ಸಾಯುವ ಅನುಭವ ಪಡೆಯಲು ಟಿಕ್ ಟಾಕ್ : ಯುವಕ ಸಾವು!!

ಕೊರಟಗೆರೆ:

      ಸಾವಿನ ದೃಶ್ಯ ಹಾಗೂ ಅನುಭವ ಪಡೆಯಲು ಯುವಕನೊಬ್ಬ ವಿಷ ಸೇವಿಸಿ ಸಾಯುವ ಮುನ್ನ ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿದ ಗೆಳೆಯರಿಗೆ ಕಳುಹಿಸಿ ಮೃತ ಪಟ್ಟ ಘಟನೆ ತಾಲೂಲೂಕಿನಲ್ಲಿ ನಡೆದಿದೆ.

       ತಾಲೂಕಿನ ಗೌರಗಾನಹಳ್ಳಿ ಗ್ರಾಮದ ಧನಂಜಯ್ಯ(25) ಮೃತ ಪಟ್ಟ ಯುವಕನಾಗಿದ್ದು ಕಳೆದ ರಾತ್ರಿ ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಅನುಭವ ಪಡೆಯಲು ಪ್ರಯತ್ನಿಸುತ್ತಿದ್ದೆನೆ ಅದರ ಅನುಭವ ನನಗೆ ಬೇಕು ಅದನ್ನು ನೀವು ನೋಡಿ ಎಂದು ವಿಡಿಯೋ ಮಾಡಿದ ಯುವಕ ಆಹಾರ ಪದಾರ್ಥಗಳು ಕೆಡದಂತೆ ಇಡುವ ವಿಷಪೂರಿತ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ವಿಡಿಯೋ ನೋಡಿದ ಗ್ರಾಮದ ಸ್ನೇಹಿತರು ತಕ್ಷಣ ಅವನನ್ನು ಚಿಕಿತ್ಸೆಗಾಗಿ ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆ ನಡೆದಿದೆ ಮೃತ ತಾಯಿಯೊಂದಿಗೆ ಇದ್ದು ಕಳೆದ 5 ತಿಂಗಳ ಹಿಂದೆ ವಿವಾಹವಾಗಿದ್ದ ಎನ್ನಲಾಗಿದೆ.

(Visited 5 times, 1 visits today)

Related posts