ಕೋವಿಡ್-19 ನಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದೆ -ಡಾ.ಜಿ.ಪರಂ

ತುಮಕೂರು:

      ಕೋವಿಡ್-19 ರ ರೋಗದ ಹರಡುವಿಕೆಯ ನಂತರ ವಿಶ್ವದಾದ್ಯಂತ ಆಗುತ್ತಿರುವ ಸಾಮಾಜಿಕ ಪರಿಣಾಮ ಮತ್ತು ಬದಲಾವಣೆಗಳು ಶಿಕ್ಷಣ ಕ್ಷೇತ್ರದ ಮೇಲೂ ಬೀರಿದ್ದು, ಪ್ರಾಥಮಿಕ ಶಿಕ್ಞಣದಿಂದ ಉನ್ನತ ಶಿಕ್ಷಣದವರಗೆ ಆನ್‍ಲೈನ್ ಶಿಕ್ಷಣ ಅನಿವಾರ್ಯವಾಗಿರುವುದು ತಂತ್ರಜ್ಞಾನದ ಬೆಳವಣಿಗೆ ಗಮನ ಹರಿಸುವ ಅಗತ್ಯವಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.

      ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವದ ಅಂಗವಾಗಿ ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗ ಮತ್ತು ಟೆಕ್ನಿಕಲ್ ಇನ್ಸಿಟ್ಯೂಟ್ ಪಾರ್ ಇಂಜಿನಿಯರ್ಸ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ ¨ಭವಿಷ್ಯದ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ವಿಜ್ಞಾನದ ಆವಿಷ್ಕಾರದ ಪ್ರವೃತ್ತಿಗಳು’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ಮಟ್ಟದ ವೆಬಿನಾರ್ ಉದ್ಗಾಟಿಸಿ ಅವರು ಮಾತನಾಡಿದರು.

      ಕರೋನ ಸೋಂಕಿನಿಂದ ಜಗತ್ತಿನಲ್ಲಿ ಆಗುತ್ತಿವ ಅನೇಕ ಬದಲಾವಣೆಯ ಪ್ರವೃತ್ತಿಗಳ ವೇದಿಕೆಯನ್ನು ಆನ್‍ಲೈನ್ ತಂತ್ರಜ್ಞಾನ ಒದಿಸುತ್ತಿದೆ. ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡಿದೆ. ಶಿಕ್ಷಣ, ವ್ಯಾಪಾರ-ವಹಿವಾಟು, ಆಚಾರ-ವಿಚಾರಗಳು ಸೇರಿದಂತೆ ಒಟ್ಟಾರೆ ಸಾಮಾಜಿಕ ಬದಲಾವಣೆಗಳಿಗೆ ತಂತ್ರಜ್ಞಾನ ಇಂದು ಕೆಲವು ಪರಿಣಾಮಕಾರಿ ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

      19 ನೇ ಶತಮಾನದಲ್ಲಿ ಆದ ಕೈಗಾರಿಕಾ ಕ್ರಾಂತಿಯ ಮಾದರಿಯಲ್ಲಿಯೇ ಇಂದು ತಂತ್ರಜ್ಞಾನದ ಬದಲಾವಣೆಗಳನ್ನು ಮತ್ತು ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದೆ. ಈ ಕ್ರಾಂತಿಕಾರಕ ಬದಲಾವಣೆಗಳು ದೇಶಿಯವಾಗಿ ತಾಂತ್ರಿಕ ಸಂಶೋಧನೆಗಳನ್ನು ನಡೆಸಲು ಉತ್ತೇಜಿಸಿದೆ ಎಂದ ಡಾ.ಜಿ.ಪರಮೇಶ್ವರ ಅವರು ಜನಜೀವನದಲ್ಲಿ ಸಂಪೂರ್ಣವಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅನುಕೂಲ ಮತ್ತು ಅನಾನುಕೂಲಗಳೆರಡನ್ನು ಅನುಭವಿಸಬೇಕಾಗಿದೆ ಎಂದರು.

