ಕೊರಟಗೆರೆ


ವಿಶ್ವನಾಯಕ ನರೇಂದ್ರಮೋದಿ ನಾಯಕತ್ವವು ಬಡಜನತೆ ಮತ್ತು ರೈತರ ಪರವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ಪ್ರತಿಮನೆಗೂ ನೇರವಾಗಿ ತಲುಪಿವೆ. ಗ್ರಾಮೀಣ ಭಾಗದ ಯುವಕರೇ ಸ್ವಯಂ ಪ್ರೇರಿತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಪಕ್ಷದ ಗೆಲುವು ಖಚಿತವಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‍ಕುಮಾರ್ ತಿಳಿಸಿದರು.
ಕೊರಟಗೆರೆ ತಾಲೂಕಿನ ಹುಲೀಕುಂಟೆ, ಬೈಚಾಪುರ ಮತ್ತು ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಕತ್ತಿನಾಗೇನಹಳ್ಳಿ, ಹನುಮೇನಹಳ್ಳಿ, ಕೆರೆಯಾಗಳಹಳ್ಳಿ ಮತ್ತು ಬೋಡಬಂಡೇನಹಳ್ಳಿ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊರಟಗೆರೆ ಕ್ಷೇತ್ರದ ಜನತೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದೀರಾ. 2023ಕ್ಕೆ ಬಿಜೆಪಿ ಪಕ್ಷಕ್ಕೆ ಒಮ್ಮೆ ಅಧಿಕಾರ ನೀಡಿದರೇ ಅಧಿವೃದ್ದಿ ಏನೆಂದು ಮಾಡಿ ತೋರಿಸ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದೆ. ಕೊರಟಗೆರೆ ಕ್ಷೇತ್ರದಲ್ಲಿಯು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೇ ಅಭಿವೃದ್ದಿ ತಾನಾಗಿಯೇ ಆಗಲಿದೆ. ನಾನು ಯಾರಿಗೂ ಕೇವಲ ಭರವಸೆಯ ಆಶ್ವಾಸನೆಯ ನಾಟಕ ಆಡೋದಿಲ್ಲ ಎಂದು ತಿಳಿಸಿದರು.
ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಅರಿವು ಮೂಡಿಸುವ ಕೆಲಸ ಕಾರ್ಯಕರ್ತರಿಂದ ಪ್ರತಿನಿತ್ಯ ನಡೆಯುತ್ತಿದೆ. ಸಾವಿರಾರು ಯುವಕರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ ವಾರಕ್ಕೊಮ್ಮೆ ಬಿಜೆಪಿ ಪಕ್ಷದ ಸೇರ್ಪಡೆ ಸಮಾರಂಭ ನಡೆಯಲಿದೆ. 2023ಕ್ಕೆ ಕೊರಟಗೆರೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ..
ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಅಂಕಿಅಂಶದ ಮಾಹಿತಿ ಒಳಗೊಂಡ 2023ನೇ ನೂತನ ವರ್ಷದ ಕ್ಯಾಲೇಂಡರ್ ಬಿಡುಗಡೆಯು ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್‍ಕುಮಾರ್ ನೇತೃತ್ವದಲ್ಲಿ ಬೋಡಬಂಡೇನಹಳ್ಳಿ ಗ್ರಾಮದಲ್ಲಿ ನಡೆಯಿತು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನೂತನ ವರ್ಷದ ಕ್ಯಾಲೆಂಡರ್‍ರನ್ನು ಪ್ರತಿಮನೆಗೂ ತಲುಪಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗುರುಧತ್, ಜಿಲ್ಲಾ ಖಜಾಂಚಿ ಹನುಮಂತರಾಜು, ರೈತಮೋರ್ಚ ಅಧ್ಯಕ್ಷ ಮುಕ್ಕಣ್ಣಪ್ಪ, ಮಂಡಲ ಯುವಧ್ಯಕ್ಷ ಅರುಣ್, ಹೋಬಳಿ ಅಧ್ಯಕ್ಷ ದಯಾನಂದ, ಲೊಕೇಶ್, ಮುಖಂಡರಾದ ದಾಡಿವೆಂಕಟೇಶ್, ರಘುಕುಮಾರ್, ಆನಂದ್, ನಂಜುಂಡಯ್ಯ, ಗೋಪಾಲಕೃಷ್ಣ, ಗಿರೀಶ್, ಅರುಣ್, ಗಿರೀಶ್‍ಗೌಡ, ನಯನ್, ದರ್ಶನ್, ಹರೀಶ್, ಲಿಂಗರಾಜು, ಸೇರಿದಂತೆ ಇತರರು ಇದ್ದರು.

(Visited 1 times, 1 visits today)