ತುಮಕೂರು : ಸ್ಮಾರ್ಟ್ ಸಿಟಿಗೆ ಸಾರ್ವಜನಿಕ ಸಂಪರ್ಕ ಅಧಿಕಾರಿ

ತುಮಕೂರು:

       ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಮಾದ್ಯಮದವರಿಗೆ ಮಾಹಿತಿ ಮತ್ತು ಸ್ಪಷ್ಟತೆ ನೀಡಲು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಛೇರಿಯಲ್ಲಿ ಪ್ರಸ್ತುತ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಎಸ್.ಬಿ ಅವರನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದ್ದು, ಸಹಾಯಕರಾಗಿ ಕಾರ್ಯನಿರ್ವಹಿಸಲು ಪ್ರಥಮ ದರ್ಜೆ ಕಾರ್ಯನಿರ್ವಾಹಕ ಸಹಾಯಕರಾಗಿರುವ ಆರ್.ಮನೋಹರ್ ಗೌಡ ಅವರಿಗೆ ಸೂಚಿಸಲಾಗಿದೆ. ಸ್ಮಾರ್ಟ್ ಸಿಟಿಯ ಯಾವುದೇ ರೀತಿಯ ಮಾಹಿತಿ ಪಡೆಯಲು ಮಂಜುನಾಥ್ ಎಸ್.ಬಿ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೊ:9686375507. ಆರ್.ಮನೋಹರ್ ಗೌಡ, ಕಾರ್ಯನಿರ್ವಾಹಕ ಸಹಾಯಕರು(ಪ್ರಥಮ ದರ್ಜೆ) ಮೊ: 9916920418ಕ್ಕೆ ಸಂಪರ್ಕಿಸಬಹುದಾಗಿದೆ ಪ್ರಕಟಣೆ ತಿಳಿಸಿದೆ.  

(Visited 4 times, 1 visits today)

Related posts