      ಆನ್‍ಲೈನ್ ಶಿಕ್ಞಣ ವ್ಯವಸ್ಥೆಯ ಸದ್ಯದ ಪರಿಸ್ಥಿಯಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ, ಯಾವುದೇ ಆರ್ಥಿಕ ಹೊರೆ, ಸಂಚಾರದ ತೊಂದರೆಯಿಲ್ಲದೆ ಕ್ಷಣ ಮಾತ್ರದಲ್ಲಿ ಸಂಪರ್ಕ ಬರಬಹುದು ಮತ್ತು ಚರ್ಚೆ-ಸಂವಾದಗಳನ್ನು ನಡೆಸಬಹದು. ಹಿಂದಿನ ಸಾಂಪ್ರದಾಯಿಕ ಪದ್ದತಿಯಲ್ಲಿನ ತರಗತಿಯಲ್ಲಿಶಿಕ್ಷಕರು-ವಿದ್ಯಾರ್ಥಿಗಳಲ್ಲಿ ನಡೆಯುವ ಮಾತುಕತೆ, ಸಂಬಂಧ, ಆಲೋಚನೆಗಳ ವಿನಿಮಯ, ಪರಿಸರವನ್ನು ಅನುಭವಿಸಲು ಸಾಧ್ಯವಿಲ್ಲ. ಆದರೆ ಸದ್ಯದ ಕಠಿಣ ಪರಿಸ್ಥಿತಿಯಲ್ಲಿ ಪರ್ಯಾತ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಡಾ.ಜಿ.ಪರಮೇಶ್ವರ ಕರೆ ನೀಡಿದರು.

      ಸ್ವಾಗತ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯ ಅಂಶಗಳು ಉನ್ನತ ಶಿಕ್ಞಣದ ಪ್ರಗತಿಗೆ ಅನುಕೂಲವಾಗಿದೆ. ಶಿಕ್ಷಣದಲ್ಲಿ ಹೆಚ್ಚು ಯುವ ಸಮುದಾಯ ಪಾಲ್ಗೊಳುವುದಕ್ಕೆ ಅವಕಾಶ ದೊರಕಿದೆ ಎಂದು ಡಾ.ಜಿ.ಪರಮೇಶ್ವರ ಇದೇ ವೇಳೆ ನುಡಿದರು.

      ಗ್ರಾಮಾಂತರ ಪ್ರದೇಶದ ಯುವಕರಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕಳೆದ 63 ವರ್ಷದಿಂದ ನಡೆಸುತ್ತಿದೆ. ಅದೇ ರೀತಿ ಕಳೆದ 10 ವರ್ಷದಿಂದ ತಾಂತ್ರಿಕ ಶಿಕ್ಷಣದಲ್ಲಿ ಯುವಕರಿಗೆ ಮತ್ತು ಗ್ರಾಮಾಂತರ ಪ್ರದೇಶದವರಿಗೆ ಆದ್ಯತೆ ನೀಡಿದ್ದೇವೆ. ಈ ಕೆಲಸಗಳಿಗೆ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಹೆಚ್ಚು ಒತ್ತು ನೀಡಿದ್ದಾರೆ. ಸರ್ಕಾರಿ, ಖಾಸಗಿ ಮತ್ತು ದೂರ ಶಿಕ್ಷಣ ಮತ್ತು ಅಧೀನ ವಿಶ್ವವಿದ್ಯಾನಿಲಯಗಳನ್ನು ಒಂದೇ ಸೂರಿನಡಿ ತಂದಿರುವುದು ಉನ್ನತ ಶಿಕ್ಷಣ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಹೇಳಿದರು.

      ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಬಾಲಕೃಷ್ಣಶೆಟ್ಟಿ, ಟಿಸಿಎಸ್ ಕಂಪನಿಯ ಉಪಾಧ್ಯಕ್ಷ ಇ.ಎಸ್. ಚಕ್ರವರ್ತಿ, ಟೆಕ್ನಿಕಲ್ ಇನ್ಸಿಟ್ಯೂಟ್ ಪಾರ್ ಇಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಹೇಮಲತಾ, ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ಸಂಯೋಜಕರಾದ ಡಾ.ತಂಗಾದೊರೆ ಅವರು ವೆಬಿನಾರ್ ನಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭವಿಷ್ಯದ ತಂತ್ರಜ್ಞಾನದ ಉಪಯೋಗಗಳು ದೇಶದ ಪ್ರತಿಗೆ ಪೂರಕವಾಗಿರಲಿ ಎಂದು ಆಶಿಸಿದರು.

      ಸಾಹೇ ವಿಶ್ವದ್ಯಾನಿಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಎಂ.ಎಸ್. ರವಿಪ್ರಕಾಶ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ.ಶಿವಕುಮಾರ್ ಅವರು ಉಪಸ್ಥಿತರಿದ್ದರು. ಈ ರಾಷ್ಟ್ರಿಯ ಮಟ್ಟದ ವೆಬಿನಾರ್‍ನಲ್ಲಿ ದೇಶದ ವಿವಿಧೆಡೆಯ 85 ಮಂದಿ ಪ್ರಾಧ್ಯಾಪಕರು ತಮ್ಮ ಸಂಶೋಧನಾ ವಿಷಯಗಳನ್ನು ಮಂಡಿಸಿದರು. 

(Visited 6 times, 1 visits today)

Related posts