ತುಮಕೂರು : ಪಿಡಬ್ಲ್ಯೂಡಿ ನಗರ ಉಪವಿಭಾಗ ಪ್ರಾರಂಭ

ತುಮಕೂರು:

      ತುಮಕೂರು ನಗರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿ ಒಳಗೊಂಡತೆ, ಯಾದಗಿರಿ ಜಿಲ್ಲೆಯ ದೇವದುರ್ಗ ಕೆಶಿಫ್ ಕಚೇರಿಯನ್ನು ಪರಿವರ್ತಿಸಿ, ಲೋಕೋಪಯೋಗಿ ತುಮಕೂರು ನಗರ ಉಪವಿಭಾಗವನ್ನು ಹೊಸದಾಗಿ ಸೃಜಿಸಲಾಗಿದ್ದು, ಈ ಉಪವಿಭಾಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿರವರು ಉದ್ಘಾಟಿಸಿದರು.

      ತುಮಕೂರು ನಗರ, ಗ್ರಾಮಾಂತರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡತೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದು, ತುಮಕೂರು ಉಪವಿಭಾಗದಲ್ಲಿ ಕಾರ್ಯಭಾರ ಹೆಚ್ಚಿದ್ದರಿಂದ, ಸರ್ಕಾರ ತುಮಕೂರು ನಗರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿ ಒಳಗೊಂಡತೆ, ಯಾದಗಿರಿ ಜಿಲ್ಲೆಯ ದೇವದುರ್ಗ ಕೆಶಿಫ್ ಕಚೇರಿಯನ್ನು ಪರಿವರ್ತಿಸಿ ತುಮಕೂರು ನಗರ ಉಪವಿಭಾಗವನ್ನು ಸೃಜಿಸಿ ಆದೇಶ ಹೊರಡಿಸಿದೆ.

      ಇದರಿಂದಾಗಿ ತುಮಕೂರು ನಗರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿ ಒಳಗೊಂಡ ನಗರ ಉಪವಿಭಾಗವು ಇಲಾಖೆ ವತಿಯಿಂದ ನಿರ್ವಹಿಸುವ ಕಟ್ಟಡ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಸೃಜಿಸಿರುವ ಈ ಉಪವಿಭಾಗವು ನಗರದ ಪಿಡಿಬ್ಲ್ಯೂಡಿ ಕಚೇರಿ ಆವರಣದಲ್ಲಿನ ಮತ್ತೊಂದು ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದ್ದು ಕಾರ್ಯಪಾಲಕ ಎಂಜನಿಯರ್ ಬಿ.ಪಿ.ಸಂಜೀವ್ ರಾಜು ತಿಳಿಸಿದ್ದಾರೆ.

       ಹೊಸ ಕಚೇರಿಗೆ ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಅಧೀಕ್ಷಕ ಎಂಜನಿಯರ್ ದುರ್ಗಪ್ಪ, ಕಾರ್ಯಪಾಲಕ ಎಂಜನಿಯರ್ ಬಿ.ಪಿ.ಸಂಜೀವ್‍ರಾಜು, ಕೆಇಬಿ ಎಸ್.ಸಿ. ಗೋವಿಂದಪ್ಪ, ಎಇಇ ಹರೀಶ್, ಎಂಜಿನಿಯರ್‍ಗಳಾದ ಸಿ.ಸಿದ್ಧಪ್ಪ, ಶಂಭುಕುಮಾರ್ ಸೇರಿದಂತೆ ಇತರರು ಇದ್ದರು.

(Visited 82 times, 1 visits today)

Related posts