ತುಮಕೂರು : ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದ 19 ಮಂದಿ ಪತ್ತೆ!!

ತುಮಕೂರು :

      ಜಿಲ್ಲೆಯಿಂದ ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದ 19 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ವೈದ್ಯಕೀಯ ತಪಾಸಣೆ(ಮೆಡಿಕಲ್ ಸ್ಕ್ರಿನಿಂಗ್)ಗೊಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

      ವೈದ್ಯಕೀಯ ತಪಾಸಣೆಗೊಳಪಡಿಸಿದ 19 ಮಂದಿಯನ್ನು ಐಸೋಲೇಶನ್‍ನಲ್ಲಿಡಲಾಗಿದೆ. ಈವರೆಗೂ ದೆಹಲಿಗೆ ತೆರಳಿದ್ದ 19 ಜನರನ್ನು ಮಾತ್ರ ಪತ್ತೆ ಹಚ್ಚಲಾಗಿದ್ದು, ಮಾರ್ಚ್ 8 ರಿಂದ 20ರವರೆಗೂ ಇನ್ನೂ ಹೆಚ್ಚಿನ ಜನರು ಹೋಗಿರುವ ಸಾಧ್ಯತೆ ಇದೆ.

      ತಬ್ಲಿಘಿ ಜಮಾತ್ ಸಭೆಗೆ ತೆರಳಿದವರ ಬಗ್ಗೆ ಮಾಹಿತಿಯುಳ್ಳ ಪತ್ರಿಕಾ ಮಾಧ್ಯಮದವರಾಗಲಿ ಅಥವಾ ಸಾರ್ವಜನಿಕರಾಗಲಿ ತುರ್ತಾಗಿ ಕಂಟ್ರೋಲ್ ರೂಂ ಸಂಖ್ಯೆ: 0816-2257368ಕ್ಕೆ ಕರೆ ಮಾಡಿ ತಿಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
 

(Visited 5 times, 1 visits today)

Related posts