ನಿಖಿಲ್ ಇನ್ನು ಚಿಕ್ಕವನು ಅವನ ಹೇಳಿಕೆಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ: ವಾಸಣ್ಣ

ಗುಬ್ಬಿ: ಜೆಡಿಎಸ್ ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಲ್ಲೇನಹಳ್ಳಿ, ಹಂಡನಹಳ್ಳಿ, ನೆರಲೇಕೆರೆ, ತಗ್ಗಿಹಳ್ಳಿ ಪೇರಮಸಂದ್ರ ಹಾಗೂ ದೊಡ್ಡಗುಣಿ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅವರೇ ಹೇಳಿದಾರಲ್ಲ ಜೆಡಿಎಸ್‍ನಿಂದ ಯಾರು ನನ್ನನ್ನು ಕಳುಹಿಸಿರುವವರು ನಾನೇನು ಹೋಗಿದ್ದೀನಾ? ನಾನು ಜನತಾ ದಳದಲ್ಲೇ ಇದ್ದೀನಲ್ಲ, ನಿಖಿಲ್ ಇನ್ನು ಚಿಕ್ಕ ಹುಡುಗ ಅವನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದ ಅವರು ಅವರಪ್ಪನನ್ನು ಹೋಗಿ ಕೇಳುವಂತೆ ಹೇಳಿದ ಅವರು ಅವರಪ್ಪನನ್ನು ಕೇಳಿದರೆ ಸರಿಯಾದ ಉತ್ತರವನ್ನು ಅವರೆ ಕೊಡುತ್ತಾರೆ ಅವನು ಇನ್ನು ಚಿಕ್ಕ ಹುಡುಗ ಅವನ ಮಾತಿಗೆ ಉತ್ತರ…

ಮುಂದೆ ಓದಿ...

ದೇವೇಗೌಡರ ದೂರದೃಷ್ಟಿಯ ಪ್ರತೀಕವೇ ಜನತಾ ಜಲಧಾರೆ:ನಿಖಿಲ್

ಗುಬ್ಬಿ : ದೇವೇಗೌಡರು ದೂರದೃಷ್ಟಿ ಇಟ್ಟುಕೊಂಡು ಜನತಾ ಜಲಧಾರೆ ಕಾರ್ಯಕ್ರಮವನ್ನು ಮಾಡುತ್ತಿದ್ದು ಇದರಿಂದ ರಾಜ್ಯಕ್ಕೆ ಒಳಿತಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಜನತಾ ಜಾಲಧಾರೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮುಂದಿನ ಗುಬ್ಬಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ. ಎಸ್ ನಾಗರಾಜು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ರಾಜ್ಯದ ನೀರಿನ ವಿಚಾರದಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ರಾಜ್ಯದ ಎಲ್ಲ ನದಿಗಳನ್ನು ಒಟ್ಟುಗೂಡಿಸಿ ರಾಜ್ಯದ ಜನರಿಗೆ ನೀರಾವರಿ, ಹಾಗೂ ಕುಡಿಯುವ ನೀರು ಒದಗಿಸಿ ಕೊಡುವಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ 184 ವಿಧಾನಸಭಾ ಕ್ಷೇತ್ರ ಹಾಗೂ 140 ಕೇಂದ್ರಗಳು ಸುತ್ತಿಕೊಂಡು ಗುಬ್ಬಿ ಕ್ಷೇತ್ರಕ್ಕೆ ರಥವು ಆಗಮಿಸಿದೆ 75 ವರ್ಷಗಳ ಕಾಲ ರಾಷ್ಟ್ರೀಯ ಎರಡೂ ಪಕ್ಷಗಳು…

ಮುಂದೆ ಓದಿ...

ರಾಜ್ಯಕ್ಕೆ ನೀರಾವರಿ ಯೋಜನೆ ಕಲ್ಪಿಸಲು ಜನತಾದಳ ಸನ್ನದ್ಧ!

ಚಿಕ್ಕನಾಯಕನಹಳ್ಳಿ ನೆರೆ ರಾಜ್ಯಗಳ ತಕರಾರಿನಿಂದ ಆಗಿ ರಾಜ್ಯಕ್ಕೆ ನೀರಾವರಿ ಯೋಜನೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ರಾಜ್ಯದ ಉದ್ದಗಲಕ್ಕೂ ಈ ಯೋಜನೆಗಳ ಕಾಯಕಲ್ಪ ಕಲ್ಪಿಸಿ ರಾಜ್ಯದ ನದಿಗಳಲ್ಲಿ ನೀರಿನ ಸದ್ಬಳಕೆ ಮಾಡಿಕೊಂಡು ಜನತೆಗೆ ಜಲ ಶಾಮಲಾ ಸಸ್ಯ ಶ್ಯಾಮಲಾವಾಗಿಸಲು ಜಾತ್ಯತೀತ ಜನತಾದಳ ಸನ್ನದ್ಧವಾಗಿದೆ ಎಂದು ಮಾಜಿ ಶಾಸಕ ಸುರೇಶ್ ಬಾಬು ಹೇಳಿದರು ಅವರು ಪಟ್ಟಣದ ಅವರ ನಿವಾಸದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಏಪ್ರಿಲ್ 21ರಂದು ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸುತ್ತಿದ್ದಾರೆ ಅವರ ಅಭಿಮಾನಿಗಳು ಭೇಟಿ ಮಾಡುವ ಅವಕಾಶವಿದೆ ಅಲ್ಲದೆ 22 ಶುಕ್ರವಾರ ಜಾತ್ಯತೀತ ಜನತಾದಳದ ವತಿಯಿಂದ ಜನತಾ ಜಲದಾರೆ ಎಂಬ ಕಾರ್ಯಕ್ರಮವು ಪವಿತ್ರ ಕ್ಷೇತ್ರ ತೀರ್ಥರಾಮೇಶ್ವರ ವಜ್ರ ದಲ್ಲಿ ಗಂಗಾಜಲವನ್ನು ಹೊತ್ತು ತಾಲೂಕಿನಾದ್ಯಂತ ಪ್ರಚಾರ ಮಾಡುವ ರಥ ಯಾತ್ರೆ ಸಾಗಲಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾರ್ಯಕರ್ತರು ಪ್ರತಿ ರಥಯಾತ್ರೆಯು ಆರಂಭಗೊಂಡು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ…

ಮುಂದೆ ಓದಿ...