ಅಪಘಾತದಿಂದ ಹೊರಗುತ್ತಿಗೆ ನೌಕರ ಸಾವು: ಶವ ಪುರಸಭೆ ಆವರಣದಲ್ಲಿಟ್ಟುಕೊಂಡು ಪರಿಹಾರಕ್ಕೆ ಒತ್ತಾಯ

ಚಿಕ್ಕನಾಯಕನಹಳ್ಳಿ: ಸುಮಾರು 25 ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಪ್ಪ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಶವವನ್ನು ಪುರಸಭೆಯ ಆವರಣದಲ್ಲಿ ಇಟ್ಟು ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಮಗನಿಗೆ ನೌಕರಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು ಮೃತ ರೇಣುಕಪ್ಪ 50 ವರ್ಷದವನಾಗಿದ್ದು ಸುಮಾರು 25 ವರ್ಷಗಳಿಂದ ಪುರಸಭೆಯ ಟ್ರ್ಯಾಕ್ಟರ್ ಚಾಲಕನಾಗಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿಯಲಾಗಿದೆ ಕಳೆದ ರಾತ್ರಿ ಸುಮಾರು ಎಂಟು ಗಂಟೆ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ನರಸಿಂಹ ಚಿತ್ರಮಂದಿರದ ಎದುರು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈತನಲ್ಲಿ ರಕ್ತಸ್ರಾವ ಹೆಚ್ಚಾಗಿ ರಾತ್ರಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈತನ ಶವವನ್ನು ಪುರಸಭಾ ಕಚೇರಿ ಆವರಣಕ್ಕೆ ಪುರಸಭಾ ಸಿಬ್ಬಂದಿಗಳು ಕರೆತರುವ ಮೂಲಕ ಪ್ರತಿಭಟಿಸಿದರು. ಪಟ್ಟಣದ ಸ್ವಚ್ಛತೆಗೆ 25 ವರ್ಷಗಳಿಂದ ದೇಹವನ್ನು ಸವೆಸಿದ್ದು ಯಾವುದೇ ಪರಿಹಾರ ಇಲ್ಲವಾಗಿದೆ ಈಗಾಗಲೇ ಹೊರಗುತ್ತಿಗೆ ನೌಕರರು ಆತನನ್ನು…

ಮುಂದೆ ಓದಿ...

ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವು: ಆಸ್ಪತ್ರೆಯ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಕುಟುಂಬಸ್ಥರು

ಚಿಕ್ಕನಾಯಕನಹಳ್ಳಿ: ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಚಿಕಿತ್ಸೆ ಪಡೆದಿದ್ದ ಮಹಿಳೆಯು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮಹಿಳೆಯ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ತಾಲ್ಲೂಕಿನ ಮುದ್ದೆನಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಎಂಬುವರು ಹೊಟ್ಟೆನೋವಿನಿಂದಾಗಿ ಪಟ್ಟಣದ ಸಾಯಿಗಂಗಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈಕೆಯನ್ನು ಪರೀಕ್ಷಿಸಿದ ವೈದ್ಯರಾದ ಡಾ. ವಿಜಯರಾಘವೇಂದ್ರರವರು ಕಿಡ್ನಿಯಲ್ಲಿ ಕಲ್ಲಿದೆ ಎಂದು ತಿಳಿಸಿ, ಅದರ ನಿವಾರಣೆಗಾಗಿ ಶಸ್ತ್ರಚಿಕಿÀತ್ಸೆಯ ಅಗತ್ಯವಿದೆ ಎಂದು ಏ.22 ರಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ವಿಶೇಷ ವಾರ್ಡ್‍ಗೆ ದಾಖಲಿಸಿದರು. ಆದರೆ ಸಂಜೆ ಮಹಿಳೆಯ ಆರೋಗ್ಯಸ್ಥಿತಿ ಗಂಭೀರವಾದ ಕಾರಣ ಸದರಿ ವೈದ್ಯರು ಆತುರಾತುರವಾಗಿ, ಆಂಬುಲೆನ್ಸ್‍ನ್ನು ವ್ಯವಸ್ಥೆ ಮಾಡಿ ಮಹಿಳೆಯನ್ನು ತುಮಕೂರಿನ ವಿನಾಯಕ ಆಸ್ಪತೆಗೆ ಕಳುಹಿಸಿದರು. ಅಲ್ಲಿ ಎರಡುದಿನ ಚಿಕಿತ್ಸೆನಡೆಸಿದರೂ ಆಕೆಯು ಚೇತರಿಸಿಕೊಳ್ಳದ ಕಾರಣ ಅಲ್ಲಿನ ವೈದ್ಯರು ತುರ್ತಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದರು. ಕುಟುಂಬಸ್ಥರು ಆಕೆಯನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಏ.24 ರಂದು…

ಮುಂದೆ ಓದಿ...

ಏ.23: ಜಗಜೀವನ್ ರಾಮ್ – ಅಂಬೇಡ್ಕರ್ ಜಯಂತಿ

ಚಿಕ್ಕನಾಯಕನಹಳ್ಳಿ: ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಅವರ ಜಯಂತಿ ಏಪ್ರಿಲ್ 23ರಂದು ನಡೆಯುವ ಕಾರ್ಯಕ್ರಮಕ್ಕೆ ಕನಿಷ್ಠ ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಬೇಕು ಕಾರ್ಯಕ್ರಮದ ಬಗ್ಗೆ ತಾಲೂಕಿನಾದ್ಯಂತ ಹೆಚ್ಚು ಪ್ರಚಾರ ಮಾಡುವ ಮೂಲಕ ಸರ್ವ ಜನಾಂಗವನ್ನು ಈ ಜಯಂತಿಗೆ ಕರೆತರುವ ಪ್ರಯತ್ನ ಆಗಬೇಕು ಎಂದು ತಹಸಿಲ್ದಾರ್ ತೇಜಸ್ವಿನಿ ಹೇಳಿದರು ಇಂದು ತಾಲೂಕು ಕಚೇರಿಯ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಏಪ್ರಿಲ್ 23ರಂದು ಶೆಟ್ಟಿಕೆರೆ ಹೋಬಳಿ ಜೆಸಿಪುರ ಗ್ರಾಮದಲ್ಲಿ ಜಯಂತೋತ್ಸವ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಅಂದು ನಡೆಯುವ ಸಭೆಗೆ ಕೇಂದ್ರ ಸಚಿವ ಶ್ರೀ ನಾರಾಯಣ ಸ್ವಾಮಿಯವರು ಸೇರಿದಂತೆ ಜಿಲ್ಲೆಯ ಶಾಸಕರುಗಳು ಸಚಿವರುಗಳು ಮತ್ತು ಸಮಾಜದ ಮುಖಂಡರುಗಳು ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಪಟ್ಟಣದ ಪುರಸಭೆ…

ಮುಂದೆ ಓದಿ...