ಪೊಲೀಸರ ಮೇಲಿನ ಕಾಳಜಿಗೆ ಅಭಿನಂದನೆ

ತುಮಕೂರು:

      ಸಾರ್ವಜನಿಕ ಸೇವೆಯಲ್ಲಿ ಸದಾ ತೊಡಗಿಕೊಂಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಮುಖಗವಸು, ಕೈಗವಸು ಹಾಗೂ ಸ್ಯಾನಿಟೈಜರ್‍ಗಳನ್ನು ನೀಡುವ ಮೂಲಕ ಪೊಲೀಸರ ಮೇಲೆ ಕಾಳಜಿ ತೋರಿರುವ ಹೆಗ್ಗೆರೆ ಗ್ರಾಮಸ್ಥರಿಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಅಭಿನಂದನೆ ಸಲ್ಲಿಸಿದರು.

      ತಮ್ಮ ಠಾಣೆಯಲ್ಲಿ ಗುರುವಾರ ಹೆಗ್ಗೆರೆ ಗ್ರಾಮಸ್ಥರಿಂದ ಮುಖಗವಸು, ಕೈಗವಸು ಹಾಗೂ ಸ್ಯಾನಿಟೈಜರ್‍ಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಹಾಗೂ ರಕ್ಷಣಾ ದೃಷ್ಟಿಯಿಂದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಹೆಗ್ಗೆರೆ ಗ್ರಾಮಸ್ಥರು ರಕ್ಷಣಾ ಸಾಮಗ್ರಿಗಳನ್ನು ನೀಡಿರುವುದು ಅಭಿನಂದನಾರ್ಹ ಎಂದರಲ್ಲದೆ ಕೊರೋನಾ ಕಾರ್ಯಾಚರಣೆಯಲ್ಲಿ ಪೊಲೀಸರೊಂದಿಗೆ ನಾವಿದ್ದೇವೆ ಎಂಬ ಗ್ರಾಮಸ್ಥರ ಕಾಳಜಿಯು ನಮಗೆ ಇನ್ನಷ್ಟು ಸ್ಫೂರ್ತಿದಾಯಕವಾಗಿದೆ ಎಂದರು.

      ಈ ಸಂದರ್ಭದಲ್ಲಿ ಹೆಗ್ಗೆರೆ ಗ್ರಾಮದ ಮುಖಂಡರಾದ ಚಂದ್ರಶೇಖರ್‍ಗೌಡ, ಕೃಷ್ಣಯ್ಯ, ಭೋಜಣ್ಣ, ಸೋಮಶೇಖರ್ ಆಲ್ಯಾಳ್, ಆನಂದ್‍ಕುಮಾರ್, ಮಂಜುನಾಥ್, ರಂಗಲಕ್ಷ್ಮಿ, ಜಯಶ್ರೀ, ಶೈಲಜಾ, ಠಾಣೆಗೆ ಹೊಸದಾಗಿ ಬಂದಿರುವ ಮತ್ತೊಬ್ಬ ಸಬ್‍ಇನ್ಸ್‍ಪೆಕ್ಟರ್ ಚಂದ್ರಕಲಾ, ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಕಿಲಾರಿ ಬಾಬು, ಪೊಲೀಸ್ ಸಿಬ್ಬಂದಿಗಳಾದ ಬರಕತ್ ಅಲಿ, ಪ್ರಾಣೇಶ್, ನಂಜುಂಡೇಗೌಡ, ಮತ್ತಿತರರು ಹಾಜರಿದ್ದರು.

(Visited 27 times, 1 visits today)

Related posts