ತುಮಕೂರು ದಸರಾ ಆಚರಣೆ ಮಹೋತ್ಸವಕ್ಕೆ ಚಾಲನೆ!!

ತುಮಕೂರು:       ದೃಢ ಮನಸ್ಸು ಇದ್ದವರು ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.       ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಸಮಿತಿ ವತಿಯಿಂದ ನಡೆದ ತುಮಕೂರು ದಸರಾ ಆಚರಣೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವರ್ಷದ 365 ದಿನದಲ್ಲಿ 9 ದಿನ ಬಿಡುವು ಮಾಡಿಕೊಂಡು ನವರಾತ್ರಿ ಹಬ್ಬದ ಆಚರಣೆಯಲ್ಲಿ ಎಲ್ಲರೂ ತೊಡಗಬೇಕು. ಈ 9 ದಿವಸ ಎಲ್ಲವನ್ನು ಮರೆತು ಇಡೀ ನಾಡು ಹಬ್ಬ ಆಚರಿಸಿ ಹರ್ಷವಾಗಲಿ ಬದುಕಲಿ ಎಂಬುದು ನವರಾತ್ರಿ ಆಚರಣೆಯ ಸಂಕೇತ ಮತ್ತು ಶ್ರೇಷ್ಠತೆ ಎಂದು ಅವರು ಹೇಳಿದರು.       ದೃಢ ಮನಸ್ಸು ಹೊಂದಲು ಯೋಗ, ಧ್ಯಾನಗಳಿಂದ ಮಾತ್ರ ಸಾಧ್ಯ. ಹಾಗಾಗಿ…

ಮುಂದೆ ಓದಿ...