ಭೀಕರ ಮಳೆಗಾಳಿಗೆ ಮನೆಗಳ ಮೇಲ್ಚಾವಣಿ ಚೆಲ್ಲಾಪಿಲ್ಲಿ: ಗುಮ್ಮಘಟ್ಟದಲ್ಲಿ ಬೀದಿಗೆ ಬಂದ ನೇಕಾರರ ಕುಟುಂಬ

ಪಾವಗಡ: ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದಲ್ಲಿ  ಮಳೆ ಹಾಗೂ ಗಾಳಿ ಆರ್ಭಟಕ್ಕೆ  ಮೂರು ಕುಟುಂಬಗಳ  ಮನೆಯ ಚಾವಣಿ ಶೀಟ್‍ಗಳು ಹಾರಿ ಹೋಗಿದ್ದು, ಮೂರು ಕುಟುಂಬಗಳು ನೇಕಾರ ವೃತ್ತಿಯನ್ನು ಅವಲಂಬಿಸಿದ್ದು, ಈಗ ಎರಡು ಲಕ್ಷಕ್ಕೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದೆ. ದೊಮ್ಮತಮರಿ ಗ್ರಾ.ಪಂ.ವ್ಯಾಪ್ತಿಯ ಗುಮ್ಮಘಟ್ಟ ಗ್ರಾಮದ ಮುರುಳಿ, ಶ್ರೀನಿವಾಸ,  ಶಂಕರ ಅವರಿಗೆ ಸೇರಿದ ಮನೆ ಚಾವಣಿಯ ಸಿಮೆಂಟ್ ಸೀಟುಗಳು ಇದ್ದಕ್ಕಿದ್ದಂತೆ ಬೀಸಿದ ಗಾಳಿಗೆ ಹಾರಿ ಪುಡಿಪುಡಿಯಾಗಿವೆ. ನೇಕಾರರಾದ ಮುರುಳಿ ಮತ್ತು   ಶ್ರೀನಿವಾಸ್ ಅವರ ಮನೆಗಳ ಚಾವಣಿ ಶೀಟ್‍ಗಳು ವಿದ್ಯುತ್ ಮಗ್ಗದ ಮೇಲೆ ಬಿದ್ದಿದ್ದು, ಡಿಸೈನ್ ಕಾರ್ಡ್, ವಾರ್ಪು, ಪಾಗಡಿಗಳು, ರೇಷ್ಮೆ, ಕೋನ್ ಗಳು ಸಂಪೂರ್ಣ ಹಾಳಾಗಿದ್ದು, ಅಪಾರ ನಷ್ಟವಾಗಿದೆ. ಇದರಿಂದಾಗಿ ನೇಕಾರರ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್, ರೆವಿನ್ಯೂ ಸೆಕರೇಟರಿ ಶ್ರೀನಿವಾಸ್, ತಾಲ್ಲೂಕು  ಆರ್ ಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡಿ.ಎನ್. ವಿಶ್ವೇಶ್ವರಯ್ಯ…

ಮುಂದೆ ಓದಿ...

ಪಾವಗಡದಲ್ಲಿ ಆಟೋ ಟಾಪ್ ಮೇಲೆ ವಿದ್ಯಾರ್ಥಿಗಳನ್ನು ಕೂರಿಸಿ ಚಲಾಯಿಸಿದ ಚಾಲಕ

ತುಮಕೂರು: ಆಟೋ ಚಾಲಕನೊಬ್ಬ ಪಾವಗಡದಲ್ಲಿ ಐದಾರು ವಿದ್ಯಾರ್ಥಿಗಳನ್ನು ತುಂಬಿಕೊಂಡ ಚಲಾಯಿಸಿರುವ ಘಟನೆ ನಡೆದಿದೆ. ಒಂದು ಬಸ್​ನಲ್ಲಿ 130ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡಿದ ಖಾಸಗಿ ಬಸ್ ಅಪಘಾತ ಮಾಸುವ ಮುನ್ನವೇ ಈ ಘಟನೆ ನಡೆದಿದೆ. ಖಾಸಗಿ ಬಸ್ ಅಪಘಾತದಲ್ಲಿ ಸುಮಾರು 6 ಜನ ಮೃತಪಟ್ಟಿದ್ದರು. ಆಟೋ ಚಾಲಕರು ಪಾವಗಡದಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡ ಚಲಾಯಿಸುತ್ತಿದ್ದಾರೆ. ಟಾಪ್ ಮೇಲೆಯೂ ವಿದ್ಯಾರ್ಥಿಗಳನ್ನು ಕೂರಿಸಿಕೊಂಡಿದ್ದು, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮುಂದೆ ಓದಿ...

