ಅತಂತ್ರ ಸ್ಥಿತಿಯಲ್ಲಿ ಅಡುಗೆ ಕೆಲಸಗಾರರ ಬದುಕು!

ಪಾವಗಡ:

      ತಾಲ್ಲೂಕಿನ ಸಮಾಜಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಅಧಾರದ ಮೇಲೆ ವಸತಿನಿಲಯಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಸುಮಾರು 60 ಅಡುಗೆ ಕೆಲಸಗಾರರು ಬದುಕು ಅಕ್ಷರಶಃ ಬೀದಿಗೆ ಬಂದು ತಲುಪಿದೆ, ಕಾರಣ ಕಳೆದ 1 ವರ್ಷದದಿಂದ ಇವರು ಮಾಡಿದ ಕೆಲಸಕ್ಕೆ ಸಮಾಜಕಲ್ಯಾಣ ಇಲಾಖೆ ಸಂಬಳ ನೀಡಿಲ್ಲಾ, ಇದರಿಂದ ಇವರು ಜೀವನ ಸಾಗಿಸುವುದು ದುಸ್ಥರವಾಗಿದೆ.

      ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಅನೇಕ ಬಾರಿ ಹೋರಾಟಗಳು ಮಾಡಿದ್ದರೂ ಸಹ ನಮ್ಮ ಮನವಿಗೆ ಇಲಾಖೆ ಕ್ಯಾರೆ ಎನ್ನುತ್ತಿಲ್ಲಾ ಎಂದು ಅಡುಗೆ ಸಹಾಯಕರು ಮಾಧ್ಯಮದ ಬಳಿ ಬುಧವಾರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅವಲತ್ತುಕೊಂಡಿದ್ದಾರೆ.

      ಈ ವೇಳೆ ಸಂಘದ ಮುಖಂಡೆ ಪದ್ಮಾವತಿ ಮಾತನಾಡುತ್ತಾ, ಕಳೆದ ಮಾರ್ಚ 21 ರಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ನಮ್ಮ ಸಂಸಾರ ನಿರ್ವಹಣೆಯಾಗದೇ ನಮ್ಮ ಬದುಕೆ ಲಾಕ್ ಡೌನ್ ಆಗಿದೆ, ಇತ್ತಕಡೆ ಕೆಲಸವೂ ಇಲ್ಲಾ, ಸಂಬಳವೂ ಇಲ್ಲಾ, 1 ವರ್ಷದಿಂದ ನಮಗೆ ಸಂಬಳ ನೀಡಿಲ್ಲ. ಇಲಾಖೆಯಲ್ಲಿ ಬಹುತೇಕ ಎಸ್.ಸಿ.ಮತ್ತು ಎಸ್.ಟಿ. ಹಾಗೂ ವಿಧವಾ ಮಹಿಳೆಯರು ಕೆಲಸ ಮಾಡುತ್ತಿದ್ದು, ಇದನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದು, 1 ವರ್ಷದಿಂದ ನಮಗೆ ಸಂಬಳ ನೀಡದೇ ಇದ್ದು ನಮ್ಮ ಕುಟುಂಬ ನಿರ್ವಹಣೆಗೆ ಕಷ್ಟಕರವಾಗುತ್ತಿದೆ, ಅನೇಕ ಬಾರಿ ಇಲಾಖಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು ನಮಗೆ ನ್ಯಾಯ ಸಿಗುತ್ತಿಲ್ಲಾ ಎಂದು ದೂರಿದರು.
ಅಡುಗೆ ಸಹಾಯಕ ನಾಗೇಂದ್ರ ಮಾತನಾಡಿ, ವಸತಿನಿಲಯಗಳಲ್ಲಿ ನಿತ್ಯ ಮಕ್ಕಳಿಗೆ ಬೆಳಿಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ತಯಾರಿಸಿ ಅವರಿಗೆ ಉಣಬಡಿಸಿ ಮತ್ತು ವಸತಿನಿಲಯಗಳನ್ನು ಸ್ವಚ್ಛತೆ ಮಾಡುತ್ತೇವೆ, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗ0ಟೆಯವರೆಗೂ ಕೆಲಸ ಮಾಡುತ್ತೇವೆ. ನಿತ್ಯ ಶ್ರಮವಹಿಸಿ ದುಡಿಯುವ ನಮಗೆ ಸಂಬಳ ನೀಡುತ್ತಿಲ್ಲ ಹಾಗೂ ಹೊರಗುತ್ತಿಗೆಯ ಕಂಪನಿಗಳು ಇಲ್ಲಿವರೆಗೂ ನಮ್ಮ ಪಿ.ಎಫ್ ಹಣ ನೀಡಿಲ್ಲಾ. ಅಧಿಕಾರಿಗಳನ್ನು ಸಂಬಳ ಕೇಳಿದರೆ ಕೆಲಸ ಮಾಡಿದರೆ ಮಾಡಿ ಇಲ್ಲವೆಂದರೆ ಬಿಟ್ಟುಹೋಗಿ ಎಂದು ಅಧಿಕಾರಿಗಳು ಗದರಿಸುತ್ತಾರೆ. ಮೊನ್ನೆ ಪಾವಗಡಕ್ಕೆ ಬಂದಿದ್ದ ಸಮಾಜ ಕಲ್ಯಾಣಾ ಇಲಾಖಾ ಸಚಿವರೂ ಹಾಗೂ ಉಪಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ ಅದರೂ ಪ್ರಯೋಜನವಾಗಿಲ್ಲ. ಲಾಕ್‍ಡೌನ್ ಆದ ಹಿನ್ನಲೆಯಲ್ಲಿ ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಪೂಜ್ಯ ಜಪಾನಂದ ಸ್ವಾಮೀಜಿಗಳು ಸೇರಿದಂತೆ ಅನೇಕ ದಾನಿಗಳು ಬಡವರಿಗೆ ಕೂಲಿಕಾರ್ಮಿಕರಿಗೆ ಅಹಾರ ಪದಾರ್ಥಗಳನ್ನು ವಿತರಿಸಿದ್ದಾರೆ. ಅದರೆ ನಮ್ಮ ನೆರವಿಗೆ ಯಾರು ಮುಂದಾಗಿಲ್ಲ್ಲ ಎಂದು ಅವಲತ್ತುಕೊಂಡಿದ್ದಾರೆ.

      ಈ ವೇಳೆ ಅಶ್ವಥ್, ಮಾರಕ್ಕ, ಮಂಜುಳಮ್ಮ, ಮೂರ್ತಿ, ಅಕ್ಕಮ್ಮ, ಮಾರಪ್ಪ, ಕೆ.ಎನ್.ನಾಗಭೂಷಣ್,ಕೆ.ಎನ್. ನವೀನ್‍ಕುಮಾರ್, ಗೋವಿಂದ ಮತ್ತಿತರರು ಹಾಜರಿದ್ದರು.

(Visited 8 times, 1 visits today)

Related posts