ಕೊರೊನಾ ಸೋಂಕಿತನನ್ನು ಮದ್ಯರಾತ್ರಿ ಆಸ್ಪತ್ರೆಗೆ ಸೇರಿಸಿದ ಸುರೇಶ್ ಗೌಡ

ತುಮಕೂರು : 

    ತುಮಕೂರು ಭಾಜಪ ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಜನಪ್ರಿಯ ಶಾಸಕರಾದ ಶ್ರೀ ಬಿ.ಸುರೇಶ್ ಗೌಡ ರವರು ಮದ್ಯ ರಾತ್ರಿ ಸಮಯದಲ್ಲಿ ಕಣಕುಪ್ಪೆಯ ನರಸಿಂಹಮೂರ್ತಿರವರಿಗೆ ಕೋವಿಡ್ ಬಂದಿರುವ ವಿಷಯ ತಿಳಿದು, ಕೊರಟಗೆರೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೇರಿಸಿ, ತದನಂತರ ಬೆಳಗ್ಗೆ ಹೋಗಿ ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ.

      ವೈದ್ಯರ ಜೊತೆ ಮಾತನಾಡಿ ವೈದ್ಯರಿಗೆ ಪ್ರಶಂಸೆಯನ್ನು ನೀಡಿ, ಇನ್ನು ಏನಾದರೂ ವೆಂಟಿಲೇಟರ್ ಆಕ್ಸಿಜನ್ ಸಮಸ್ಯೆ ಕಂಡಲ್ಲಿ ನನಗೆ ತಕ್ಷಣವೇ ಕರೆ ಮಾಡಿ ತಿಳಿಸಿ, ಅದಕ್ಕೆ ಸೂಕ್ತವಾದ ಸಮಯದಲ್ಲಿ ಒದಗಿಸಿಕೊಡುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.

       ಇದೇ ಸಮಯದಲ್ಲಿ ವೈದ್ಯರಾದ ಪ್ರಕಾಶ್ ಸರ್ ಹಾಗೂ ಕೊರಟಗೆರೆ ಮಂಡಲದ ಭಾರತೀ ಯ ಜನತಾ ಪಾರ್ಟಿಯ ಅಧ್ಯಕ್ಷರಾದ ಪವನ್ ಕುಮಾರ್ ರವರು ಹಾಜರಿದ್ದರು.

(Visited 187 times, 1 visits today)

Related posts

Leave a Comment