವೆಬ್ ಸೈಟ್ ನಲ್ಲಿ 9 ವರ್ಗಗಳಿದ್ದು, ಅಭ್ಯರ್ಥಿಯ ಹೆಸರು, ಪೋಷಕರು ಹೆಸರು, ಹುಟ್ಟಿದ ದಿನಾಂಕ, ಲಿಂಗ, ಧರ್ಮ, ವಿದ್ಯಾರ್ಥಿಯ ಭಾವಚಿತ್ರ, ಅಭ್ಯರ್ಥಿಯ ದೈಹಿಕ ಸ್ಥಿತಿ ಗಳ ಬಗ್ಗೆ ಏನಾದರೂ ಲೋಪದೋಷಗಳಿದ್ದರೇ ಸರಿ ಪಡಿಸಿಕೊಳ್ಳಬಹುದಾಗಿದೆ.

      ರಾಜ್ಯದ ಎಲ್ಲ ಸರಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನಿತ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ ಅಭ್ಯರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ, ಡಿ.31ರೊಳಗೆ ತಿದ್ದುಪಡಿ ಮಾಡಿದ ಮಾಹಿತಿಯನ್ನು ಅಪ್‌ಲೋಡ್ ಮಾಡುವಂತೆ ಸೂಚಿಸಿದೆ.

      ಪ್ರತಿ ವರ್ಷವೂ ಅಭ್ಯರ್ಥಿಗಳ ಸಹಿಯಲ್ಲಿ ಪ್ರಮುಖ ತಪ್ಪುಗಳು ಕಂಡು ಬರುತ್ತಿವೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೊನಯ ಕ್ಷಣದಲ್ಲಿ ಬದಲಾವಣೆ ಮಾಡಲು ಸಾಧ್ಯವಾಗದ ಕಾರಣ ಮುಂಚೆಯೇ ಲೋಪದೋಷಗಳನ್ನು ಸರಿ ಪಡಿಸಿಕೊಳ್ಳಲು ಮಂಡಳಿ ಅವಕಾಶ ಕಲ್ಪಿಸಿಕೊಡಲಾಗಿದೆ.

      14,796 ಶಾಲೆಗಳ ಪೈಕಿ 7328 ಶಾಲೆಗಳು ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ್ದು, 7458 ಶಾಲೆಗಳು ಡೌನ್‌ಲೋಡ್ ಬಾಕಿ ಉಳಿಸಿಕೊಂಡಿವೆ. ಶಾಲಾ ಆಡಳಿತ ಮಂಡಳಿಗಳು www.kseesb.kar.nic.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

(Visited 47 times, 1 visits today)

Related posts