ಪರಮೇಶ್ವರ ಹೇಳಿಕೆ ದಲಿತ ಜನಾಂಗಕ್ಕೆ ಆಘಾತಕಾರಿ!

ತುಮಕೂರು: ಕೊರಟಗೆರೆಯಲ್ಲಿ 14.04.2022 ರಂದು ಆಚರಿಸಲಾದ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್.ಆಂಬೇಡ್ಕರ್ ರವರ 131ನೇ ಜಯಂತಿ ಕಾರ್ಯಕ್ರಮದಲ್ಲಿ ಮಾಡಲಾದ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವರಾದ ಮಾನ್ಯ ಡಾ.ಜಿ.ಪರಮೇಶ್ವರ್ ರವರ ಭಾಷಣ ರಾಜ್ಯದ ದಲಿತ ಜನಾಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ ಎಂದು ಭಾ.ಜ.ಪಾ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ತಿಳಿಸಿದರು. ನಾನು ಪಿಹೆಚ್‍ಡಿ ಮಾಡಿದ್ದೇನೆ, ವಿದೇಶಗಳಿಗೆ ಹೋಗಿ ಬಂದಿದ್ದೇನೆ, ಹಿಂದೆ ಸಚಿವನಾಗಿದ್ದೆ. ಈಗ ಶಾಸಕನಾಗಿದ್ದೆನೆ. ರಾಜ್ಯದಲ್ಲಿ ಹಿರಿಯ ರಾಜಕಾರಣಿಯಾಗಿದ್ದೇನೆ. ಆದರೂ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದಿಲ್ಲ ದೇವಸ್ಥಾನದ ಒಳಗೆ ಬರುತ್ತಾರೆಂದು, ಮಂಗಳಾರತಿಯನ್ನು ಹಿಡಿದು ದೇವಸ್ಥಾನದ ಹೊರಗಡೆ ನಾನಿರುವ ಜಾಗಕ್ಕೆ ಓಡಿ ಬರುತ್ತಾರೆಂದು ತಿಳಿಸಿ, ಪ್ರಪಂಚದ ಯಾವುದೇ ದೇಶದಲ್ಲಿಯೂ ಇಂತಹ ಕೀಳು ಮಟ್ಟದ ವ್ಯವಸ್ಥೆ ಕೇಳಿಲ್ಲ ಎಂದು ಇಷ್ಟೆಲ್ಲಾ ಅಧಿಕಾರ ನಡೆಸಿರುವ ವ್ಯಕ್ತಿಯಾಗಿದ್ದರೂ, ಏನೂ ಮಡಲಾಗದ ಒಬ್ಬ ಅಸಹಾಯಕ ವ್ಯಕ್ತಿಯಂತೆ ಮಾತನಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ…

ಮುಂದೆ ಓದಿ...

ಕಲ್ಪತರು ನಾಡಿನ ಜನರ ಆಶಾಕಿರಣ ಡಾ.ಜಿ.ಪರಮೇಶ್ವರ

ತುಮಕೂರು : ದೇಶ ಕಂಡಂತಹ ಸಜ್ಜನ ರಾಜಕಾರಣಿ, ಪಕ್ಷದ ನಿಷ್ಠಾವಂತ ನಾಯಕ, ಅಜಾತ ಶತ್ರು ಮಾನವೀಯ ಮೌಲ್ಯಗಳುಳ್ಳ ಕರ್ನಾಟಕ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳು, ಕೊರಟಗೆರೆ ಕ್ಷೇತ್ರದ ಜನಪ್ರಿಯ ಅಭಿವೃದ್ಧಿ ಶಾಸಕರು, ಕೆ.ಪಿ.ಸಿ.ಸಿ. ಅಧ್ಯಕರ ಅವಧಿಯಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮುನ್ನೆಡೆಸಿದವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಹೈಕಮಾಂಡ್‍ನಲ್ಲಿ ಹಲವು ಪ್ರಭಾವಿ ಹುದ್ದೆಗಳನ್ನು ಜವಾಬ್ದಾರಿಯಿಂದ ಮತ್ತು ಸಮರ್ಥವಾಗಿ ನಿರ್ವಹಿಸಿದ ಕಲ್ಪತರು ನಾಡಿನ ಜನರ ಆಶಾಕಿರಣ ಡಾ.ಜಿ.ಪರಮೇಶ್ವರ ರವರ ಜೀವನದ “ಸವ್ಯಸಾಚಿ’’ ಗೌರವ ಗ್ರಂಥ ಬಿಡುಗಡೆ ಸಮಾರಂಭವನ್ನು ಏಪ್ರಿಲ್.10ರ ಭಾನುವಾರದಂದು ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸಾವಿರಾರು ಅಭಿಮಾನಿಗಳು, ಸ್ನೇಹಿತರು ಮತ್ತು ಹಿರಿಯರೊಂದಿಗೆ ಬಿಡುಗಡೆಯಾಗುತ್ತಿದೆ. ಡಾ.ಜಿ.ಪರಮೇಶ್ವರ್ ರವರು ಆಸ್ಟ್ರೇಲಿಯಾದ ಹೆಸರಾಂತ ಅಡಿಲೈಡ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ ಪದವಿಯನ್ನು ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿದಾಗ 1987 ರಲ್ಲಿ ಶಿಕ್ಷಣ ಭೀಷ್ಮರಾದ ಶ್ರೀಯುತ.ಗಂಗಾಧರಯ್ಯ ರವರ ಆಹ್ವಾನದ…

ಮುಂದೆ ಓದಿ...