ತುಮಕೂರು : ಆ.2ರವರೆಗೆ ಪ್ರತಿ ಭಾನುವಾರ ಮದ್ಯ ಮಾರಾಟ ನಿಷೇಧ!!

 ತುಮಕೂರು :

      ಕೋವಿಡ್-19ರ ಸೋಂಕು ನಿಯಂತ್ರಣ ಸಂಬಂಧ ಚಾಲ್ತಿಯಲ್ಲಿರುವ ಮುಂಜಾಗ್ರತಾ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜುಲೈ 5 ರಿಂದ ಆಗಸ್ಟ್ 2ರವೆರೆಗಿನ ಎಲ್ಲಾ ಭಾನುವಾರದಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

      ನಿಷೇಧಾವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯದಂಗಡಿಗಳನ್ನು ಮುಚ್ಚಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಾಲಿ ಇರುವ ಮದ್ಯದಂಗಡಿಗಳ ಮುಚ್ಚುವ ವೇಳೆಯನ್ನು ರಾತ್ರಿ 9 ಗಂಟೆಗೆ ಬದಲಾಗಿ ರಾತ್ರಿ 8 ಗಂಟೆಗೆ ನಿಗಧಿಪಡಿಸಿ ಅವರು ಆದೇಶಿಸಿದ್ದಾರೆ.

(Visited 7 times, 1 visits today)

Related posts