ಬಿ.ಸತ್ಯನಾರಾಯಣ್ ನಿಧನಕ್ಕೆ ಬಿ.ಸುರೇಶ್‍ಗೌಡ ಸಂತಾಪ

ತುಮಕೂರು:

      ಕಳೆದ 3 ದಶಕಗಳಿಂದ ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ರಾಗ-ದ್ವೇಷಗಳಿಲ್ಲದೆ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸುತ್ತ ಬಂದಿದ್ದ ಶ್ರೀಯುತ ಬಿ.ಸತ್ಯನಾರಾಯಣರವರು ಎಪಿಎಂಸಿ ಸದಸ್ಯರು ಮತ್ತು ಅಧ್ಯಕ್ಷರಾಗುವ ಮುಖೇನ ರಾಜಕೀಯ ಜೀವನಕ್ಕೆ ಕಾಲಿಟ್ಟು ಕಳಂಕ ರಹಿತ ರಾಜಕಾರಣಿಯಾಗಿ ಸರಳ ಮತ್ತು ಸಜ್ಜನಿಕೆಯ ಶಾಸಕರೆಂದು ಗುರುತಿಸಲ್ಪಟ್ಟಿದ್ದರು.

      ಶಾಸಕರಾಗಿ, ಸಚಿವರಾಗಿ, ನಿಗಮ-ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟತೆಯ ಕರಿನೆರಳು ಸೋಕದಂತೆ ತಮ್ಮ ಸಚ್ಛಾರಿತ್ರ್ಯ ರಾಜಕಾರಣವನ್ನ ಮೈಗೂಡಿಸಿಕೊಂಡು ಅಪಾರ ಜನಮನ್ನಣೆಗಳಿಸಿದ ಇವರು ಹಾಲಿ ಜೆಡಿಎಸ್ ಶಾಸಕರಾಗಿ ಅಧಿಕಾರದಲ್ಲದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿ ಅಕಾಲ ಮರಣ ಹೊಂದಿದ್ದಾರೆ.

      ಇವರ ನಿಧನ ವಾರ್ತೆ ಒಂದು ರೀತಿಯ ಬರಸಿಡಿಲಿನಂತೆ ಆ ಕ್ಷೇತ್ರದ ಜನತೆಯನ್ನಲ್ಲದೆ ಇಡೀ ಜಿಲ್ಲೆಯ ಜನರನ್ನ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಇವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ಮತ್ತು ಆ ಕ್ಷೇತ್ರದ ಜನತೆಗೆ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಗ್ರಾಮಾಂತರ ಶಾಸಕರು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಸುರೇಶ್‍ಗೌಡರವರು ಸಂತಾಪ ಸೂಚಿಸಿದ್ದಾರೆ.

(Visited 214 times, 1 visits today)

Related posts