ತುಮಕೂರು:
ತುಮಕೂರು ಜಿಲ್ಲೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಸುರೇಶ್‍ಗೌಡರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿರುತ್ತಾರೆ.
ನೂತನ ಜಿಲ್ಲಾಧ್ಯಕ್ಷ ಸ್ಥಾನದ ಸಾರಥ್ಯವನ್ನು ವಹಿಸಿಕೊಳ್ಳಲು ಸನ್ನದ್ಧರಾಗಿರುವ ಬಿ.ಸುರೇಶ್‍ಗೌಡ ಹಿಂದೆ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಎರಡು ಬಾರಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ. ಒಂದು ಬಾರಿ ಮೈಸೂರು ಪೇಪರ್ ಮಿಲ್ಸ್‍ನ (ನಿಗಮ-ಮಂಡಳಿ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರ ಸುರೇಶ್‍ಗೌಡರು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿ ಮರು ನೇಮಕಗೊಂಡಿರುತ್ತಾರೆ. ಇವರ ಆಯ್ಕೆಯನ್ನು ಕಂಡು ಅವರ ಅಭಿಮಾನಿ ಬಳಗ ಸಂಭ್ರಮಿಸಿದೆ.
(Visited 4 times, 1 visits today)