ಭಾರತದ ಅತಿ ದೊಡ್ಡ ಫ್ಯಾಷನ್ ತಾಣ ‘ಟ್ರೆಂಡ್ಸ್’ ಮಳಿಗೆ  ಪಾವಗಡದಲ್ಲಿ ಆರಂಭ

ತುಮಕೂರು: ಭಾರತದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಉಡುಪು ಮತ್ತು ಪರಿಕರಗಳ ವಿಶೇಷ ಸರಣಿಯಾದ ರಿಲಯನ್ಸ್ ರಿಟೇಲ್ನ  ಟ್ರೆಂಡ್ಸ್, ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ತನ್ನ ಹೊಸ ಮಳಿಗೆ ಆರಂಭಿಸಿದೆ. ಟ್ರೆಂಡ್ಸ್ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ಮೆಟ್ರೊ ನಗರಗಳಿಂದ ಹಿಡಿದು ಮಿನಿ ಮೆಟ್ರೋಗಳು, 1ನೇ ಹಾಗೂ 2ನೇ ಶ್ರೇಣಿಯ ಪಟ್ಟಣಗಳು ಮತ್ತು ಅದರಾಚೆಗೆ ಬಲಪಡಿಸುವ ಮೂಲಕ ದೇಶದ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ ನೆಚ್ಚಿನ ಫ್ಯಾಷನ್ ತಾಣವಾಗಿದ್ದು, ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ. ಪಾವಗಡದ ಟ್ರೆಂಡ್ಸ್ ಮಳಿಗೆ, ಆಧುನಿಕ ನೋಟ ಮತ್ತು ವಾತಾವರಣ ಹೊಂದಿದ್ದು, ಈ ಪ್ರದೇಶದ ಗ್ರಾಹಕರಿಗೆ ಸಂಬಂಧಿಸಿದ ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರಕುವ ಮತ್ತು ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಅತ್ಯಾಕರ್ಷಕ ಶ್ರೇಣಿಯ ಉತ್ತಮ ಗುಣಮಟ್ಟದ ಮತ್ತು ಫ್ಯಾಶನ್ ಸರಕುಗಳನ್ನು ಒಳಗೊಂಡಿದೆ. ಈ ಪಟ್ಟಣದ ಗ್ರಾಹಕರು ಟ್ರೆಂಡಿ ವುಮೆನ್ಸ್ ವೇರ್, ಮೆನ್ಸ್ ವೇರ್, ಕಿಡ್ಸ್ ವೇರ್ ಮತ್ತು…

ಮುಂದೆ ಓದಿ...

ಖಾಸಗಿ ಬಸ್ ಅಪಘಾತಕ್ಕೆ ಎಚ್ಚೆತ್ತ ಸರ್ಕಾರ : ಪಾವಗಡ ಮಾರ್ಗಕ್ಕೆ ಏಳು ಬಸ್ ನಿಯೋಜನೆ

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳುವಳ್ಳಿ ಬಳಿ ಭೀಕರ ಖಾಸಗಿ ಬಸ್ ಅಪಘಾತಗೊಂಡು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಈ ದುರಂತದಲ್ಲಿ ಬರೋಬ್ಬರಿ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಸುಮಾರು ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆ ಪ್ರತಿಪಕ್ಷಗಳು ಸರ್ಕಾರದ ಆಡಳಿತದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರವು ಈ ದುರಂತದ ಬಳಿಕ 7 ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಚಾರವನ್ನು, ಈ ಮಾರ್ಗದಲ್ಲಿ ಆರಂಭಿಸಿದೆ. ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆ ಎಸ್ ಆರ್ ಟಿ ಸಿ ಚುರುಕುಗೊಂಡಿದ್ದು, ವೈ ಎನ್ ಹೊಸಕೋಟೆ ಟು ಪಾವಗಡ ಮಾರ್ಗಕ್ಕೆ ಸುಮಾರು 7 ಬಸ್ ಗಳನ್ನು ಸಂಚಾರಕ್ಕಾಗಿ ನಿಯೋಜಿಸಲಾಗಿದೆ.

ಮುಂದೆ ಓದಿ...